ಗೋಣಿಕೊಪ್ಪಲು, ಜ.೧: ಸಾಲು ಸಾಲಾಗಿ, ಬಣ್ಣ ಬಣ್ಣದ ಉಡುಪು ಧರಿಸಿ ಆಗಮಿಸಿದ ಮಹಿಳೆಯರು, ಆಗಮಿಸುವ ಮಹಿಳೆಯರನ್ನು ಆತ್ಮೀಯವಾಗಿ ಸ್ವಾಗತಿಸುವ ಪಂಚಾಯಿತಿ ಅಧಿಕಾರಿ ಹಾಗೂ ಸಿಬ್ಬಂದಿಗಳು, ಸಭಾಂಗಣದಲ್ಲಿ ಮಹಿಳೆಯರು ತಮ್ಮ ತಮ್ಮ ಆಸನದಲ್ಲಿ ಆಸೀನರಾಗುತ್ತಿದ್ದಂತೆಯೇ ಇತ್ತ ವೇದಿಕೆಗೆ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕಾರ್ಯಕ್ರಮದ ವಿಶೇಷತೆ ಕುರಿತು ವಿಷಯ ಮಂಡನೆ ಮಾಡಲು ಆರಂಭಿಸಿದರು. ಇಂತಹ ಅಪರೂಪದ ಕಾರ್ಯಕ್ರಮ ನಡೆದದ್ದು ಗಡಿಭಾಗವಾದ ಕುಟ್ಟ ಸಮೀಪದ ಕೆ.ಬಾಡಗ ಗ್ರಾಮ ಪಂಚಾಯಿತಿಯಲ್ಲಿ ಸರ್ಕಾರದ ಅನೇಕ ಕಾರ್ಯಕ್ರಮಗಳು ಕೇವಲ ಕಾಟಾಚಾರಕ್ಕೆ ಸೀಮಿತವಾಗುವುದನ್ನು ನಾವು ಗಮನಿಸಿದ್ದೇವೆ. ಆದರೆ ಈ ಪಂಚಾಯತಿ ಗ್ರಾಮೀಣ ಪ್ರದೇಶದಲ್ಲಿದ್ದರೂ ಎಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಿದೆ.
ಗ್ರಾಮದಲ್ಲಿರುವ ಸ್ತಿçà ಶಕ್ತಿ, ಸ್ವ ಸಹಾಯ, ಮಹಿಳಾ ಸಂಘ,ಆಶಾ ಕಾರ್ಯಕರ್ತೆಯರು,ಅಂಗನವಾಡಿ ಸಹಾಯಕರು,ಆರೋಗ್ಯ ಸಹಾಯಕರು ಸೇರಿದಂತೆ ನೂರಾರು ಮಂದಿ ಪಂಚಾಯತಿ ಆಯೋಜಿಸಿದ್ದ ಮಹಿಳಾ ಗ್ರಾಮ ಸಭೆಗೆ ಆಗಮಿಸಿದ್ದರು.
ಸಭೆಯಲ್ಲಿ ಹಿರಿಯ ನ್ಯಾಯವಾದಿಗಳು, ತಾಲೂಕು ಮಟ್ಟದ ಅಧಿಕಾರಿಗಳು, ಹೆಸರಾಂತ ಸಂಪನ್ಮೂಲ ವ್ಯಕ್ತಿಗಳು ಆಗಮಿಸಿ ಪಂಚಾಯತಿಯ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ,ಮಹಿಳಾ ದೌರ್ಜನ್ಯ, ಬಾಲ ಕಾರ್ಮಿಕ ಪದ್ಧತಿ, ಮಹಾತ್ಮಗಾಂಧಿ ರಾಷ್ಟಿçÃಯ ಉದ್ಯೋಗ ಖಾತ್ರಿ ಯೋಜನೆ, ಉಚಿತ ಕಾನೂನು ನೆರವು, ಪೌಷ್ಟಿಕ ಆಹಾರ,ಮಕ್ಕಳ, ಬಾಣಂತಿಯರ ಆರೋಗ್ಯ ಸೇರಿದಂತೆ ಇನ್ನಿತರ ಪ್ರಮುಖ ವಿಷಯಗಳ ಬಗ್ಗೆ ವಿಷಯ ತಜ್ಞರು ವಿಷಯ ಮಂಡನೆ ಮಾಡಿ ಜಾಗೃತಿ ಮೂಡಿಸಿದರು.
ಗ್ರಾಮದ ಅಭಿವೃದ್ಧಿಗೆ ಮಹಿಳೆಯರು ನೀಡಬಹುದಾದ ಕೊಡುಗೆಗಳ ಬಗ್ಗೆ ಪಿಡಿಒ ಕಳ್ಳಿಚಂಡ ಪೂಣಚ್ಚ ಸುದೀರ್ಘವಾಗಿ ವಿಷಯ ಮಂಡಿಸಿ,ಗ್ರಾಮೀಣ ಭಾಗದಲ್ಲಿರುವ ಪಂಚಾಯತಿಯನ್ನು ಅಭಿವೃದ್ಧಿಯಲ್ಲಿ ಮೊದಲ ಸ್ಥಾನಕ್ಕೆ ತರಲು ನಿರ್ವಹಿಸಬೇಕಾದ ಚಟುವಟಿಕೆಗಳ ಬಗ್ಗೆ ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಕಳಕಂಡ ಬಿ.ಮುತ್ತಪ್ಪ ಮಾತನಾಡಿ ಮಹಿಳಾ ದೌರ್ಜನ್ಯ, ಬಾಲ ಕಾರ್ಮಿಕ ಪದ್ದತಿ ತಡೆ ಇವುಗಳ ಬಗ್ಗೆ ತಿಳುವಳಿಕೆ ನೀಡುವ ಮೂಲಕ ಸರ್ಕಾರ ನೊಂದ ಮಹಿಳೆಯರಿಗೆ ಉಚಿತ ಕಾನೂನು ನೆರವು ನೀಡುವ ಬಗ್ಗೆ ಮಾಹಿತಿ ನೀಡಿದರು.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿ ಗುರುಶಾಂತಪ್ಪ ಮಾತನಾಡಿ ಇಲಾಖೆಯ ವತಿಯಿಂದ ನೀಡಲಾಗುವ ಶೈಕ್ಷಣಿಕ ಭತ್ಯೆ,ನಿರುದ್ಯೋಗ ಭತ್ಯೆ, ಪೌಷ್ಟಿಕ ಆಹಾರ, ವಿದ್ಯಾರ್ಥಿ ವೇತನ, ಮನೆ ನಿರ್ಮಾಣ, ಹಾಡಿಯ ಜನರಿಗೆ ಮೂಲಭೂತ ಸೌಕರ್ಯ, ಇನ್ನಿತರ ವಿಷಯಗಳ ಬಗ್ಗೆ ಮಾತನಾಡಿ ಮಹಿಳೆಯರಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ, ಆ ನಿಟ್ಟಿನಲ್ಲಿ ಮಹಿಳೆಯರಿಗಾಗಿಯೇ ಇಂತಹ ಅಪರೂಪದ ಕಾರ್ಯಕ್ರಮ ರೂಪಿಸಲಾಗಿದೆ ಮಹಿಳೆಯರು ತಮ್ಮ ಹಕ್ಕುಗಳನ್ನು ಪಡೆಯಬೇಕು ಎಂದು ಕರೆ ನೀಡಿದರು.
ಕಂದಾಯ ಇಲಾಖೆಯ ಅಧಿಕಾರಿ ಪೂಣಚ್ಚ ಮಾತನಾಡಿ ವಾರದ ಒಂದು ದಿನ ಗ್ರಾ.ಪಂ.ಗೆ ಆಗಮಿಸಿ ಗ್ರಾಮೀಣ ಭಾಗದ ಜನರ ಸಮಸ್ಯೆ ಆಲಿಸಲಾಗುತ್ತದೆ ವಿವಿಧ ಪಿಂಚಣಿ ಸೌಲಭ್ಯಗಳಿಗಾಗಿ ಕಚೇರಿಗೆ ಅಲೆದಾಡುವ ಪರಿಸ್ಥಿತಿಗೆ ವಿರಾಮ ಹಾಕಲಾಗಿದೆ, ಯಾವುದೇ ಸವಲತ್ತುಗಳನ್ನು ಇಲ್ಲಿಂದಲೇ ಪಡೆಯಬಹುದು,ಮಧ್ಯೆ ವರ್ತಿಗಳಿಂದ ದೂರವಿದ್ದು ನೇರವಾಗಿ ಅಧಿಕಾರಿಯನ್ನು ಭೇಟಿ ಮಾಡಬಹುದು ಹಾಗಾಗಿ ವಾರದ ಒಂದು ದಿನ ಪಂಚಾಯಿತಿಗೆ ಆಗಮಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು ಎಂದರು.
ವಿವೇಕಾನAದ ಸೇವಾ ವಲಯದ ಸಂಪನ್ಮೂಲ ವ್ಯಕ್ತಿಗಳು, ಅಂಗನವಾಡಿಯ ಹಿರಿಯ ಕಾರ್ಯಕರ್ತೆ, ಗಂಗಮ್ಮ, ವೈದ್ಯಾಧಿಕಾರಿ ದೇವೇಂದ್ರ ಸೇರಿದಂತೆ ಇನ್ನಿತರ ಪ್ರಮುಖರು ವಿಷಯ ಮಂಡನೆ ಮಾಡಿದರು. ಸ್ಥಳದಲ್ಲಿ ಉದ್ಯೋಗ ಚೀಟಿ, ಬ್ಯಾಂಕ್ ಖಾತೆ ನೊಂದಣಿ ಕಾರ್ಯ ನಡೆಯಿತು.
ಚೂರಿಕಾಡು ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಪಂಚಾಯತಿ ಅಧ್ಯಕ್ಷರಾದ ಚಂದ್ರು ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಮಹಿಳಾ ಗ್ರಾಮ ಸಭೆಯಲ್ಲಿ ಉಪಾಧ್ಯಕ್ಷರಾದ ಚೆಪ್ಪುಡೀರ ರೀಟಾ ವಿಜಯ್, ಸದಸ್ಯರುಗಳಾದ ಮುಕ್ಕಾಟೀರ ರಿತೇಶ್ ಬಿದ್ದಪ್ಪ, ಕಾವೇರಿ, ರಾಧ, ಲಕ್ಷಿö್ಮ, ರಮೇಶ್ ಗ್ರಾಮದ ಮುಖಂಡರಾದ ಪೆಮ್ಮಣಮಾಡ ರಮೇಶ್, ನವೀನ್, ಗುಡಿಯಂಗಡ ರಾಜ, ವಕೀಲರಾದ ದೇಯಂಡ ಜಯರಾಂ, ಚೆಟ್ರುಮಾಡ ಅನಿಲ್, ಚಪ್ಪುಡೀರ ಉದಯ, ಸುನಿಲಾ, ಉದಯ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಪ್ರಸ್ತುತ ಸಾಲಿನಲ್ಲಿ ಪಂಚಾಯತಿ ವತಿಯಿಂದ ನಡೆಸಲಾದ ಕಾರ್ಯಕ್ರಮಗಳ ವಿವರವನ್ನು ಗ್ರಾಮದ ಮಹಿಳೆಯರಿಗೆ ವಿವರಿಸಲಾಯಿತು.
- ಹೆಚ್.ಕೆ. ಜಗದೀಶ್