ಚೆಟ್ಟಳ್ಳಿ, ಜ. ೧: ಬೇಸಿಗೆ ಬರುತ್ತಿದ್ದಂತೆ ಅರಣ್ಯದಲ್ಲಿ ಉಂಟಾಗುವ ಕಾಡ್ಗಿಚ್ಚಿನಿಂದ ಪ್ರತಿ ವರ್ಷ ಅರಣ್ಯ ಸಂಪತ್ತುಗಳು ಸಹಿತ ಕಾಡು ಪ್ರಾಣಿ ಪಕ್ಷಿ ಸಂಕುಲಗಳು ನಾಶಗೊಳ್ಳುವ ಘಟನೆಗಳು ಸಂಭವಿಸುತ್ತಿವೆ. ಹೀಗಾಗಿ ಅರಣ್ಯದÀಲ್ಲಿ ಕಾಡ್ಗಿಚ್ಚುಗಳು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಡಿಸಂಬರ್ ತಿಂಗಳಿAದಲೇ ಅರಣ್ಯ ಇಲಾಖೆ ಸನ್ನದಗೊಳ್ಳುತಿದ್ದು ಅರಣ್ಯದ ಬದಿಗಳಲ್ಲಿ ಕಾಡುಕಡಿದು ಫೈಯರ್‌ಲೈನ್ (ಬೆಂಕಿತಡೆ ರೇಖೆಯನ್ನು) ಅಳವಡಿಸುವ ಕಾರ್ಯಕ್ಕೆ ಮುಂದಾಗಿದೆ.

ಕೊಡಗಿನ ರಾಷ್ಟಿçÃಯ ಹೆದ್ದಾರಿಯ ಬದಿಯ ಆನೆಕಾಡು ಮೀಸಲು ಅರಣ್ಯದ ಎರಡು ಬದಿಗಳ ಕುರುಚಲು ಕಾಡುಗಳನ್ನು ಕಡಿಯಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅರಣ್ಯ ಬದಿಯ ಕಾಡುಗಳನ್ನು ಸುಡುವ ಮೂಲಕÀ ರಸ್ತೆಬದಿಯಲ್ಲಿ ಬೀಡಿ ಸಿಗರೇಟು ಇನ್ನಿತರೆ

(ಮೊದಲ ಪುಟದಿಂದ) ಬೆಂಕಿಕಿಡಿಗಳು ಹಾರಿದರೂ ಅದರ ಪರಿಣಾಮ ಅರಣ್ಯಕ್ಕೆ ಬೆಂಕಿ ಹರಡದಂತೆ ಮುಂಜಾಗ್ರತಾ ಕ್ರಮವಹಿಸಲಾಗುತ್ತಿದೆ.

ಈ ಹಿಂದೆ ಮೈಸೂರು-ಮಂಗಳೂರು ರಾಷ್ಟಿçÃಯ ಹೆದ್ದಾರಿಯ ಆನೆಕಾಡು, ದುಬಾರೆ, ಮಾಲ್ದಾರೆಯ ಮೀಸಲು ಅರಣ್ಯದಲ್ಲಿ ಕಾಡ್ಗಿಚ್ಚಿನ ಪರಿಣಾಮವಾಗಿ ಸುಮಾರು ೧೦೦ ಎಕರೆಗೂ ಅಧಿಕ ಅರಣ್ಯ ನಾಶವಾಗಿತ್ತು. ಫೆಬ್ರವರಿ ತಿಂಗಳಲ್ಲಿ ಬೆಂಕಿ ವಾಚರ್‌ಗಳನ್ನು ನೇಮಕ ಮಾಡುವುದು, ವಾಚರ್ ಟವರ್‌ಗಳು, ತಕ್ಷಣವೇ ಮಾಹಿತಿ ರವಾನಿಸಲು ಅರಣ್ಯ ಸಿಬ್ಬಂದಿಗಳಿಗೆ ವಾಕಿಟಾಕಿ ನೀಡಲಾಗುತಿದ್ದು, ಸ್ಯಾಟ್‌ಲೈಟ್ ಮೂಲಕ ಅರಣ್ಯಕ್ಕೆ ಬೆಂಕಿಬಿದ್ದ ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗಿದೆ.

ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಕಾಡ್ಗಿಚ್ಚಿನ ಬಗ್ಗೆ ತೀವ್ರ ನಿಗಾ

ಮಳೆಗಾಲದಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುವ ಅರಣ್ಯಗಳು ಬೇಸಿಗೆ ಬಂತೆAದರೆ ಕಾಡ್ಗಿಚ್ಚಿಗೆ ಬಲಿಯಾಗುವ ಭಯ ಶುರುವಾಗುತ್ತದೆ. ರಾಷ್ಟಿçÃಯ ಹುಲಿ ಸಂರಕ್ಷಿತ ಮೀಸಲು ಅರಣ್ಯಗಳಾದ ನಾಗರಹೊಳಗೆ, ಬಂಡೀಪುರಗಳಲ್ಲಿ ಅರಣ್ಯದಲ್ಲಿ ಕಾಡ್ಗಿಚ್ಚು ನಿವಾರಿಸಲು ನಿಗಾವಹಿಸಲಾಗುತ್ತಿದ್ದು, ಈಗಾಗಲೇ ಅರಣ್ಯದಂಚಿನ ೧೦ಮೀಟರ್ ದೂರದವರೆಗೆ ಕುರುಚಲು ಕಾಡುಗಳನ್ನು ಕಡಿಯುವ ಕಾರ್ಯವನ್ನು ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅರಣ್ಯದ ಸುತ್ತಲೂ ಸುಮಾರು ೨೦೦೦ಕಿ.ಮೀ ಕ್ಕೂ ಹೆಚ್ಚು ಬೆಂಕಿತಡೆ ರೇಖೆಯನ್ನು ಮಾಡಲಾಗುತ್ತದೆ. ಎರಡು ತಿಂಗಳಲ್ಲಿ ಫೈಯರ್ ವಾಚರ್‌ಗಳನ್ನು ನೇಮಿಸಿಕೊಳ್ಳುವುದು ಪ್ರತೀ ವಲಯಕ್ಕೊಂದು ಅಗ್ನಿಶಾಮಕದಳ, ಅರಣ್ಯ ಸಿಬ್ಬಂದಿಗಳು ನಿರಂತರ ಕಾರ್ಯಾಚರಣೆ ನಡೆಸಲಿದ್ದಾರೆ. - ಪುತ್ತರಿರ ಕರುಣ್ ಕಾಳಯ್ಯ