ವೀರಾಜಪೇಟೆ, ಜ.೧ : ಮಲೆತಿರಿಕೆ ಬೆಟ್ಟದ ಶ್ರೀ ಅಯ್ಯಪ್ಪ ಸ್ವಾಮಿ ದೇಗುಲದ ವಾರ್ಷಿಕ ಉತ್ಸವವು ಶ್ರದ್ಧಾ ಭಕ್ತಿಯಿಂದ ಸಂಪನ್ನಗೊAಡಿತು. ಡಿ.೩೦ರಂದು ಧ್ವಜಾರೋಹಣ ಮತ್ತು ಗುಳಿಗನ ಪೂಜೆಗಳಿಂದ ಆರಂಭಗೊAಡು ಡಿ. ೩೧ ರಂದು ಅಯ್ಯಪ್ಪ ಸ್ವಾಮಿಗೆ ವಿಶೇಷ ಪೂಜೆಗಳು ಜರುಗಿದವು. ಇಂದು ಮುಂಜಾನೆ ಗಣಪತಿ ಹೋಮದೊಂದಿಗೆ ಆರಂಭವಾಗಿ. ಲಕ್ಷ್ಮೀಪೂಜೆ, ಅಯ್ಯಪ್ಪ ಮಾಲಾಧಾರಿಗಳಿಂದ ಲಕ್ಷಾರ್ಚನೆ ಕಾರ್ಯಕ್ರಮ, ಶ್ರೀ ಅಯ್ಯಪ್ಪ ಭಜನಾವಳಿಗಳು ನಡೆದು ಮಾಹಾಪೂಜೆ, ಮಹಾಮಂಗಳಾರತಿ ನಡೆಯಿತು. ನಂತರದಲ್ಲಿ ಆಗಮಿಸಿದÀ ಭಕ್ತರಿಗೆ ಆಡಳಿತ ಮಂಡಳಿಯ ವತಿಯಿಂದ ಪ್ರಸಾದ ವಿತರಣಾ ಕಾರ್ಯಕ್ರಮ ನಡೆಯಿತು.