*ಗೋಣಿಕೊಪ್ಪ, ಜ. ೧: ಪಟ್ಟಣದ ಬೀದಿಗಳನ್ನು ಸುಲಭವಾಗಿ ಶುಚಿಗೊಳಿಸುವ ಉದ್ದೇಶದಿಂದ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಬ್ಲೋವರ್ ಖರೀದಿಸುವ ಮೂಲಕ ನೂತನ ಪ್ರಯೋಗಕ್ಕೆ ಮುಂದಾಗಿದೆ.

ಪೌರಕಾರ್ಮಿಕರ ಕೆಲಸದ ಒತ್ತಡವನ್ನು ತಗ್ಗಿಸುವ ನಿಟ್ಟಿನಲ್ಲಿ ಚಿಂತನೆ ಹರಿಸಿದ ಪಂಚಾಯಿತಿ ೩೫ ಸಾವಿರ ರೂಪಾಯಿಗಳಿಗೆ ಬ್ಲೋವರ್ ಖರೀದಿಸಿ ಪಟ್ಟಣವನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಂಡಿದೆ.

ಗ್ರಾ.ಪಂ. ಅಧ್ಯಕ್ಷೆ ಚೈತ್ರಾ ಬಿ. ಚೇತನ್ ಅವರು ಸಿಬ್ಬಂದಿಗಳೊAದಿಗೆ ಬ್ಲೋವರ್‌ನ ಪ್ರಾಥಮಿಕ ಪ್ರಯೋಗವನ್ನು ನಡೆಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯ ವಿವೇಕ್, ಸಿಬ್ಬಂದಿಗಳಾದ ಸತೀಶ್, ರಾಜು, ಇರ್ಷಾದ್ ಹಾಜರಿದ್ದರು.