ಸೋಮವಾರಪೇಟೆ, ಜ. ೧: ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಗ್ರಾಮಸಭೆ ಅಧ್ಯಕ್ಷೆ ಕೆ.ಎಂ. ಬಿಂದು ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಅಕಾಲಿಕ ಮಳೆಯಿಂದ ಕಾಫಿ ಫಸಲು ಹಾನಿಯಾಗಿದೆ. ಕಾಫಿ ಬೆಳೆಗಾರರ ವಿದ್ಯುತ್ ಚಾಲಿತ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಬಾರದು ಎಂದು ಸೆಸ್ಕ್ ಅಧಿಕಾರಿಗೆ ರೈತರು ಮನವಿ ಮಾಡಿಕೊಂಡರು.

ಕೋವಿಡ್‌ನ ೨ನೇ ಲಸಿಕೆಯನ್ನು ಪ್ರತಿಯೊಬ್ಬರೂ ಹಾಕಿಸಿಕೊಳ್ಳಬೇಕೆಂದು ಹಿರಿಯ ಆರೋಗ್ಯ ನಿರೀಕ್ಷಣ ಅಧಿಕಾರಿ ಮಹೇಶ್ ಹೇಳಿದರು. ಗ್ರಾಮ ಪಂಚಾಯಿತಿ ಸದಸ್ಯರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಲಸಿಕೆ ಹಾಕಿಸಿಕೊಳ್ಳದವರ ಮಾಹಿತಿಯನ್ನು ಆರೋಗ್ಯ ಇಲಾಖೆಗೆ ನೀಡುವಂತೆ ಮನವಿ ಮಾಡಿದರು.

ಪ್ರಮುಖವಾಗಿ ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆಯ ಅಧಿಕಾರಿಗಳು ರೈತರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷೆ ಯು.ಪಿ. ರಶೀದಾ, ಡಿ.ಎಂ. ಗೋಪಾಲಕೃಷ್ಣ, ರುದ್ರಪ್ಪ, ಹೆಚ್.ಈ. ಶಂಕರ, ಎನ್.ಜೆ. ಸತೀಶ, ಪ್ರವೀಣ್, ಭಾಗ್ಯ, ವೀಣಾ, ನೋಡೆಲ್ ಅಧಿಕಾರಿ ರವಿ, ಪಿಡಿಒ ಜಿ.ಆರ್. ಹೇಮಲತ ಉಪಸ್ಥಿತರಿದ್ದರು.