ಮಡಿಕೇರಿ,ಜ.೧: ಜಿಲ್ಲೆಯಲ್ಲಿ ಭೂಕುಸಿತ ಉಂಟಾದ ಸಂದರ್ಭ ಬೀದಿಗೆ ಬಿದ್ದಿದ್ದ ಗೋವುಗಳನ್ನು ರಕ್ಷಣೆ ಮಾಡುವ ಸಲುವಾಗಿ ಚೆಟ್ಟಿಮಾನಿಯಲ್ಲಿ ಆರಂಭಗೊAಡ ಶ್ರೀಕೃಷ್ಣ ಗೋಶಾಲೆಯನ್ನು ಹಾರಂಗಿ ರಸ್ತೆಯಲ್ಲಿರುವ ಚಿಕ್ಕತ್ತೂರು ಗ್ರಾಮಕ್ಕೆ ಸ್ಥಳಾಂತರಿಸಲಾಗಿದೆ ಎಂದು ಶ್ರೀ ಕೃಷ್ಣ ಗೋಶಾಲಾ ಟ್ರಸ್ಟ್ ಅಧ್ಯಕ್ಷ ಹರೀಶ್ ಆಚಾರ್ಯ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು; ೨೦೧೯ರಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ದಾನಿಗಳು ಸಿಗದೆ ಗೋವುಗಳ ನಿರ್ವಹಣೆ ಕಷ್ಟಕರವಾಗಿತ್ತು, ಮತ್ತೆ ೨೦೨೧ರಲ್ಲಿ ವಿಪರೀತ ಮಳೆಯಿಂದಾಗಿ ಗೋವುಗಳಿಗೆ ಹೊರಗಡೆ ಮೇಯಲು ಆಗುತ್ತಿರಲಿಲ್ಲ, ಅಲ್ಲದೆ, ಚಳಿಯಿಂದಾಗಿ ಆರೋಗ್ಯಕ್ಕೂ ತೊಂದರೆಯಾಗಿತ್ತು. ಹಾಗಾಗಿ ಪಶು ವೈದ್ಯಕೀಯ ಇಲಾಖೆಯ ನಿರ್ದೇಶನದಂತೆ ಕುಶಾಲನಗರ ಭಾಗದ ಚಿಕ್ಕತ್ತೂರುವಿನಲ್ಲಿ ಮೂರೂವರೆ ಎಕರೆ ಜಾಗವನ್ನು ಭೋಗ್ಯಕ್ಕೆ ಪಡೆದು ಅಲ್ಲಿಗೆ ಗೋವುಗಳನ್ನು ಸಾಗಿಸಲಾಗಿದೆ ಎಂದು ತಿಳಿಸಿದರು. ಇದೀಗ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಲಾಗಿದೆ, ಜಾಗದ ಸುತ್ತ ತಂತಿ ಬೇಲಿ, ಸುಸಜ್ಜಿತ ಶೆಡ್‌ಗಳು, ಆಹಾರ, ಔಷಧಿಗಳ ಶೇಖರಣೆ ಆಗಬೇಕಾಗಿದೆ. ಸರಕಾರದಿಂದ ಯಾವದೇ ಸಹಕಾರ ಸಿಗುತ್ತಿಲ್ಲ; ೧೦೦ ಗೋವುಗಳಿಗಿಂತ ಹೆಚ್ಚಿದ್ದು, ೧೦ ಎಕರೆ ಜಾಗವಿದ್ದರೆ ಒಂದು ಗೋವಿಗೆ ರೂ.೧೭.೫೦ ನೀಡುವದಾಗಿ ಸರಕಾರ ಹೇಳುತ್ತದೆ, ಸಣ್ಣ ಮಟ್ಟದಲ್ಲೂ ಇರುವ ಗೋಶಾಲೆಗಳಿಗೂ ನೆರವು ನೀಡುವಂತಾಗಬೇಕೆAದು ಹೇಳಿದ ಅವರು; ಇದೀಗ ಭತ್ತದ ಕುಯ್ಲು ಸಮಯವಾಗಿದ್ದು, ರೈತರು ಹುಲ್ಲನ್ನು ದಾನವಾಗಿ ನೀಡಿದರೆ ಒಂದಿಷ್ಟು ಗೋವುಗಳಿಗೆ ಮೇವು ಸಿಕ್ಕಿದಂತಾಗುತ್ತದೆ ಎಂದು ಮನವಿ ಮಾಡಿದರು.
ಪ್ರಸ್ತುತ ಗೋಶಾಲೆಯಲ್ಲಿ ೩೫ ಗೋವುಗಳಿದ್ದು, ಜನರಿಗೆ ಸಾಕಲು ಕಷ್ಟವಾದಲ್ಲಿ ತಂದು ಗೋ ಶಾಲೆಗೆ ಬಿಡಬಹುದಾಗಿದೆ. ಗೋವುಗಳನ್ನು ಸಾಗಾಟ ಮಾಡುವ ಸಂದರ್ಭ ಪಶುವೈದ್ಯ ಇಲಾಖೆಯ ಅನುಮತಿ ಪತ್ರಗಳಿದ್ದರೆ ಹಿಂದೂ ಸಂಘಟನೆಯವರು ಅಂತಹ ವಾಹನಗಳನ್ನು ತಡೆದು ತೊಂದರೆ ಕೊಡಬಾರದೆಂದು ಹೇಳಿದರು. ಮಲೆನಾಡು ತಳಿಯ ಸಂರಕ್ಷಣೆ ಮಾಡುವದು ಗೋಶಾಲೆಯ ಉದ್ದೇಶವಾಗಿದ್ದು, ಕುಶಾಲನಗರ ರಸ್ತೆಯ ಆನೆಕಾಡು ಬಳಿ ಹಾಗೂ ಸಂಪಾಜೆ ರಸ್ತೆಯಲ್ಲಿ ಸಾಕಷ್ಟು ಗೋವುಗಳಿದ್ದವು. ಕೆಲವು ಅಪಘಾತಕ್ಕೊಳಗಾಗಿ ಸಾವನ್ನಪ್ಪಿದರೆ, ಇನ್ನೂ ಕೆಲವು ಕಾಣೆಯಾಗಿವೆ. ಅಂತಹ ಗೋವುಗಳನ್ನು ಗೋಶಾಲೆಗೆ ತಂದು ಬಿಡುವಂತೆ ಪಂಚಾಯ್ತಿಗೆ ಮನವಿ ಮಾಡಿಕೊಂಡರೂ ಇದುವರೆಗೂ ಕಳುಹಿಸಿಕೊಟ್ಟಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಪಶುಗಳ ಕ್ಷೇಮ ನೋಡಿಕೊಳ್ಳಲು ಪಶುವೈದ್ಯ ಇಲಾಖೆಯಲ್ಲಿ ವೈದ್ಯರುಗಳಿಲ್ಲ, ಸರಕಾರ ಪಶು ವೈದ್ಯರನ್ನು ನೇಮಕ ಮಾಡಬೇಕೆಂದು ಕೋರಿದರು. ಗೋಷ್ಠಿಯಲ್ಲಿ ಟ್ರಸ್ಟಿಗಳಾದ ಲಲಿನಾ ಪೂಣಚ್ಚ, ಪಳಂಗAಡ ಈಶ್ವರ್, ತೋಳಂಡ ನಾಣಯ್ಯ ಇದ್ದರು.