ಸೋಮವಾರಪೇಟೆ, ಜ.೧: ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ದೇಶದ ಸೇನಾಪಡೆಗಳ ಮಹಾ ದಂಡನಾಯಕ ಬಿಪಿನ್ ರಾವತ್ ಸೇರಿದಂತೆ ಇತರ ಸೇನಾಧಿಕಾರಿಗಳಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಹಿಂದೂ ಜಾಗgಣಾ ವೇದಿಕೆಯ ಯುವ ವಾಹಿನಿಯ ನೇತೃತ್ವದಲ್ಲಿ ೧೨ ದಿನಗಳ ಕಾಲ ನಡೆಯುತ್ತಿರುವ ಯೋಧ ನಮನ ರಥಯಾತ್ರೆ ತಾ. ೨ರಂದು (ಇಂದು) ಪಟ್ಟಣಕ್ಕೆ ಆಗಮಿಸಲಿದೆ. ಸಂಜೆ ೩.೪೫ಕ್ಕೆ ಪಟ್ಟಣದ ಪುಟ್ಟಪ್ಪ ವೃತ್ತಕ್ಕೆ ರಥ ಆಗಮಿಸಲಿದ್ದು, ಎಲ್ಲರೂ ರಥಯಾತ್ರೆಯಲ್ಲಿ ಪಾಲ್ಗೊಂಡು ಪುಷ್ಪಾರ್ಚನೆ ಮಾಡುವ ಮೂಲಕ ನಮನ ಸಲ್ಲಿಸುವಂತೆ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಹ ಸಂಪರ್ಕ ಪ್ರಮುಖ್ ಎಂ.ಬಿ. ಉಮೇಶ್ ಮನವಿ ಮಾಡಿದ್ದಾರೆ.