ಜನವರಿ ತಾ. ೧. ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ ತರಗತಿಗಳು ರಾಜ್ಯಾದ್ಯಂತ ಪ್ರಾರಂಭಗೊAಡವು. ಕೋವಿಡ್ ಹಿನ್ನೆಲೆ ತರಗತಿಗಳು ಹಲವು ತಿಂಗಳುಗಳ ಕಾಲ ಸ್ಥಗಿತಗೊಂಡಿದ್ದವು

ತಾ. ೨೨ : ಶಿವಮೊಗ್ಗ ಅಬ್ಬಲಗೆರೆ-ಹುಣಸೋಡು ಜಲ್ಲಿ ಕ್ರಷರ್‌ನಲ್ಲಿ ಜಿಲೆಟಿನ್ ಸ್ಫೋಟ. ೮ ಮಂದಿಯ ದೇಹ ಛಿದ್ರ. ಶಿವಮೊಗ್ಗ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಭೂಕಂಪನದ ಅನುಭವ. ಅಕ್ರಮ ಗಣಿಗಾರಿಕೆ ನಿಷೇಧಿಸಲು ಸಾರ್ವಜನಿಕರ ಆಗ್ರಹ.

ಫೆಬ್ರವರಿ ತಾ. ೧೭: ತೆರಿಗೆ ವಂಚನೆ ಮತ್ತು ಆದಾಯ ಮಾಹಿತಿ ಮುಚ್ಚಿಟ್ಟ ಆರೋಪಕ್ಕೆ ಸಂಬAಧಿಸಿದAತೆ ಬೆಂಗಳೂರು, ತುಮಕೂರು, ದಾವಣಗೆರೆ ಮತ್ತು ಮಂಗಳೂರಿನ ೧೨ ವೈದ್ಯಕೀಯ ಕಾಲೇಜುಗಳ ಹಾಗೂ ಆಸ್ಪತ್ರೆಗಳ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದರು. ಸುಮಾರು ರೂ.೪೦೦ ಕೋಟಿಯಷ್ಟು ಹಣದ ಆದಾಯ ಮಾಹಿತಿ ಇಲ್ಲವಾಗಿ ದನ್ನು ಪತ್ತೆಹಚ್ಚಿದರು. ಸೀಟ್ ಬ್ಲಾಕಿಂಗ್ ದಂಧೆಯಿAದ ಅಕ್ರಮ ಹಣ ದೊರೆತಿರುವುದಾಗಿ ತಿಳಿದುಬಂದಿತು.

ತಾ. ೨೧: ಹಿಂದುಳಿದ ವರ್ಗಗಳ ಪ್ರವರ್ಗ ‘೨ಎ’ ಗೆ ಆಗ್ರಹಿಸಿ ಪಂಚಮಸಾಲಿ ಸಮುದಾಯದವರು ಬೆಂಗಳೂರಿನಲ್ಲಿ ಬೃಹತ್ ಧರಣಿ.

ತಾ. ೨೩ : ಶಿವಮೊಗ್ಗದಲ್ಲಿ ಜಿಲೆಟಿನ್ ಸ್ಫೋಟಗೊಂಡು ಒಂದು ತಿಂಗಳು ಆಗುವ ಮುನ್ನವೇ ಚಿಕ್ಕಬಳ್ಳಾಪುರದಲ್ಲಿಯೂ ಸ್ಫೋಟಗೊಂಡ ಜಿಲೆಟಿನ್ ೬ ಮಂದಿಯನ್ನು ಬಲಿ ಪಡೆಯಿತು. ದೇಹಗಳು ಸಂಪೂರ್ಣ ಛಿದ್ರಗೊಂಡಿದ್ದವು.

ಮಾರ್ಚ್ ತಾ. ೨: ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಯುವತಿಯೊಬ್ಬ ಳನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡು ವಂಚಿಸಿದ ಆರೋಪದಡಿಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ದೂರು.

ತಾ. ೮: ರಾಜ್ಯ ಬಜೆಟ್ ಮಂಡನೆ-ರೂ. ೨.೪೬ ಲಕ್ಷ ಕೋಟಿ ಮೀಸಲು.

ತಾ. ೨೦: ಬೆಳ್ತಂಗಡಿಯಲ್ಲಿ ನಡೆದ ಕಂಬಳದಲ್ಲಿ ಅಶ್ವತ್ತಪುರದ ನಿವಾಸಿ ಶ್ರೀನಿವಾಸ ಗೌಡ ೧೦೦ ಮೀಟರ್ ಅನ್ನು ೮.೯೬ ಸೆಕೆಂಡುಗಳಲ್ಲಿ ಕ್ರಮಿಸಿ ದಾಖಲೆ ನಿರ್ಮಿಸಿದ್ದರು.

ಏಪ್ರಿಲ್ ತಾ. ೭: ಆರನೇ ವೇತನ ಆಯೋಗದ ಶಿಫಾರಸಿನಂತೆ ವೇತನ ಪರಿಷ್ಕರಣೆಗೆ ಪಟ್ಟು ಹಿಡಿದ ಸಾರಿಗೆ ನಿಗಮಗಳ ನೌಕರರು ರಾಜ್ಯಾದಂತ ಬಂದ್‌ಗೆ ಕರೆ ನೀಡಿದ್ದು, ಸಂಚಾರಕ್ಕೆ ರಾಜ್ಯಾದ್ಯಂತ ತೊಡಕುಂಟಾಯಿತು.

ತಾ. ೮: ರಾಜ್ಯದಲ್ಲಿ ಕೋವಿಡ್ ಮತ್ತೆ ಏರಿಕೆಯಾಗುತ್ತಿದ್ದ ಕಾರಣ ರಾಜ್ಯದ ೭ ನಗರಗಳಾದ ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ, ಕಲಬುರ್ಗಿ, ಬೀದರ್, ತುಮಕೂರು, ಉಡುಪಿಯಲ್ಲಿ ಕೊರೊನಾ ಕರ್ಫ್ಯೂ ಹೇರಲಾಯಿತು.

ತಾ. ೧೮: ರೆಮ್‌ಡೆಸಿವೀರ್ ಚುಚ್ಚು ಮದ್ದು ಅಕ್ರಮ ಮಾರಾಟ- ಕಾಳಸಂತೆಯಲ್ಲಿ ಸುಮಾರು ರೂ. ೧೦,೫೦೦ ಕ್ಕೆ ಮಾರಾಟ ಮಾಡಿದಕ್ಕೆ ಆರೋಪಿಗಳನ್ನು ಬೆಂಗಳೂರಿನ ಪೊಲೀಸರು ಸೆರೆಹಿಡಿದಿದ್ದರು.

ತಾ. ೨೧: ೧೫ ದಿನಗಳ ಸಾರಿಗೆ ನೌಕರರ ಮುಷ್ಕರ ಅಂತ್ಯ. ೧೫ ದಿನಗಳಲ್ಲಿ ಒಟ್ಟು ರೂ. ೨೮೭ ಕೋಟಿಯಷ್ಟು ಸಾರಿಗೆ ಇಲಾಖೆಗೆ ನಷ್ಟ .

ತಾ. ೨೬ : ಕೋವಿಡ್ ಪ್ರಕರಣಗಳು ಏರತೊಡಗಿದ ಕಾರಣ ೧೪ ದಿನ ಕರ್ನಾಟಕ ಲಾಕ್‌ಡೌನ್ ಘೋಷಣೆ

ತಾ. ೩೦: ಸ್ಥಳೀಯ ಸಂಸ್ಥೆಗಳ ಚುನಾವಣೆ-೧೦ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆÀ್ರಸ್ ೬, ಜೆಡಿಎಸ್ ೨ ಹಾಗೂ ಬಿ.ಜೆ.ಪಿ ೧ ಸ್ಥಾನ ಪಡೆಯಿತು.

ಮೇ ತಾ. ೧೯: ಕೋವಿಡ್ ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿದ್ದ ರೈತರು, ಚಾಲಕರು ಮತ್ತು ಅಸಂಘಟಿತ ಕಾರ್ಮಿಕರ ನರೆವಿಗೆ ಸರಕಾರ ರೂ.೧,೨೫೦ ಕೋಟಿಯ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿತು.

ಜೂನ್ ತಾ. ೬: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಪೆಟ್ರೋಲ್ ದರವು ಮೊದಲನೆಯ ಬಾರಿಗೆ ೧೦೦ರ ಗಡಿ ದಾಟಿತು.

ತಾ. ೧೫: ಕೋವಿಡ್‌ನಿಂದ ಮೃತಪಟ್ಟ ಬಡವರ ಕುಟುಂಬಕ್ಕೆ ರೂ.೧ ಲಕ್ಷ ಪರಿಹಾರ ಘೋಷಣೆ ಮಾಡಿದ ಸಿ.ಎಂ ಯಡಿಯೂರಪ್ಪ.

ತಾ. ೧೫: ಕನ್ನಡ ಚಿತ್ರನಟ ಸಂಚಾರಿ ವಿಜಯ್ ಅಪಘಾತದಲ್ಲಿ ಸಾವು. ಅವರ ಕಣ್ಣು, ೨ ಕಿಡ್ನಿಗಳು ದಾನ ಮಾಡಲಾಯಿತು

ಜುಲೈ ತಾ. ೩: ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಅನುದಾನ ರಹಿತ ಶಾಲಾ ಶಿಕ್ಷಕರಿಗೆ ರೂ. ೫,೦೦೦ ವಿಶೇಷ ಪ್ಯಾಕೇಜ್ ಘೋಷಣೆ

ತಾ. ೪: ರಾಜ್ಯಾದ್ಯಂತ ಕೊಡಗು ಮತ್ತು ಹಾಸನ ಜಿಲ್ಲೆಗಳನ್ನು ಹೊರತುಪಡಿಸಿ, ಇತರೆಡೆ ಅನ್‌ಲಾಕ್-೩ ಜಾರಿಗೆ ಬಂದಿದ್ದು, ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿದ್ದ ಜನರ ಜೀವನ ಸಹಜಸ್ಥತಿಯತ್ತ ಮುಖ ಮಾಡಿತು.

ತಾ. ೧೮: ಕೋವಿಡ್‌ನಿಂದಾಗಿ ಮುಂದೂಡಲ್ಪಟ್ಟಿದ್ದ ಎಸ್.ಎಸ್.ಎಲ್.ಸಿ ಪರೀಕ್ಷೆ ರಾಜ್ಯಾದ್ಯಂತ ಸುಲಭ ಮಾದರಿಯಲ್ಲಿ ನಡೆಯಿತು.

ತಾ. ೧೮: ಕರಾವಳಿ ಜಿಲ್ಲೆಗಳು ಸೇರಿದಂತೆ ರಾಜ್ಯದ ವಿವಿಧೆಡೆ ಮಳೆಯ ರಭಸ ಹೆಚ್ಚತೊಡಗಿದ್ದು, ಹಲವು ಮಂದಿ ಪ್ರಾಣ ಕಳೆದುಕೊಳ್ಳುವುದರ ಜೊತೆಗೆ ರೈತರು ಬೆಳೆ ನಾಶದ ಹೊಡೆತವನ್ನೂ ಅನುಭವಿಸಬೇಕಾಯಿತು.

ತಾ. ೨೦: ದ್ವಿತೀಯ ಪಿ.ಯು ಪರೀಕ್ಷೆಯೇ ನಡೆಸದೆ, ಎಸ್.ಎಸ್. ಎಲ್.ಸಿ. ಹಾಗೂ ಪ್ರಥಮ ಪಿ.ಯು ಆಧಾರಿತ ಫಲಿತಾಂಶ ನೀಡಿದ್ದು ರಾಜ್ಯದ ೨,೨೩೯ ಮಂದಿ ೬೦೦ ಕ್ಕೆ ೬೦೦ ಅಂಕ ಪಡೆದುಕೊಂಡರು.

ತಾ. ೨೬ : ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಿ.ಎಸ್ ಯಡಿಯೂರಪ್ಪ

ಅವರು ರಾಜೀನಾಮೆ ನೀಡಿದರು. ವಿಧಾನ ಸೌಧದಲ್ಲಿ ಹಮ್ಮಿ ಕೊಂಡಿದ್ದ ಸಮಾ ವೇಶದಲ್ಲಿ ಭಾವುಕ ರಾಗಿ ಮಾತನಾಡಿ ರಾಜಿನಾಮೆ ನೀಡು ವುದಾಗಿ ಘೋಷಿಸಿದರು.

ತಾ. ೨೮ : ರಾಜ್ಯದ ನೂತನ ಮುಖ್ಯ ಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಅಧಿಕಾರ ವಹಿಸಿ ಕೊಂಡರು.

ಆಗಸ್ಟ್ ತಾ. ೯ : ಎಸ್.ಎಸ್. ಎಲ್.ಸಿ. ಫಲಿತಾಂಶ-೧೫೭ ವಿದ್ಯಾರ್ಥಿ ಗಳಿಗೆ ೬೨೫ ಕ್ಕೆ ೬೨೫ ಅಂಕ.

ತಾ. ೧೦: ರೂ.೮೦ ಕೋಟಿ ವೆಚ್ಚದ ತಿಮಿಂಗಲದ ವಾಂತಿಯನ್ನು ಅಂತರ ರಾಷ್ಟಿçÃಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದವರನ್ನು ಬೆಂಗಳೂರು ಸಿ.ಸಿ.ಬಿ. ಪೊಲೀಸರು ವಶಕ್ಕೆ ಪಡೆದರು.

ಸೆಪ್ಟೆಂಬರ್ ತಾ. ೪ : ರಾಜ್ಯ ದಲ್ಲಿ ಆನ್‌ಲೈನ್ ಜೂಜಿಗೆ ಸಂಪೂರ್ಣ ನಿಷೇಧ ಹೇರಲಾಯಿತು

ತಾ. ೧೧: ನಂಜನಗೂಡು ಉಚ್ಚಗಣಿ ದೇವಾಲಯ ಧ್ವಂಸ-ಅನಧಿಕೃತ ಮಂದಿರ ಗಳನ್ನು ನಾಶಪಡಿಸಬೇಕೆಂಬ ಸವೋಚ್ಛ ನ್ಯಾಯಾಲಯದ ಆದೇಶದ ಮೇರೆಗೆ ಕ್ರಮ.

ತಾ. ೧೩ : ಬೆಲೆ ಏರಿಕೆ ವಿರುದ್ಧ ಪ್ರತಿಭಟನೆಯ ಪ್ರಯುಕ್ತ ಎತ್ತಿನ ಬಂಡಿ ಏರಿ ವಿಧಾನಮಂಡಲ ಅಧಿವೇಶನಕ್ಕೆ ವಿರೋಧ ಪಕ್ಷದ ನಾಯಕ ಹಾಗೂ ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಶಾಸಕರು ಲಗ್ಗೆ ಇಟ್ಟರು.

ತಾ. ೧೪: ಹೊಸ ರಾಷ್ಟಿçÃಯ ಶಿಕ್ಷಣ ನೀತಿ ವಿರೋಧಿಸಿ ವಿಧಾನಸೌಧಕ್ಕೆ ನೂರಾರು ವಿದ್ಯಾರ್ಥಿಗಳು ನುಸುಳಲು ಯತ್ನಿಸಿದರು. ೫೦ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

ತಾ. ೨೦: ತೈಲ ಹಾಗೂ ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕೆ.ಪಿ.ಸಿ.ಸಿ ಕಚೇರಿಯಿಂದ ವಿಧಾನಸೌಧದವರೆಗೆ ಕಾಂಗ್ರಸ್ ಮುಖಂಡರು ಸೈಕಲ್‌ನಲ್ಲಿ ತೆರಳಿದರು.

ತಾ. ೨೮: ಕೋವಿಡ್‌ನಿಂದ ಮೃತಪಟ್ಟ ಎಲ್ಲರ ಕುಟುಂಬಕ್ಕೂ ರೂ. ೫೦,೦೦೦ ಪರಿಹಾರ ಧನ ನೀಡುವುದಾಗಿ ಸರಕಾರ ಘೋಷಿಸಿತು.

ಅಕ್ಟೋಬರ್ ತಾ. ೧೧: ಕೋವಿಡ್ ತಂದಿಟ್ಟ ಆರ್ಥಿಕ ಕಷ್ಟದಿಂದಾಗಿ ಶುಲ್ಕ ಕಟ್ಟಲಾಗದೆ ಪರೀಕ್ಷೆಯಿಂದ ವಂಚಿತರಾಗಿದ್ದ ಮೂಡಬಿದ್ರೆ ಆಳ್ವಾಸ್ ಶಾಲೆಯ ವಿದ್ಯಾರ್ಥಿನಿ ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆಯಲ್ಲಿ ೬೨೫ ಕ್ಕೆ ೫೯೯ ಅಂಕ ಪಡೆದಳು. ಈ ಪರೀಕ್ಷೆಯನ್ನು ಆಗಿನ ಸಚಿವ ಸುರೇಶ್ ಕುಮಾರ್ ಕಾಳಜಿಯಿಂದ ಮೊದಲ ಯತ್ನ ಎಂದೇ ಪರಿಗಣಿಸಲಾಗಿತ್ತು.

ತಾ. ೨೧: ತೀವ್ರ ಮಳೆಯಿಂದಾಗಿ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಭೂಕುಸಿತ

ತಾ. ೨೯: ಖ್ಯಾತ ಚಿತ್ರನಟ ಪುನೀತ್ ರಾಜ್‌ಕುಮಾರ್ ಹೃದಯಾಘಾತ ದಿಂದ ಮೃತಪಟ್ಟಿದ್ದು, ಇಡೀ ರಾಜ್ಯವೇ ಶೋಕ ಸಾಗರದಲ್ಲಿ ಮುಳುಗಿತು.

ನವೆಂಬರ್ ತಾ. ೧೦: ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿದ ಬಿಟ್ ಕಾಯಿನ್ ಹಗರಣದ ಕುರಿತು ಕೇಂದ್ರ ಗೃಹ ಸಚಿವಾಲಯ ತನಿಖೆ ಆರಂಭಿಸಿತು.

ತಾ. ೧೨: ಕ್ರಿಪ್ಟೋ ಕರೆನ್ಸಿ ಎಕ್ಸ್ಚೇಂಜ್ ಬಿಟ್‌ಫಿನೆಕ್ಸ್ ಹ್ಯಾಕ್ ಮೂಲಕ ರೂ. ೫೬,೦೦೦ ಕೋಟಿ ಬೆಲೆಬಾಳುವ ಬಿಟ್‌ಕಾಯಿನ ಕಬಳಿಕೆಯಲ್ಲಿ ಕರ್ನಾಟಕದ ಹ್ಯಾಕರ್ ಶ್ರೀಕೃಷ್ಟ ಭಾಗಿ ಯಾಗಿರುವುದಾಗಿ ಅವನೇ ಒಪ್ಪಿಕೊಂಡಿದ್ದ.

ತಾ. ೨೪ : ಶಿವಮೊಗ್ಗದ ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಮನೆಯಲ್ಲಿ ಚಿನ್ನದ ರಾಶಿ, ಲೋಕೋಪಯೋಗಿ ಇಲಾಖೆಯ ಕಲಬುರ್ಗಿಯ ಕಿರಿಯ ಇಂಜಿನಿಯರ್ ಮನೆಯ ಪೈಪ್‌ನಲ್ಲಿ ರಾಶಿ ಹಣ ಬಚ್ಚಿಟ್ಟದನ್ನು ಎ.ಸಿ.ಬಿ ಪ್ರತ್ಯೇಕ ದಾಳಿ ವೇಳೆ ವಶಕ್ಕೆ ಪಡೆಯಲಾಯಿತು.

ಡಿಸೆಂಬರ್ ತಾ. ೪: ಹಾಸನ ಸೊಲ್ಲಾಪುರ ರೈಲು ತಡವಾಗಿ ಆಗಮಿಸಿದ ಕಾರಣ ಕೆ.ಪಿ.ಸಿ.ಸಿ ಪರೀಕ್ಷಾ ಅಭ್ಯರ್ಥಿಗಳು ಪರೀಕ್ಷೆಯಿಂದ ವಂಚಿತ ರಾಗಿದ್ದು, ರಾಯಚೂರು ರೈಲು ನಿಲ್ದಾಣದಲ್ಲಿ ಹಳಿಗಳ ಮೇಲೆ ಕುಳಿತು ಪ್ರತಿಭಟಿಸಿದರು.

ತಾ. ೧೫: ಮಹಾರಾಷ್ಟçದ ಕೊಲ್ಲಾಪುರದಲ್ಲಿ ಕರ್ನಾಟಕದ ಧ್ವಜವನ್ನು ಶಿವಸೇನಾ ಕಾರ್ಯಕರ್ತರು ಸುಟ್ಟು ಹಾಕಿದರು.

ತಾ. ೧೮: ಬೆಳಗಾವಿಯಲ್ಲಿ ಸ್ವಾತಂತ್ರ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಯನ್ನು ಕಿಡಿಗೇಡಿಗಳು ಭಗ್ನಗೊಳಿಸಿದರು. ಬೆಂಗಳೂರಿ ನಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಹಾಕಿದಕ್ಕೆ ಇದು ಪ್ರತಿಕ್ರಿಯೆವಾಗಿತ್ತು.

ತಾ. ೨೩: ಮತಾಂತರ ನಿಷೇಧಕ್ಕೆ ಅಂಗೀಕಾರ.

ತಾ. ೨೪: ಆಡಳಿತ ಪಕ್ಷದ ಕೆಲವರ ಗೈರು ಹಾಜರಿನ ನಡುವೆ ವಿರೋಧ ಪಕ್ಷದ ತೀವ್ರ ವಿರೋಧದ ಫಲವಾಗಿ ಮತಾಂತರ ನಿಷೇಧ ಮಸೂದೆ ಮಂಡನೆಗೆ ಸರಕಾರ ಹಿಂಜರಿಯಿತು.