ಕಣಿವೆ, ಡಿ. ೩೧: ಬೆಳೆದ ಫಸಲುಗಳನ್ನು ಭಕ್ಷಿಸಿ, ಗಿಡ ಮರಗಳನ್ನು ನಾಶಗೊಳಿಸಿ ರೈತರನ್ನು ದಯನೀಯ ಸ್ಥಿತಿಗೆ ತಲುಪಿಸಿದ ಆನೆಗಳ ಹಿಂಡು ನಿರಂತರವಾಗಿ ಗ್ರಾಮದಲ್ಲಿ ಸಂಚರಿಸಿದ ಘಟನೆ ನಡೆದಿದೆ. ಇಲ್ಲಿಗೆ ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರನೇ ಹೊಸಕೋಟೆ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಸೂರ್ಯೋದಯದ ಹೊತ್ತಿನಲ್ಲಿ ಹತ್ತು ಕಾಡಾನೆಗಳ ಹಿಂಡು ಗ್ರಾಮಸ್ಥರಿಗೆ ಪ್ರತ್ಯಕ್ಷವಾಯಿತು.

ಗುರುವಾರ ರಾತ್ರಿಯೇ ಗ್ರಾಮದ ವಿವಿಧ ಕೃಷಿಕರ ಹೊಲ - ಗದ್ದೆ, ತೋಟಗಳಿಗೆ ಲಗ್ಗೆಯಿಟ್ಟ ಕಾಡಾನೆಗಳ ಹಿಂಡು ಗ್ರಾಮದ ಕೃಷಿಕರು ಬೆಳೆದಿದ್ದ ರಾಗಿ, ಸಿಹಿಗೆಣಸು, ಅಡಿಕೆ, ತೆಂಗು, ಬಾಳೆ ಮತ್ತಿತರ ಫಸಲು ತಿಂದು ಹೊಟ್ಟೆ ತುಂಬಿಸಿಕೊAಡು ಹಾಯಾಗಿದ್ದವು. ಬಳಿಕ ಗುರುವಾರ ಬೆಳಗ್ಗೆ ಸುರಿದ ಮಂಜು ಹನಿಯನ್ನು ಸೀಳಿ ತಮ್ಮತ್ತ ನುಸುಳುತ್ತಿದ್ದ ಸೂರ್ಯನ ಕಿರಣಗಳನ್ನು ಕಂಡ ಕಾಡಾನೆಗಳ ಹಿಂಡು ಕಾಡಿನತ್ತ ಮರಳುತ್ತಿದ್ದಾಗ ಗ್ರಾಮಸ್ಥರಿಗೆ ಎದುರಾಗಿವೆ. ಬಳಿಕ ಗ್ರಾಮಸ್ಥರೆಲ್ಲಾ ಅಲ್ಲಲ್ಲಿ ಮರಗಳು ಹಾಗೂ ಮನೆಗಳ ಮಹಡಿಯನೇರಿ ಜೋರಾಗಿ ಕೂಗು ಹಾಕಿ ಸದ್ದು ಮಾಡಿ ಕಾಡಿಗೆ ಮರಳಿಸಿದರು.

ಗ್ರಾಮದ ಪ್ರಗತಿಪರ ಕೃಷಿಕ ದೇವರಾಜು ಎಂಬವರಿಗೆ ಸೇರಿದ ಮೂರು ಎಕರೆಯಲ್ಲಿ ಬೆಳೆದಿದ್ದ ಸೊಂಪಾಗಿದ್ದ ಅಡಿಕೆ ತೋಟಕ್ಕೆ ಲಗ್ಗೆಯಿಟ್ಟ ಕಾಡಾನೆಗಳ ಹಿಂಡು ಅಪಾರ ಪ್ರಮಾಣದಲ್ಲಿ ಕೈಗೆ ಬಂದಿದ್ದAತಹ ಫಸಲು ಹಾನಿ ಮಾಡಿವೆ. ಬಳಿಕ ಹೆಬ್ಬಾಲೆ ಚಂದ್ರು, ಹೊಸಕೋಟೆ ವೆಂಕಟೇಶ್ ಎಂಬವರು ಬೆಳೆದಿದ್ದ ಸಿಹಿ ಗೆಣಸಿನ ಫಸಲನ್ನು ಕಿತ್ತು ತಿಂದು ಹಸಿದ ಹೊಟ್ಟೆ ತುಂಬಿಸಿಕೊAಡಿವೆ. ಕಾಡಾನೆಗಳು ತೆರಳುವ ಮಾರ್ಗ ಮಧ್ಯೆ ಸಿಕ್ಕ ಕೃಷ್ಣಶೆಟ್ಟಿ

ಎಂಬವರಿಗೆ ಸೇರಿದ ಕಟಾವಿಗೆ ಬಂದಿದ್ದAತಹ

(ಮೊದಲ ಪುಟದಿಂದ) ರಾಗಿ ಫಸಲನ್ನು ತಿಂದು ತುಳಿದು ಹಾನಿ ಮಾಡಿವೆ. ಅಷ್ಟೇ ಅಲ್ಲ ತಾವು ಬೆಳೆದ ಕೃಷಿ ಫಸಲುಗಳಿಗೆ ನೀರು ಹರಿಸಲು ಅಳವಡಿಸಿದ್ದ ಪೈಪುಗಳನ್ನು ತುಳಿದು ಹಾನಿಪಡಿಸಿವೆ ಎಂದು ಸಂತ್ರಸ್ತ ಕೃಷ್ಣಶೆಟ್ಟಿ ದೂರಿದರು.

ಕಾಡಿನೊಳಗೆ ಕಾಡಾನೆಗಳು ತಿನ್ನುವಂತಹ ಯಾವುದೇ ಮರ ಗಿಡಗಳು ಉಳಿದಿಲ್ಲ ಹಾಗೂ ಬೆಳೆದಿಲ್ಲ. ಕಾಡಾನೆಗಳಿಗೆ ಇಷ್ಟವಾದ ವಿವಿಧ ಮರಗಳ ತೊಗಟೆಗಳು ಕೂಡ ಕಾಡಿನಲ್ಲಿ ಇಲ್ಲದ ಕಾರಣ ಕಾಡಾನೆಗಳು ನಾವು ಬೆಳೆದ ಫಸಲು ಹುಡುಕಿ ಬರುತ್ತಿವೆ. ಪ್ರತೀ ವರ್ಷವೂ ಇದೇ ರೀತಿ ಬೆಳೆ ನಷ್ಟವಾದರೆ ಏನು ಮಾಡೋದು ಹೇಳಿ ಎನ್ನುತ್ತಾರೆ ಕೃಷಿಕ ವೆಂಕಟೇಶ್.