ಪೊನ್ನAಪೇಟೆ, ಡಿ. ೩೧: ಮಂಗಳೂರು ವಿಶ್ವ ವಿದ್ಯಾನಿಲಯ ಹಾಗೂ ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ, ಹಾಕಿ ಕೂರ್ಗ್ನ ಸಹಕಾರದೊಂದಿಗೆ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ಟರ್ಫ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ಮಹಿಳಾ ಹಾಕಿ ಪಂದ್ಯಾವಳಿಯಲ್ಲಿ ಮೈಸೂರು ಯೂನಿವರ್ಸಿಟಿ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿತು.
ಪAದ್ಯಾವಳಿಯುದ್ದಕ್ಕೂ ಕೆಚ್ಚೆದೆಯ ಪ್ರದರ್ಶನ ತೋರಿದ ತಮಿಳುನಾಡಿನ ಭಾರತೀಯಾರ್ ಯೂನಿವರ್ಸಿಟಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ರನ್ನರ್ ಸ್ಥಾನ ಪಡೆದುಕೊಂಡಿತು.
ಮAಗಳೂರು ಯೂನಿವರ್ಸಿಟಿ ೩ನೇ ಸ್ಥಾನ ಪಡೆದುಕೊಂಡರೆ, ಮದ್ರಾಸ್ ಯೂನಿವರ್ಸಿಟಿ ೪ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
(ಮೊದಲ ಪುಟದಿಂದ) ಇಂದು ನಡೆದ ಲೀಗ್ ಪಂದ್ಯದಲ್ಲಿ ಮಂಗಳೂರು ಯೂನಿವರ್ಸಿಟಿ, ಮದ್ರಾಸ್ ಯೂನಿವರ್ಸಿಟಿಯನ್ನು ೪-೦ ಗೋಲುಗಳ ಅಂತರದಲ್ಲಿ ಸೋಲಿಸಿತು. ವಿಜೇತ ತಂಡದ ಪರವಾಗಿ ಎಂ.ಜಿ.ಲೀಲಾವತಿ ೭, ೯ ಹಾಗೂ ೪೫ ನೇ ನಿಮಿಷದಲ್ಲಿ ಹ್ಯಾಟ್ರಿಕ್ ಗೋಲು ಬಾರಿಸಿದರು. ೯ನೇ ನಿಮಿಷದಲ್ಲಿ ಅಪ್ಸರ ೧ ಗೋಲು ಹೊಡೆದರು.
ಮತ್ತೊಂದು ರೋಚಕ ಪಂದ್ಯದಲ್ಲಿ ಮೈಸೂರ್ ಯೂನಿವರ್ಸಿಟಿ, ಭಾರತೀಯ ಯೂನಿವರ್ಸಿಟಿಯನ್ನು ೩-೧ ಗೋಲಿನ ಅಂತರದಿAದ ಮಣಿಸಿ ಅಂಕಪಟ್ಟಿಯಲ್ಲಿ ಮೊದಲನೇ ಸ್ಥಾನವನ್ನು ಕಾಯ್ದುಕೊಂಡಿತು. ಮೈಸೂರು ಯೂನಿವರ್ಸಿಟಿ ಪರ ಸಂದ್ಯಾ, ೫ ಹಾಗೂ ೨೧ ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಸದುಪಯೋಗಪಡಿಸಿ ಕೊಂಡು ಭರ್ಜರಿ ೨ ಗೋಲು ಬಾರಿಸಿದರು. ಶೈನ್ ತಂಗಮ್ಮ ೪೭ ನೇ ನಿಮಿಷದಲ್ಲಿ ೧ ಗೋಲು ಹೊಡೆದರು. ಭಾರತೀಯರ್ ಯೂನಿವರ್ಸಿಟಿಯ ಕೃಷ್ಣಪ್ರಿಯ ೨೫ ನೇ ನಿಮಿಷದಲ್ಲಿ ತಂಡದ ಪರ ಏಕೈಕ ಗೋಲು ಹೊಡೆದು ಸೋಲಿನ ಅಂತರ ತಗ್ಗಿಸಿದರು.
ಭಾರತೀಯಾರ್ ಯೂನಿವರ್ಸಿಟಿ ಮತ್ತು ಮದ್ರಾಸ್ ಯೂನಿವರ್ಸಿಟಿ ನಡುವಿನ ಪಂದ್ಯದಲ್ಲಿ, ಮದ್ರಾಸ್ ಯೂನಿವರ್ಸಿಟಿಯನ್ನು ಭಾರತೀಯಾರ್ ಯೂನಿವರ್ಸಿಟಿ ೧-೦ ಗೋಲಿನಿಂದ ಸೋಲಿಸಿತು. ವಿಜೇತ ತಂಡದ ಪರ ಮಲರ್ವಿಜಿ ಗೆಲುವಿನ ಗೋಲು ಬಾರಿಸಿದರು.
ಮಂಗಳೂರು ಯೂನಿವರ್ಸಿಟಿ ಮತ್ತು ಮೈಸೂರು ಯೂನಿವರ್ಸಿಟಿ ನಡುವಿನ ಕೊನೆಯ ಲೀಗ್ ಪಂದ್ಯದಲ್ಲಿ ಉಭಯ ತಂಡ ಸಮಬಲದ ಹೋರಾಟ ನೀಡಿದವು. ಎರಡೂ ತಂಡಗಳೂ ಗೋಲು ಗಳಿಸಲು ವಿಫಲವಾದ ಕಾರಣ ಪಂದ್ಯ ಸಮಬಲ ಸಾಧಿಸಿತು. ನಾಲ್ಕು ತಂಡಗಳು ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಮಟ್ಟದ ಮಹಿಳಾ ಹಾಕಿ ಪಂದ್ಯಾವಳಿಗೆ ಅರ್ಹತೆ ಪಡೆದುಕೊಂಡಿವೆ.
ವೈಯಕ್ತಿಕ ಪ್ರಶಸ್ತಿ
ಬೆಸ್ಟ್ ಗೋಲ್ ಕೀಪರ್ ಪ್ರಶಸ್ತಿಯನ್ನು ಭಾರತೀಯರ್ ಯೂನಿವರ್ಸಿಟಿಯ ಹರಿಪ್ರಿಯ, ಬೆಸ್ಟ್ ಡಿಫೆಂಡರ್ ಪ್ರಶಸ್ತಿಯನ್ನು ಮೈಸೂರು ಯೂನಿವರ್ಸಿಟಿಯ ಆದಿರ, ಬೆಸ್ಟ್ ಫಾರ್ವರ್ಡ್ ಪ್ರಶಸ್ತಿಯನ್ನು ಮಂಗಳೂರು ಯೂನಿವರ್ಸಿಟಿಯ ಪವಿತ್ರ, ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಯನ್ನು ಮೈಸೂರು ಯೂನಿವರ್ಸಿಟಿಯ ಸೌಮ್ಯಶ್ರೀ ಪಡೆದುಕೊಂಡರು.
ಫೇರ್ ಪ್ಲೇ ಪ್ರಶಸ್ತಿಯನ್ನು ಮಂಗಳೂರು ಯೂನಿವರ್ಸಿಟಿ ಪಡೆದುಕೊಂಡಿತು.
ಸಮಾರೋಪ :
ವೀರಾಜಪೇಟೆ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಟಿ.ಕೆ.ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಯಡಪಡಿತ್ತಾಯ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ.ಸಿ.ಜಿ.ಕುಶಾಲಪ್ಪ, ಪೊನ್ನಂಪೇಟೆ ಸಾಯಿ ಶಂಕರ ವಿದ್ಯಾಸಂಸ್ಥೆಯ ಅಧ್ಯಕ್ಷ ಝರು ಗಣಪತಿ, ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕ ಜೆರಾಲ್ಡ್ ಸಂತೋಷ್ ಡಿಸೋಜ, ಬೆಂಗಳೂರು ಕೊಡಗು ಸಮಾಜದ ಮಲ್ಲೇಂಗಡ ಮೀರಾ, ದಾನಿಗಳಾದ ಬೊಳ್ಯಪಂಡ ಬೋಪಣ್ಣ, ಹಾಕಿ ಪಂದ್ಯಾವಳಿಯ ಸಂಚಾಲಕಿ ಕಂಬಿರAಡ ರಾಕಿ ಗಣಪತಿ ಇನ್ನಿತರರು ವಿಜೇತರಿಗೆ ಬಹುಮಾನ ವಿತರಿಸಿದರು.
ಈ ಸಂದರ್ಭ ಹಾಕಿ ಕೂರ್ಗ್ನ ಕಾರ್ಯದರ್ಶಿ ಹಾಗೂ ಅಂರ್ರಾಷ್ಟಿçÃಯ ಹಾಕಿ ಆಟಗಾರ ಬುಟ್ಟಿಯಂಡ ಚಂಗಪ್ಪ ಹಾಗೂ ಹಾಕಿ ಕೂರ್ಗ್ನ ನಿರ್ದೇಶಕ ಹಾಗೂ ಹಾಕಿ ತರಬೇತುದಾರ ಮಿನ್ನಂಡ ಜೋಯಪ್ಪ ಅವರನ್ನು ಸನ್ಮಾನಿಸಲಾಯಿತು.
ಪಂದ್ಯಾವಳಿಯ ತೀರ್ಪು ಗಾರರಾಗಿ ಕೊಕ್ಕಂಡ ರೋಷನ್, ಮೂಕಚಂಡ ನಾಚಪ್ಪ, ಕುಪ್ಪಂಡ ದಿಲನ್, ನೆಲ್ಲ ಮಕ್ಕಡ ಪವನ್, ಅರುಣ, ಕೊಂಡಿರ ಕೀರ್ತಿ ಮುತ್ತಪ್ಪ, ಕೋಡಿಮಣಿಯಂಡ ಗಣಪತಿ, ಸುಳ್ಳಿಮಾಡ ಸುಬ್ಬಯ್ಯ ಹಾಗೂ ಅಪ್ಪಚ್ಚು ಕಾರ್ಯ ನಿರ್ವಹಿಸಿದರು. ನೆರ್ಪಂಡ ಹರ್ಷ ಮಂದಣ್ಣ ವೀಕ್ಷಕ ವಿವರಣೆ ನೀಡಿದರು.
-ಚನ್ನನಾಯಕ