ಸೋಮವಾರಪೇಟೆ, ಡಿ.೩೧: ಭಾರತ ಹಾಕಿ ತರಬೇತಿ ಶಿಬಿರಕ್ಕೆ ಕರ್ನಾಟಕ ರಾಜ್ಯದಿಂದ ಐವರು ಆಯ್ಕೆಯಾಗಿದ್ದು, ಇದರಲ್ಲಿ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಈರ್ವರು ಅವಕಾಶ ಪಡೆದಿದ್ದಾರೆ.

ಪಟ್ಟಣದ ಮಹದೇಶ್ವರ ಬ್ಲಾಕ್ ನಿವಾಸಿ ಬಿ.ಎಂ. ಲಿಖಿತ್, ನಗರದ ಆಭರಣ್ ಸುದೇವ್ ಅವರುಗಳು ಇದೇ ಪ್ರಥಮವಾಗಿ ಭಾರತ ತಂಡದ ಹಿರಿಯರ ಹಾಕಿ ತರಬೇತಿ ಶಿಬಿರದಲ್ಲಿ ಸ್ಥಾನ ಪಡೆದಿದ್ದು, ಹಾಸನ ಜಿಲ್ಲೆಯ ಶೇಷೇಗೌಡ, ಬೆಂಗಳೂರಿನ ಮಹಮ್ಮದ್ ರಾಹೀಲ್, ಭರತ್ ಕೆ.ಆರ್. ಸಹ ಭಾಗಿಯಾಗಲಿದ್ದಾರೆ.

ಶಿಬಿರದಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಮುಂದಿನ ದಿನಗಳಲ್ಲಿ ಭಾರತ ಹಾಕಿ ತಂಡದಲ್ಲಿ ಸ್ಥಾನ ಪಡೆಯುವ ಎಲ್ಲಾ ಅವಕಾಶಗಳಿವೆ. ಆಭರಣ್ ಹಾಗೂ ಲಿಖಿತ್ ಅವರುಗಳು ಉತ್ತಮ ಹಾಕಿಪಟುಗಳಾಗಿರುವ ಹಿನ್ನೆಲೆ ಉತ್ತಮ ಪ್ರದರ್ಶನ ನಿರೀಕ್ಷಿಸಬಹುದಾಗಿದೆ.

ಭಾರತ ಹಾಕಿ ತರಬೇತಿ ಕ್ಯಾಂಪ್‌ನಲ್ಲಿ ಜಿಲ್ಲೆಯ ಈರ್ವರು

(ಮೊದಲ ಪುಟದಿಂದ)

ತಾ. ೩ ರಿಂದ ಬೆಂಗಳೂರಿನಲ್ಲಿ ರಾಷ್ಟಿçÃಯ ಹಿರಿಯರ ಪುರುಷರ ಹಾಕಿ ತರಬೇತಿ ಶಿಬಿರ ಆರಂಭಗೊಳ್ಳಲಿದ್ದು, ಹಾಕಿ ಇಂಡಿಯಾದಿAದ ಒಟ್ಟು ೬೦ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಕೊಡಗಿನ ಈರ್ವರು ಸ್ಥಾನ ಪಡೆದಿರುವುದು ಕ್ರೀಡಾ ಜಿಲ್ಲೆಗೆ ಹೆಮ್ಮೆ ತರಿಸಿದೆ.