ಕಡಂಗ, ಡಿ. ೩೧: ೨೦೨೧ ೨೨ನೇ ಸಾಲಿನ ೭ನೇ ವರ್ಷದ ಕಡಂಗ ಪ್ರೀಮಿಯರ್ ಲೀಗ್ ಅನ್ನು ಕಡಂಗ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕೊಡಗು ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ನೆಲ್ಲಚಂಡ ಕಿರಣ್ ಕಾರ್ಯಪ್ಪ ಅವರು ಉದ್ಘಾಟಿಸಿದರು. ನಂತರ ಮಾತನಾಡಿ ಇಂತಹ ಕ್ರೀಡೆಗಳಿಂದ ಸಮಾಜದಲ್ಲಿ ಸೌಹಾರ್ದತೆ ಕಾಣಬಹುದೆಂದು ನುಡಿದರು. ಶಾಲಾ ಮಕ್ಕಳ ಪ್ರಾರ್ಥನೆ ಮುಖಾಂತರ ಪ್ರಾರಂಭವಾಯಿತು. ಇತ್ತೀಚೆಗೆ ಹುತಾತ್ಮರಾದ ಸಿಡಿಎಸ್ ಜನರಲ್ ಬಿಪಿನ್ ರಾವತ್ ಮತ್ತು ಇತರ ಯೋಧರನ್ನು ಹಾಗೂ ಕನ್ನಡ ಚಿತ್ರರಂಗದ ಡಾ. ಪುನೀತ್ ರಾಜಕುಮಾರ್ ಅವರನ್ನು ನೆನೆದು ಮೌನಾಚರಣೆಯ ಮುಖಾಂತರ ಕ್ರೀಡಾಕೂಟವನ್ನು ಪ್ರಾರಂಭಿಸಲಾಯಿತು. ಕ್ರೀಡಾಕೂಟದ ಆಯೋಜಕರಿಂದ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಲಾಯಿತು. ಮುಖ್ಯ ಅತಿಥಿಗಳಾಗಿ ಸರಕಾರಿ ಶಾಲೆಯ ಮುಖ್ಯೋಪಾ ಧ್ಯಾಯಿನಿ ಕೆ.ಎಂ. ದೇಚಮ್ಮ ಮತ್ತು ಶಾಲಾ ಶಿಕ್ಷಕ ವೃಂದದವರಾದ ರಂಜಿ, ಸುಗುಣ ಪೊನ್ನಪ್ಪ, ಕೆ.ಜಿ. ಪ್ರಕಾಶ್, ಸಂಜು ಕಾಳಯ್ಯ, ರೋಷನ್, ಅಬ್ದುಲ್ಲಾ, ಸುಲೈಮಾನ್, ವಿಠಲ, ಸಲಾಂ, ನೌಶಾದ್, ರಜಾಕ್, ಅಬ್ದುರಹ್ಮಾನ್, ಜುನೈದ್ ಕೆ.ಎಂ. ಮತ್ತು ಕೆ.ಪಿ.ಎಲ್. ೭ನೇ ಅವೃತಿಯ ಅಧ್ಯಕ್ಷ ರಹೀಂ ಭಾಗವಹಿಸಿದ್ದರು.