ಮಡಿಕೇರಿ, ಡಿ. ೩೦: ದಿ ನ್ಯೂಸ್ ಪೇಪರ್ಸ್ ಆಫ್ ಕರ್ನಾಟಕ ವತಿಯಿಂದ ಈ ಬಾರಿ ರಾಜ್ಯದ ೬೬ ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗಿದ್ದು, ಕೊಡಗಿನವರಾದ ಚಿತ್ರನಟಿ ಉದ್ದಪಂಡ ಹರ್ಷಿಕಾ ಪೂಣಚ್ಚ ಅವರು ಇವರಲ್ಲಿ ಒಬ್ಬರಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿನ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಇವರನ್ನು ಪರಿಗಣಿಸಲಾಗಿದೆ.

ನಟಿ ಪದ್ಮಶ್ರೀ ಪ್ರಶಸ್ತಿ ವಿಜೇತರಾದ ತುಳಸಿಗೌಡ, ಚಿತ್ರತಾರೆ ಶ್ರುತಿ, ಮಂಜಮ್ಮ ಜೋಗತಿ ಅವರೊಂದಿಗೆ ಹರ್ಷಿಕಾಗೂ ಪ್ರಶಸ್ತಿ ನೀಡಲಾಗಿದ್ದು, ಎಲ್ಲರ ಪೈಕಿ ಇವರು ಅತ್ಯಂತ ಕಿರಿಯವರಾಗಿದ್ದಾರೆ. ಬೆಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇವರು ಇತರ ಸಾಧಕರೊಂದಿಗೆ ಪ್ರಶಸ್ತಿ ಸ್ವೀಕರಿಸಿದ್ದಾರೆ. ಮಾಜಿ ಸಚಿವರಾದ ಬಸವರಾಜ ಹೊರಟ್ಟಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.