ಮಡಿಕೇರಿ, ಡಿ. ೩೦ : ಝೀ ಕನ್ನಡ ವಾಹಿನಿಯ ರಿಯಾಲಿಟಿ ಶೋ ಡಾನ್ಸ್ ಕರ್ನಾಟಕ ಡಾನ್ಸ್ ನ ವಿನ್ನರ್ ಆದ ಕೊಡಗಿನ ರಾಹುಲ್ ರಾವ್ ವಿದ್ಯಾರ್ಥಿಗಳಿಗೆ ವಿಶೇಷ ನೃತ್ಯ ತರಬೇತಿ ನೀಡಿದರು. ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್ ನೃತ್ಯ ಸಂಸ್ಥೆಯಲ್ಲಿ ಏರ್ಪಡಿಸಲಾಗಿರುವ ತರಬೇತಿ ಕಾರ್ಯಾಗಾರದಲ್ಲಿ ನೃತ್ಯ ಪ್ರಾಕಾರವಾದ ಕ್ರಪಿಂಗ್ ಮತ್ತು ಹಿಪ್ ಹಾಪ್ ಪ್ರಾಕಾರದ ತರಬೇತಿಯನ್ನು ಸತತ ಎರಡು ದಿನಗಳ ಕಾಲ ವಿದ್ಯಾರ್ಥಿಗಳಿಗೆ ನೀಡಿದರು. ತಮ್ಮ ಸುದೀರ್ಘ ೧೫ ವರ್ಷಗಳ ಸತತ ಪ್ರಯತ್ನ ಹಾಗೂ ಡಿ ಕೆ ಡಿ ಯ ಅನುಭವವನ್ನು ಹಂಚಿಕೊAಡರು. ಯಾವುದೇ ವಿಷಯದಲ್ಲಿ ತಾಳ್ಮೆ ಬಹು ಮುಖ್ಯ ಎಂದು ತಿಳಿಸಿದರು.

ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು. ತರಬೇತಿಯಲ್ಲಿ ಮೈಸೂರಿನ ಸಿಗ್ನೇಚೆರ್ ಡಾನ್ಸ್ ಕಂಪೆನಿಯ ಸಂಸ್ಥಾಪಕ ಮತ್ತು ಕೊರಿಯೋಗ್ರಾಫರ್ ಆದ ವಿನೋದ್ ಕರ್ಕೇರ ಮಕ್ಕಳಿಗೆ ಹಾಗೂ ಪೋಷಕರಿಗೆ ನೃತ್ಯದ ಪ್ರಾಮುಖ್ಯತೆ ಬಗ್ಗೆ ಹಾಗೂ ಪೋಷಕರ ಬೆಂಬಲ ಮಕ್ಕಳ ಸಾಧನೆಗೆ ಬಹು ಮುಖ್ಯ ಎಂದು ತಿಳಿಸಿದರು. ಸಂಸ್ಥೆಯ ಪೋಷಕರಾದ ರಂಜಿತ್ ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆ ಮುಖ್ಯ ಎಂದರಲ್ಲದೆ, ವಿದ್ಯಾರ್ಥಿಗಳಿಗೆ ವಿರಾಟ್ ಕೊಹ್ಲಿಯ ಉದಾಹರಣೆ ನೀಡಿ ಉತ್ತೇಜಿಸಿದರು. ಸಂಸ್ಥೆಯ ಪೋಷಕರಾದ ಸವಿತಾ ಅರುಣ್ ಕೊರಿಯೋಗ್ರಾಫರ್ ಮಹೇಶ್, ಪೋಷಕರು ಹಾಜರಿದ್ದರು.