ಸಿದ್ದಾಪುರ, ಡಿ ೩೦: ನೆಲ್ಲಿಹುದಿಕೇರಿ ಗ್ರಾ.ಪಂ.ಗೆ ಖಾಯಂ ಪಿಡಿಓ ಹಾಗೂ ಇನ್ನಿತರ ಅಧಿಕಾರಿಗಳನ್ನು ನೇಮಿಸಬೇಕೆಂದು ಒತ್ತಾಯಿಸಿ ಜ.೧೦ ರಂದು ಸಿಪಿಐ(ಎಂ) ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗುವುದೆಂದು ಸಿಪಿಐ(ಎಂ) ಕಾರ್ಯದರ್ಶಿ ಪಿ.ಆರ್ ಭರತ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಕುರಿತು ಮಾಹಿತಿ ನೀಡಿದ ಅವರು, ನೆಲ್ಯಹುದಿಕೇರಿ ಗ್ರಾ.ಪಂ ಗ್ರೇಡ್ ೧ ಪಂಚಾಯಿತಿ ಆಗಿದ್ದರೂ ಕೂಡ ಇಲ್ಲಿ ಖಾಯಂ ಪಿಡಿಓ ನೇಮಕಗೊಂಡಿಲ್ಲ. ಪಿಡಿಓ ಇಲ್ಲದೇ ಎರಡು ಸಾಮಾನ್ಯ ಸಭೆಗಳು ನಡೆದಿದೆ. ಪಿಡಿಓ ನೇಮಕ ಮಾಡಲು ಇಚ್ಛಾಶಕ್ತಿಯ ಕೊರತೆ ಇದೆ ಎಂದರು. ನೆಲ್ಯಹುದಿಕೇರಿಯ ಭಾಗದಲ್ಲಿ ಕಾರ್ಮಿಕರು ಹೆಚ್ಚಾಗಿದ್ದು, ದೈನಂದಿನ ಕೆಲಸ ಕಾರ್ಯಗಳಿಗೆ ಪಂಚಾಯಿತಿ ಕಚೇರಿಗೆ ಆಗಮಿಸುತ್ತಿದ್ದು, ಕೆಲಸಗಳು ನಡೆಯದೇ ಹಿಂತಿರುಗಿ ಹೋಗುವ ಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಜ. ೧೦ ರಂದು ಗ್ರಾ.ಪಂ ಕಚೇರಿ ಎದುರು ಬೆಳಿಗ್ಗೆ ೧೦.೩೦ ಕ್ಕೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆಂದರು. ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪದಾಧಿಕಾರಿಗಳಾದ ಎಂ.ಜಿ ಜೋಸ್, ಮೋಣಪ್ಪ, ರವಿ ಹಾಜರಿದ್ದರು.