ಮಡಿಕೇರಿ, ಡಿ. ೩೦: ಕೊರೊನಾ-ಓಮಿಕ್ರಾನ್ ಪರಿಸ್ಥಿತಿಯಿಂದಾಗಿ ತಾ. ೨೮ ರಿಂದ ಜ. ೭ರ ತನಕ ರಾತ್ರಿ ೧೦ ರಿಂದ ಬೆಳಿಗ್ಗೆ ೫ರ ತನಕ ರಾಜ್ಯ ಸರಕಾರ ರಾತ್ರಿ ಕರ್ಫ್ಯೂ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರವಾದ ಮಡಿಕೇರಿ ನಗರದಲ್ಲಿಯೂ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ತಾ. ೨೮ ಹಾಗೂ ೨೯ ರಂದು ರಾತ್ರಿ ನಗರದಲ್ಲಿ ಅನವಶ್ಯಕವಾಗಿ ಓಡಾಟ ನಡೆಸುತ್ತಿದ್ದ ವಾಹನಗಳನ್ನು ತಡೆದು ಎಚ್ಚರಿಕೆ ನೀಡಲಾಯಿತು. ಅಲ್ಲದೆ ಅಂಗಡಿ-ಮುAಗಟ್ಟುಗಳನ್ನು ನಿಗದಿತ ಸಮಯಕ್ಕೆ ಮುಚ್ಚಿಸಲಾಗುತ್ತಿದೆ. ನಗರ ವೃತ್ತ ನಿರೀಕ್ಷಕ ಪಿ.ವಿ. ವೆಂಕಟೇಶ್, ಠಾಣಾಧಿಕಾರಿ ಅಂತಿಮ ಅವರ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಎರಡು ದಿನಗಳಲ್ಲಿ ೨೨ ಪ್ರಕರಣಗಳನ್ನು ದಾಖಲಿಸಿ ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ. ಸರಕಾರ ಘೋಷಿಸಿರುವ ದಿನಾಂಕದವರೆಗೂ ಕಾರ್ಯಾಚರಣೆ ನಡೆಯಲಿದೆ ಎಂದು ನಗರ ವೃತ್ತ ನಿರೀಕ್ಷಕ ವೆಂಕಟೇಶ್ ತಿಳಿಸಿದ್ದಾರೆ.