ಕರಿಕೆ, ಡಿ. ೩೦: ಪಶ್ಚಿಮ ಘಟ್ಟಗಳ ಕಾರ್ಯಪಡೆ ಅಧ್ಯಕ್ಷ ರವಿಕುಶಾಲಪ್ಪ ಅವರು ಅಧಿಕಾರಿಗಳೊಂದಿಗೆ ನಾಗರಹೊಳೆ ರಾಷ್ಟಿçÃಯ ಉದ್ಯಾನವನ ದಂಚಿನ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಾಗರಹೊಳೆ ರಾಷ್ಟಿçÃಯ ಉದ್ಯಾನವನದ ಅಂಚಿನ ಪ್ರದೇಶದಲ್ಲಿ ಬರುವ ಕುಟ್ಟ, ತೋಲ್‌ಪಟ್ಟಿ ಭಾಗಕ್ಕೆ ತೆರಳಿದ ಅವರು ಅಲ್ಲಿನ ಆನೆ ಕಾರಿಡಾರ್ ಕುರಿತಾಗಿ ಮಾಹಿತಿ ಪಡೆದರು.

ಬ್ರಹ್ಮಗಿರಿ ಅಭಯಾರಣ್ಯ ಮತ್ತು ನಾಗರಹೊಳೆ ರಾಷ್ಟಿçÃಯ ಉದ್ಯಾನವನದ ಆನೆ ಕಾರಿಡಾರ್ ಮತ್ತು ಅಂತರ್ ರಾಜ್ಯ ಗಡಿ ಅರಣ್ಯ ತಪಾಸಣೆ ಕೇಂದ್ರ ವೀಕ್ಷಣೆ ಮಾಡಿ ಅರಣ್ಯ ಸಿಬ್ಬಂದಿಗಳೊಡನೆ ಮಾಹಿತಿ ಪಡೆಯಲಾಯಿತು. ನಂತರ ಅಭಯಾರಣ್ಯದೊಳಗಿನ ಕಳ್ಳ ಬೆೆÃಟೆ ಶಿಬಿರಕ್ಕೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಗಳ ಮೂಲಭೂತ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಶ್ರೀನಿವಾಸ ನಾಯಕ್, ವನ್ಯಜೀವಿ ವಲಯದ ಉಪ ವಲಯ ಅರಣ್ಯ ಅಧಿಕಾರಿಗಳಾದ ದೇಚಮ್ಮ, ವೀರೇಂದ್ರ ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.

ಆನೆ-ಮಾನವ ಸಂಘರ್ಷ ಕುರಿತಾಗಿ ಭೌಗೋಳಿಕ ಪರಿಸ್ಥಿತಿಗೆ ಅನುಗುಣವಾಗಿ ಕ್ರಮಕೈಗೊಳ್ಳಲು ಈ ಸಂದರ್ಭ ಸೂಚಿಸಲಾಯಿತು. ಸೋಲಾರ್ ಬೇಲಿ ಅಳವಡಿಕೆ, ರೈಲ್ವೆ ಬ್ಯಾರಿಕೇಡ್ ಅಳವಡಿಕೆ ಕುರಿತು ಅರಣ್ಯ ಹಾಗೂ ಜನರಿಗೆ ತೊಂದರೆ ಆಗದಂತೆ ಯೋಜನೆ ರೂಪಿಸಲು ವಿವಿಧ ವನ್ಯಜೀವಿ ಅರಣ್ಯ ಉಪವಿಭಾಗಗಳ ಅಧಿಕಾರಿಗಳ ಸಭೆ ನಡೆಸುವುದಾಗಿ ಅಧ್ಯಕ್ಷರು ತಿಳಿಸಿದ್ದಾರೆ. ಕುಟ್ಟ ಕೋವಿಡ್ ತಪಾಸಣಾ ಗೇಟ್ ಅನ್ನೂ ಈ ಸಂದರ್ಭ ಅವರು ಪರಿಶೀಲಿಸಿದರು.

-ಸುಧೀರ್ ಹೊದ್ದೆಟ್ಟಿ