ನಾಪೋಕ್ಲು, ಡಿ. ೩೦: ಬೇಂಗೂರು-ಬಲ್ಲಮಾವಟಿ ಗ್ರಾಮಗಳ ನಡುವೆ ದೋಣಿಕಡುವಿನಲ್ಲಿ ನಬಾರ್ಡ್ ವತಿಯಿಂದ ೬೦ ಲಕ್ಷ ರೂ.ವೆಚ್ಚದಲ್ಲಿ ಸೇತುವೆ ನಿರ್ಮಾಣಗೊಳ್ಳಲಿದ್ದು ಗ್ರಾಮಸ್ಥರ ಸಂಚಾರಕ್ಕೆ ಸಾಕಷ್ಟು ಅನುಕೂಲವಾಗಲಿದೆ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.
ಸಮೀಪದ ಚೇರಂಬಾಣೆ ಸಮೀಪದ ಬಿ.ಬಾಡಗ ಗ್ರಾಮದ ಕಾವೇರಿ ಹೊಳೆಗೆ ಬಾಡಗ-ಬಲ್ಲಮಾವಟಿ ಸಂಪರ್ಕ ಸೇತುವೆ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈ ಸಂದರ್ಭ ಬೇಂಗೂರು ಗ್ರಾ.ಪಂ. ಅಧ್ಯಕ್ಷೆ ಪಿ.ಎಂ.ಯಶೋಧ, ಅಧ್ಯಕ್ಷೆ ಸ್ವಾತಿ ಟಿ.ಕೆ, ಸದಸ್ಯರಾದ ಕಿರಣ್ ಕುಮಾರ್, ಟಿ.ಎಸ್.ಚೇತನ್, ಕಿಶೋರ್ ಕುಮಾರ್ ಕೆ.ವಿ., ಮಾಜಿ ಅಧ್ಯಕ್ಷ ಕೆ.ಬಿ.ಅಶೋಕ್, ಶಕ್ತಿ ಕೇಂದ್ರದ ಸಹಪ್ರಮುಖ್ ಮನೋಹರ್ ಕೆ.ಕೆ, ಪಿಡಿಒ ಬಿಪಿನ್, ಇಂಜಿನಿಯರ್ ಜವರೇಗೌಡ ಸೇರಿದಂತೆ ಗ್ರಾಮಸ್ಥರು, ಸಾರ್ವಜನಿಕರು ಇದ್ದರು.
ದೋಣಿಕಡುವಿನಲ್ಲಿ ಸೇತುವೆ ನಿರ್ಮಾಣಕ್ಕೆ ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸಿದ್ದರು. ಸೇತುವೆ ಕ್ರಮಿಸಲು ದೋಣಿಯೇ ಪ್ರಮುಖ ಸಾಧನವಾಗಿತ್ತು. ಇದೀಗ ಸೇತುವೆ ನಿರ್ಮಾಣಕ್ಕೆ ಚಾಲನೆ ದೊರೆತಿರುವುದ ರಿಂದ ಗ್ರಾಮಸ್ಥರ ಬಹುದಿನದ ಕನಸು ಈಡೇರಲಿದೆ.