ಭಾಗಮಂಡಲ, ಡಿ. ೩೦: ಇಲ್ಲಿನ ನಾಡಕಚೇರಿಯ ದುರಸ್ತಿ ಕಾರ್ಯ ಕಳಪೆ ಗುಣಮಟ್ಟದಲ್ಲಿ ಕೂಡಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಮೇಲ್ಚಾವಣಿ ಗೋಡೆ ಹಾಗೂ ಮರಮುಟ್ಟುಗಳು ಮಳೆಯಿಂದಾಗಿ ಶಿಥಿಲಾವಸ್ಥೆ ತಲುಪಿದ್ದ ಹಿನ್ನೆಲೆ ದುರಸ್ತಿ ಕಾರ್ಯಕ್ಕಾಗಿ ಸರ್ಕಾರದಿಂದ ರೂ. ೯ ಲಕ್ಷ ಬಿಡುಗಡೆಯಾಗಿದೆ. ಇದೀಗ ದುರಸ್ತಿ ಕಾರ್ಯ ಆರಂಭಗೊAಡಿದ್ದು, ಮೇಲ್ಚಾವಣಿಯ ದುರಸ್ತಿ ಕೆಲಸ ಮುಗಿದಿದೆ.
ಕೆಳಹಂತದ ಗೋಡೆಯ ಕಾರ್ಯ ಹಾಗೂ ಅಳವಡಿಕೆ ಸೇರಿದಂತೆ ಇನ್ನಿತರ ಕೆಲಸಗಳು ಬಾಕಿ ಉಳಿದಿವೆ. ಮೇಲ್ಚಾವಣಿ ಕೆಲಸಕ್ಕಾಗಿ ಹಳೆಯ ಮರಮುಟ್ಟುಗಳನ್ನೇ ಬಳಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದು, ಶಿಥಿಲಾವಸ್ಥೆಯಲ್ಲಿದ್ದ ಹಳೆಯ ಮರಮುಟ್ಟುಗಳನ್ನು ಬಳಸಿದ್ದಲ್ಲದೆ ದುಂಬಿಗಳು ತೂತು ಕೊರೆದಿರುವ ಮರಗಳನ್ನು ಬಳಸಿದ ಬಗ್ಗೆ ಗ್ರಾಮಸ್ಥರು ಆಕ್ಷೇಪಿಸಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮವಹಿಸುವಂತೆ ಸ್ಥಳೀಯ ಪಿ.ಎಂ. ರಾಜೀವ್ ಆಗ್ರಹಿಸಿದ್ದಾರೆ.
-ಸುನಿಲ್