ಮಡಿಕೇರಿ, ಡಿ. ೩೧: ೨೦೨೧-೨೨ನೇ ಸಾಲಿನ ಅಮ್ಮತ್ತಿ ಗ್ರಾಮ ಪಂಚಾಯಿತಿಯ ಅಮ್ಮತ್ತಿ ವಾರ್ಡ್ನ ವಾರ್ಡ್ ಸಭೆಯನ್ನು ತಾ. ೪ ರಂದು ೧೦.೩೦ ಗಂಟೆಗೆ ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ, ಪುಲಿಯೇರಿ ವಾರ್ಡ್ನ ಸಭೆ ೧೨ ಗಂಟೆಗೆ ಇಂಜಿಲಗೆರೆ ಶಾಲೆಯ ಸಭಾಂಗಣದಲ್ಲಿ, ಆನಂದಪುರ ವಾರ್ಡ್ನ ಸಭೆ ೪ ಗಂಟೆಗೆ ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ, ಆಯಾಯ ವಾರ್ಡ್ನ ಸದಸ್ಯರ ಅಧ್ಯಕ್ಷತೆಯಲ್ಲಿ ನಡೆಸಲಾಗುವುದು.
ಅಮ್ಮತ್ತಿ ಗ್ರಾಮ ಪಂಚಾಯಿತಿಯ ೨೦೨೧-೨೨ನೇ ಸಾಲಿನ ಗ್ರಾಮ ಸಭೆಯನ್ನು ತಾ. ೧೨ ರಂದು ಪೂರ್ವಾಹ್ನ ೧೧ ಗಂಟೆಗೆ ಅಮ್ಮತ್ತಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲ್ಲಿ ಅಧ್ಯಕ್ಷೆ ಜಾನು ವೈ ಅವರ ಅಧ್ಯಕ್ಷತೆಯಲ್ಲಿ ಮತ್ತು ನೋಡಲ್ ಅಧಿಕಾರಿಯವರ ಸಮ್ಮುಖದಲ್ಲಿ ನಡೆಯಲಿದೆ.