ವೀರಾಜಪೇಟೆ, ಡಿ. ೩೦: ವೀರಾಜಪೇಟೆ ಪಟ್ಟಣದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು, ವಾಹನ ನಿಲುಗಡೆಗೆ ತೊಂದರೆಯಾಗುತ್ತಿದೆ. ಸಮರ್ಪಕ ವಾಹನ ನಿಲುಗಡೆಗೆ ವ್ಯವಸ್ಥೆ ಇಲ್ಲದ ಕಾರಣ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿದರೆ ಪೊಲೀಸರು ಮನಬಂದAತೆ ದಂಡ ವಿಧಿಸುತ್ತಿದ್ದಾರೆ. ಪೊಲೀಸರ ವರ್ತನೆ ಇದೇ ರೀತಿ ಮುಂದುವರೆದರೆ ಪ್ರತಿಭಟನೆ ಅನಿವಾರ್ಯ ಎಂದು ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷ ಕರ್ನಂಡ ರಘು ಸೋಮಯ್ಯ ಹಾಗೂ ನಗರ ಚೇಂಬರ್ ಆಫ್ ಕಾರ್ಸ್ ಅಧ್ಯಕ್ಷ ಮಾದಪಂಡ ಕಾಶಿ ಕಾವೇರಪ್ಪ ಎಚ್ಚರಿಸಿದ್ದಾರೆ.
ಪಟ್ಟಣ ಚಿಕ್ಕದಾಗಿದ್ದು, ದಿನದಿಂದ ದಿನಕ್ಕೆ ಪಟ್ಟಣದಲ್ಲಿ ಓಡಾಡುವ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಪ್ರತಿದಿನ ಪೊಲೀಸರು, ಹೋಂಗಾರ್ಡ್ ಹಾಗೂ ವಾಹನ ಚಾಲಕರ ಮಧ್ಯೆ ವಾಗ್ವಾದ ನಡೆಯುತ್ತದೆ. ನಾಲ್ಕುಚಕ್ರ ವಾಹನಗಳ ಪಾರ್ಕಿಂಗ್ ಸ್ಥಳದಲ್ಲಿ ಆಟೋಗಳು, ಗೂಡ್ಸ್ ಆಟೋಗಳು, ತೊಟ್ಟಿ ಜೀಪ್ಗಳು ನಿಲುಗಡೆಗೊಳ್ಳುತ್ತಿವೆ. ಫುಟ್ಪಾತ್ಗಳಲ್ಲಿ ಹಣ್ಣುಹಂಪಲು, ತರಕಾರಿ ಸೇರಿದಂತೆ ಇತರ ಗೃಹೋಪಯೋಗಿ ವಸ್ತುಗಳನ್ನು ಹಾಕಿಕೊಂಡು ಮಾರಾಟ ಮಾಡಲಾಗುತ್ತಿದೆ. ಇದರಿಂದ ಪಾದಚಾರಿಗಳು ರಸ್ತೆಯಲ್ಲಿ ನಡೆದಾಡುವ ಪರಿಸ್ಥಿತಿ ಎದುರಾಗಿದೆ.
ನಾಲ್ಕು ಚಕ್ರ ಪಾರ್ಕಿಂಗ್ ಜಾಗದಲ್ಲಿ ವಾಹನಗಳ ಮೇಲೆ ಹಣ್ಣು ತರಕಾರಿಗಳನ್ನು ಮಾರಾಟ ಮಾಡುವುದರಿಂದ ಹೊರಗಿನಿಂದ ಬರುವ ಸಾರ್ವಜನಿಕರಿಗೆ ಪಾರ್ಕಿಂಗ್ ವ್ಯವಸ್ಥೆ ಇರುವುದಿಲ್ಲ. ವಾಹನದಲ್ಲಿ ಬಂದವರು ಸಾಮಗ್ರಿ ಸರಂಜಾಮುಗಳನ್ನು ಖರೀದಿ ಮಾಡಲು ಬಂದವರು ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿದರೆ ಪೊಲೀಸರು ಒಂದು ಸಾವಿರ ರೂ. ದಂಡ ವಿಧಿಸುತ್ತಾರೆ. ಬದ್ರಿಯ ಜಂಕ್ಷನ್ನಿAದ ಮಟನ್ ಮಾರ್ಕೆಟ್ವರೆಗೆ ಪಾರ್ಕಿಂಗ್ ಅನ್ನು ಖಾಸಗಿ ಅವರು ಗುತ್ತಿಗೆ ತೆಗೆದುಕೊಂಡು ಪೇ ಪಾರ್ಕಿಂಗ್ ನಡೆಸಲಾಗುತ್ತಿದೆ. ಅಲ್ಲಿಯೂ ಕೂಡ ಸಾಗಾಣಿಕ ವಾಹನ, ಆಟೋಗಳನ್ನು ನಿಲ್ಲಿಸಲಾಗುತ್ತಿದೆ. ಸಾರ್ವಜನಿಕರಿಗೆ ಫ್ರೀ ಪಾರ್ಕಿಂಗ್, ಪೇ ಪಾರ್ಕಿಂಗ್ ಯಾವುದು ಲಭಿಸುವುದಿಲ್ಲ. ಲಭಿಸುವುದು ಕೇವಲ ಪೊಲೀಸರ ದಂಡ ಮಾತ್ರ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾಲ್ಕು ಹಾಗೂ ದ್ವಿಚಕ್ರ ಪಾರ್ಕಿಂಗ್ ಜಾಗದಲ್ಲಿ ಇತರ ಸಾಗಾಣಿಕಾ ವಾಹಗಳನ್ನು ನಿಲ್ಲಿಸಲು ಅವಕಾಶ ಮಾಡಿಕೊಟ್ಟಿರುವ ಬಗ್ಗೆ ವಾಹನ ಚಾಲಕರು ಪ್ರಶ್ನೆ ಮಾಡಿದರೆ ‘ಅದನ್ನು ಕೇಳಲು ನಿವ್ಯಾರು, ನೀವು ಮಾಡಿದ ತಪ್ಪಿಗೆ ದಂಡ ಕಟ್ಟಿ ಹೋಗಿ ಅವರನ್ನು ನಾವು ವಿಚಾರಿಕೊಳ್ಳುತ್ತೇವೆ’ ಎಂದು ಹಾರಿಕೆ ಉತ್ತರ ನೀಡುತ್ತಾರೆ. ಅಲ್ಲದೆ ಗಡಿಯಾರ ಕಂಬದಿAದ ಬದ್ರಿಯ ಜಂಕ್ಷನ್ವರೆಗೆ ಅಂಗಡಿ ಮಾಲೀಕರು ತಮ್ಮ ವಾಹನವನ್ನು ತಂದು ನಿಲ್ಲಿಸಿ ಸಂಜೆ ಮನೆಗೆ ತೆರಳುವಾಗಲೇ ತೆಗೆಯುವಂತಹ ವ್ಯವಸ್ಥೆ ನಡೆಯುತ್ತಿದೆ. ಈ ರೀತಿ ಆದರೆ ಗ್ರಾಮಾಂತರ ಪ್ರದೇಶದಿಂದ ಬರುವ ಸಾರ್ವಜನಿಕರು ತಮ್ಮ ವಾಹನವನ್ನು ಎಲ್ಲಿ ನಿಲುಗಡೆ ಮಾಡುವದು. ಇವೆಲ್ಲ ಪೊಲೀಸ್ ಇಲಾಖೆಗೆ ಗೊತ್ತಿದರು ಕೂಡ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.