ಶ್ರೀಮಂಗಲ, ಡಿ. ೩೦: ಇಂದು ಶ್ರೀಮಂಗಲ ವಿ.ಎಸ್.ಎಸ್.ಎನ್ ಸಭಾಂಗಣದಲ್ಲಿ ಟಿ.ಶೆಟ್ಟಿಗೇರಿ ಹೋಬಳಿ ವಿಶ್ವ ಹಿಂದು ಪರಿಷತ್, ಭಜರಂಗದಳ ಹೋಬಳಿ ಘಟಕವನ್ನು ರಚಿಸಲಾಯಿತು.

ವಿಶ್ವ ಹಿಂದು ಪರಿಷತ್ ಜಿಲ್ಲಾ ಅಧ್ಯಕ್ಷ ಕೃಷ್ಣಮೂರ್ತಿ, ಉಪಾಧ್ಯಕ್ಷ ಸುರೇಶ್ ಮುತ್ತಪ್ಪ, ಕಾರ್ಯದರ್ಶಿ ಪುದಿಯೊಕ್ಕಡ ರಮೇಶ್, ಜಿಲ್ಲಾ ಪ್ರಸಾರ ಪ್ರಮುಖ ಸಂತೋಷ್, ಜಿಲ್ಲಾ ದುರ್ಗವಾಹಿನಿ ಅಂಬಿಕಾ, ಭಜರಂಗದಳ ಜಿಲ್ಲಾ ಸಂಚಾಲಕ ಅನೀಶ್, ಪೊನ್ನಂಪೇಟೆ ತಾಲೂಕು ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಪಂದ್ಯAಡ ಹರೀಶ್, ವಿಶ್ವ ಹಿಂದು ಪರಿಷತ್ ಕಾರ್ಯದರ್ಶಿ ಅಮ್ಮತೀರ ಸುರೇಶ್, ಭಜರಂಗದಳ ಪೊನ್ನಂಪೇಟೆ ತಾಲೂಕು ಸಂಚಾಲಕ ಅಣ್ಣೀರ ಸಜ್ಜನ್, ಇವರುಗಳ ಸಮ್ಮುಖದಲ್ಲಿ ಟಿ.ಶೆಟ್ಟಿಗೇರಿ ಹೋಬಳಿ ಘಟಕ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ಟಿ.ಶೆಟ್ಟಿಗೇರಿ ಹೋಬಳಿ ಘಟಕದ ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಮುಕ್ಕಾಟಿರ ಪ್ರಭು, ಉಪಾಧ್ಯಕ್ಷ ಕಳ್ಳೇಂಗಡ ಹರೀಶ್, ಕಾರ್ಯದರ್ಶಿ ಐಯ್ಯಮಾಡ ಕಿಶೋರ್, ಭಜರಂಗದಳದ ಟಿ.ಶೆಟ್ಟಿಗೇರಿ ಹೋಬಳಿ ಸಂಚಾಲಕ ಮಿದೇರಿರ ಸಂತೋಷ್, ಸಹ ಸಂಚಾಲಕ ಲಿಫಿನ್ ಗೌಡ, ಅಖಡ ಪ್ರಮುಖ್ ತಂಬಕುತ್ತಿರ ಪೂವಣ್ಣ, ಸುರಕ್ಷ ಪ್ರಮುಖ ಕಾಳಿದಾಸ್, ಗೋ ರಕ್ಷಣೆ ಪ್ರಮುಖ ಬೊಟ್ಟಂಗಡ ಸುತನ್, ವಿದ್ಯಾರ್ಥಿ ಪ್ರಮುಖ್ ಚೆಂದ್ರಿಮಾಡ ವಿವೇಕ್, ಸಹ ಪ್ರಮುಖ್ ಬೊಟ್ಟಂಗಡ ಹರ್ಷ, ಪ್ರಸಾರ ಪ್ರಮುಖ ಮಲ್ಲೆಂಗಡ ಸೂರಜ್, ನೇಮಕಗೊಂಡರು.