ನಾಪೋಕ್ಲು, ಡಿ. ೩೦: ಇಲ್ಲಿನ ಸಹಕಾರ ಮಹಿಳಾ ಸಂಘದ ೨೦೨೦-೨೧ ರ ಸಾಲಿನ ವಾರ್ಷಿಕ ಮಹಾಸಭೆ ಮಹಿಳಾ ಸಮಾಜದಲ್ಲಿ ನಡೆಯಿತು. ಮಹಿಳಾ ಸಮಾಜದ ಅಧ್ಯಕ್ಷೆ ಕುಂಚೆಟ್ಟೀರ ರೇಷ್ಮಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಿರಿಯ ಸದಸ್ಯೆ ಕೇಟೋಳಿರ ಶಾರದಾ ಪಳಂಗಪ್ಪ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸರ್ವ ಸದಸ್ಯರ ಸಂಪೂರ್ಣ ಸಹಕಾರದಿಂದ ಸಂಘ ಪ್ರಗತಿ ಹೊಂದಲು ಸಾಧ್ಯ ಎಂದರು. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮಾಜಿ ಮುಖ್ಯ ಆಡಳಿತಾಧಿಕಾರಿ ಬಿದ್ದಾಟಂಡ ಮೇರಿಚಿಟ್ಟಿಯಪ್ಪ ಪಾಲ್ಗೊಂಡು ಮಾತನಾಡಿದರು. ಅಧ್ಯಕ್ಷೆ ರೇಷ್ಮಾ ಉತ್ತಪ್ಪ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಎಲ್ಲರೂ ಕಾರಣಕರ್ತರಾಗಿ ದ್ದಾರೆಂದರು. ಸಭೆಯಲ್ಲಿ ೨೦೨೦-೨೧ ರ ಸಾಲಿನಲ್ಲಿ ಕೈಗೊಂಡ ಕಟ್ಟಡ ನವೀಕರಣ, ಮೋಟಾರ್ ಅಳವಡಿಕೆ, ವಾಣಿಜ್ಯ ಮಳಿಗೆಗಳ ಬಾಡಿಗೆ ವಸೂಲಾತಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ೨೦೨೧-೨೨ ರ ಸಾಲಿನ ಅಂದಾಜು ಆಯವ್ಯಯ ಪಟ್ಟಿಯನ್ನು ಕಾರ್ಯದರ್ಶಿ ರಾಜೆÃಶ್ವರಿ ಸಭೆಯ ಮುಂದಿಟ್ಟರು. ಮುಖ್ಯ ಅತಿಥಿ ಮೇರಿ ಚಿಟ್ಟಿಯಪ್ಪ, ಮಾಜಿ ಅಧ್ಯಕ್ಷೆ ಮೂವೆರ ಧರಣಿ ಗಣಪತಿ, ಹಿರಿಯ ಸದಸ್ಯೆ ಮಾಚೆಟ್ಟೀರ ಮಾಯಮ್ಮ, ಅವರನ್ನು ಈ ಸಂದರ್ಭ ಆಡಳಿತ ಮಂಡಳಿಯವರು ಸನ್ಮಾನಿಸಿದರು.

ಈ ಸಂದರ್ಭ ನಿರ್ದೇಶಕರಾದ ಕುಂಡ್ಯೋಳAಡ ಕವಿತ, ಗಿರಿಜಾ ಬೋಪಣ್ಣ, ಅಪ್ಪಾರಂಡ ಡೇಜಿ ತಿಮ್ಮಯ್ಯ, ಪುಲ್ಲೆರ ಪದ್ಮಿನಿ, ಸದಸ್ಯರು ಉಪಸ್ಥಿತರಿದ್ದರು. ಮಣವಟ್ಟೀರ ಜಾನ್ಸಿ ತಿಮ್ಮಯ್ಯ ಪ್ರಾರ್ಥಿಸಿ ನಿರ್ದೇಶಕಿ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷೆ ಶೈಲಾ ಬೋಪಯ್ಯ ವಂದಿಸಿದರು.