ಮಡಿಕೇರಿ, ಡಿ. ೩೦: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಮರಂದೋಡ ಕೊಡವ ಸಂಘದ ಸಹಯೋಗದಲ್ಲಿ ಜನವರಿ ೨ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಮರಂದೋಡದ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಬಾಳೋಪಾಟ್ ಪೈಪೋಟಿ ಕಾರ್ಯಕ್ರಮ ನಡೆಯಲಿದೆ.

ಮರಂದೋಡದ ಹಿರಿಯ ಸಾಹಿತಿ ಚೋಯಮಾಡಂಡ ಭೀಮಯ್ಯ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕಕ್ಕಬ್ಬೆ ಗ್ರಾ.ಪಂ. ಅಧ್ಯಕ್ಷ ಕಲಿಯಂಡ ಅಯ್ಯಪ್ಪ, ಮರಂದೋಡ ಕೊಡವ ಸಂಘದ ಅಧ್ಯಕ್ಷ ಅನ್ನಾಡಿಯಂಡ ದಿಲೀಪ್ ಕುಮಾರ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಕೋಲಿಂದಮಲೆ ಕೆ. ಬೋಪಯ್ಯ ಹಾಗೂ ಬೆಂಗಳೂರು ಹುಲಿಮಂಗಲ ಗ್ರಾ.ಪಂ. ಮಾಜಿ ಅಧ್ಯಕ್ಷ ಅರಮಣಮಾಡ ಮೋಹನ್, ಕುಡಿಯರ ಮುತ್ತಪ್ಪ, ಬಬ್ಬೀರ ಸರಸ್ವತಿ ಇತರರು ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮದಲ್ಲಿ ಮರಂದೋಡ ಗ್ರಾಮದ ಚೋಯಮಾಡಂಡ ಭೀಮಯ್ಯ ಮತ್ತು ಕಕ್ಕಬ್ಬೆಯ ಕೋಲಿಂದಮಲೆ ಕೆ. ತಮ್ಮಯ್ಯ ಅವರನ್ನು ಸನ್ಮಾನಿಸಲಾಗುವುದು. ಅಕಾಡೆಮಿ ಪ್ರಕಟಿತ ಪುಸ್ತಕಗಳು ಹಾಗೂ ಸಿ.ಡಿ.ಗಳ ಮಾರಾಟ ಮತ್ತು ಪ್ರದರ್ಶನವಿದೆ. ಕಾರ್ಯಕ್ರಮವು ಕೋವಿಡ್ ನಿಯಮಾನುಸಾರ ನಡೆಯಲಿದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ತಿಳಿಸಿದ್ದಾರೆ.