ವೀರಾಜಪೇಟೆ, ಡಿ. ೩೦: ಕೊಡವ ಸಾಂಪ್ರದಾಯಿಕ ಉಡುಪನ್ನು ಹಾಗೂ ಕೊಡವ ಪದ್ಧತಿ ಸಂಸ್ಕೃತಿಯ ಹೆಗ್ಗುರುತಾಗಿರುವ ಉಮ್ಮತಾಟ್, ಬೊಳಕಾಟ್, ಕೋಲಾಟ್ ಸೇರಿದಂತೆ ದೈವಿಕ ಹಿನ್ನಲೆಯುಳ್ಳ ನೃತ್ಯಗಳನ್ನು ರಾಜಕೀಯ ಸಭೆ ಸಮಾರಂಭ ಹಾಗೂ ಹೋಂಸ್ಟೇ ರೆಸಾರ್ಟ್ಗಳಲ್ಲಿ ಬಳಸದಂತೆ ಅಖಿಲ ಕೊಡವ ಸಮಾಜದ ಮಹಾಸಭೆಯಲ್ಲಿ ಅಭಿಪ್ರಾಯ ವ್ಯಕ್ತಗೊಂಡು ನಿರ್ಣಯ ಕೈಗೊಳ್ಳಲಾಯಿತು.
ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಜಿಲ್ಲೆಯ ವಿವಿಧ ಕೊಡವ ಸಮಾಜ, ಸಂಘ ಸಂಸ್ಥೆಗಳು ಸೇರಿದಂತೆ ಊರು ನಾಡಿನ ತಕ್ಕಮುಖ್ಯಸ್ಥರು ಭಾಗಿಯಾಗಿದ್ದರು. ಈ ಸಂದರ್ಭ ಹಲವಾರು ವಿಷಯಗಳು ಚರ್ಚೆಗೆ ಬಂದು ಕೊನೆಯಲ್ಲಿ ಕೊಡವ ಸಾಂಪ್ರದಾಯಿಕ ಉಡುಪನ್ನು ಹಾಗೂ ಕೊಡವ ಪದ್ಧತಿ ಸಂಸ್ಕೃತಿ ಹೆಗ್ಗುರು ತಾಗಿರುವ ಕೊಡವ ಸಾಂಪ್ರದಾಯಿಕ ನೃತ್ಯಗಳನ್ನು ರಾಜಕೀಯ ಸಭೆ ಸಮಾರಂಭಗಳಲ್ಲಿ ಹಾಗೂ ಹೋಂಸ್ಟೇ ರೆಸಾರ್ಟ್ ಸೇರಿದಂತೆ ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳದಂತೆ ನಿರ್ಣಯ ಕೈಗೊಳ್ಳಲಾಯಿತು, ಜೊತೆಗೆ ತಲಕಾವೇರಿ ಭಾಗಮಂಡಲ ಕ್ಷೇತ್ರದಲ್ಲಿ ಕಟ್ಟುನಿಟ್ಟಿನ ವಸ್ತçಸಂಹಿತೆ ಜಾರಿಗೊಳಿಸು ವಂತೆ ಹಾಗೂ ಕೂಡಲೇ ವ್ಯವಸ್ಥಾಪನಾ ಸಮಿತಿ ರಚನೆ ಮಾಡಲು ಒತ್ತಾಯಿಸು ವಂತೆ ನಿರ್ಣಯ ಕೈಗೊಳ್ಳಲಾಯಿತು. ಜೊತೆಗೆ ಮಡಿಕೇರಿ ಆಕಾಶವಾಣಿಯಲ್ಲಿ ಈ ಹಿಂದೆ ಕೊಡವ ಭಾಷೆಯಲ್ಲಿ ಹಲವಾರು ಕಾರ್ಯಕ್ರಮಗಳು ಸಮಯಕ್ಕೆ ಸರಿಯಾಗಿ ನಡೆಯುತ್ತಿದ್ದು ಇತ್ತೀಚಿನ ದಿನಗಳಲ್ಲಿ ಬಹುತೇಕ ಕಾರ್ಯಕ್ರಮಗಳಿಗೆ ಕತ್ತರಿ ಹಾಕಲಾಗಿದೆ. ಸುದ್ದಿ ಪ್ರಚಾರದಲ್ಲಿ ಕೂಡ ಹಲವಾರು ಸುದ್ದಿಗಳಿಗೆ ಕತ್ತರಿ ಹಾಕುತ್ತಿದ್ದು ಸಮಯವನ್ನು ಬದಲಿಸಲಾಗಿದೆ, ಕೂಡಲೇ ಎಲ್ಲವನ್ನು ಸರಿಪಡಿಸದಿದ್ದರೆ ಮುಂದೆ ಆಕಾಶವಾಣಿ ಕೇಂದ್ರಕ್ಕೆ ಮುತ್ತಿಗೆ ಹಾಕಲು ತಿರ್ಮಾನ ಕೈಗೊಳ್ಳಲಾಯಿತು. ಕಳೆದೆರಡು ವರ್ಷಗಳಿಂದ ಕೊರೊನಾ ಹಿನ್ನೆಲೆ ಸರಕಾರದ ಆದೇಶದಂತೆ ಜನಾಂಗದಲ್ಲಿ ಕಡಿಮೆ ಖರ್ಚಿನ ಮದುವೆ ಹಾಗೂ ಇನ್ನಿತರ ಸಮಾರಂಭವನ್ನು ನಡೆಸುತ್ತಿದ್ದು, ಮುಂದೆಯೂ ಇದೇ ರೀತಿ ಕಡಿಮೆ ಜನರನ್ನು ಸೇರಿಸಿ ಖರ್ಚು ಕಡಿಮೆ ಮಾಡಿದರೆ ಜನಾಂಗಕ್ಕೆ ಉಪಯೋಗ ವಾಗಲಿದೆ ಜೊತೆಗೆ ಆದಷ್ಟು ಮದ್ಯಪಾನದ ಖರ್ಚನ್ನು ಕಡಿಮೆ ಮಾಡಬೇಕಿದೆ ಎಂಬ ಸಲಹೆಯೂ ಕೇಳಿಬಂದಿತು. ಯಾವುದೇ ಕೊಡವ ಸಮಾಜ ಹಾಗೂ ಸಂಘ-ಸAಸ್ಥೆ ಜನಾಂಗದ ಒಳಿತಿಗಾಗಿ ತೆಗೆದುಕೊಳ್ಳುವ ತೀರ್ಮಾನಗಳಿಗೆ ಜನಾಂಗದವರು ತಲೆಬಾಗಬೇಕು ಈ ಮೂಲಕ ನಮ್ಮ ಜನಾಂಗದ ಒಗ್ಗಟ್ಟು ಪ್ರದರ್ಶಿಸುವುದ ರೊಂದಿಗೆ ಕೆಲವೊಂದು ಅನಿಷ್ಟಗಳನ್ನು ತೊಲಗಿಸಬೇಕಿದೆ. ಹಾಗೇ ಜನಾಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಮನಸ್ಥಾಪ ಸೇರಿದಂತೆ ಆಸ್ತಿ ವಿಷಯದಲ್ಲಿ ಕಲಹಗಳು ನಡೆಯುತ್ತಿದ್ದು ಇದಕ್ಕೆ ಅಂತ್ಯ ಹಾಡಬೇಕಿದೆ, ಮನಸ್ಥಾಪ ಮರೆತು ಒಂದಾಗಬೇಕಿದೆ. ಕೊಡವ ಸಮಾಜ, ಸಂಘ-ಸAಸ್ಥೆ ಸೇರಿದಂತೆ ಜನಾಂಗದ ವ್ಯಕ್ತಿಯ ವಿರುದ್ಧ ಅಥವಾ ಇತರ ಜನಾಂಗದ ವಿರುದ್ಧ ವೃಥಾ ಆಕ್ಷೇಪ ಮಾಡುವುದನ್ನು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಕಚ್ಚಾಡುವುದನ್ನು ನಿಲ್ಲಿಸಬೇಕಿದೆ ಎಂದು ಅಧ್ಯಕ್ಷ ಮಾತಂಡ ಮೊಣ್ಣಪ್ಪ ಕಿವಿಮಾತು ಹೇಳಿದರು.
ಈ ಸಂದರ್ಭ ಉಪಸ್ಥಿತರಿದ್ದ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಮಾತನಾಡಿ, ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಅವರ ವಿರುದ್ಧ ವ್ಯಕ್ತಿಯೊಬ್ಬರು ಅವಹೇಳನಕಾರಿ ಸಂದೇಶ ಹರಿಬಿಟ್ಟಿರುವ ಬಗ್ಗೆ ಖಂಡಿಸಿದರು. ಈ ಬಗ್ಗೆ ಸಭೆ ಒಕ್ಕೊರಲ ತೀರ್ಮಾನ ಕೈಗೊಂಡು ಖಂಡನಾ ನಿರ್ಣಯ ಕೈಗೊಳ್ಳಲಾಯಿತು. ಸಮಾಜದ ವಿರುದ್ಧ ಅಥವಾ ಅಧ್ಯಕ್ಷರ ವಿರುದ್ಧ ಮಾತನಾಡುವವರು ಸಭೆಯಲ್ಲಿ ಬಂದು ನೇರವಾಗಿ ಮಾತನಾಡಬೇಕು. ಸರಿ ತಪ್ಪುಗಳು ನಡೆಯುವುದು ಸಹಜ. ಆದರೆ ಅದನ್ನೇ ಗುರಿಯಾಗಿಸಿಕೊಂಡು ಮಾತನಾಡುವುದು ಸರಿಯಲ್ಲ ಎಂದು ಅವರು ಹೇಳಿದರು.
ಕೊಡವ ಸಾಂಪ್ರದಾಯಿಕ ಉಡುಪನ್ನು ಬಳಕೆ ಮಾಡಬೇಡಿ ಎಂಬ ಅಧ್ಯಕ್ಷರ ಹೇಳಿಕೆಯಲ್ಲಿ ತಪ್ಪೇನಿದೆ. ಕೊಡವ ಸಾಂಪ್ರದಾಯಿಕ ಉಡುಪು ಹಾಗೂ ಆಭರಣಗಳು ನಮ್ಮ ಹಿರಿಯರ ಕೊಡುಗೆ ಹೊರತು ಇದು ರಾಜಕೀಯ ಕೊಡುಗೆ ಅಲ್ಲ. ಒಬ್ಬ ಕೊಡವನಿಗೆ ತನ್ನ ಸಾಂಪ್ರದಾಯಿಕ ಉಡುಪನ್ನು ತೊಡಲು ಹಕ್ಕಿದೆ ನಿಜ. ಹಾಗಂತ ಇದರ ದುರ್ಬಳಕೆ ಮಾಡಿಕೊಳ್ಳುವ ಹಕ್ಕು ಯಾರಿಗೂ ಇಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಸಭೆಯಲ್ಲಿ ಉಪಾಧ್ಯಕ್ಷ ಅಜ್ಜಿಕುಟ್ಟೀರ ಸುಬ್ರಮಣಿ ಮಾದಯ್ಯ, ಕಾರ್ಯದರ್ಶಿ ಅಮ್ಮುಣಿಚಂಡ ರಾಜ, ಖಜಾಂಚಿ ಮಂಡೇಪAಡ ಸುಗುಣ ಮುತ್ತಣ್ಣ, ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ರಾಣು ಮಂದಣ್ಣ, ಸಮಿತಿ ಸದಸ್ಯರು, ಸಮಾಜದ ಸದಸ್ಯರು ಭಾಗವಹಿಸಿದ್ದರು. ಅಜ್ಜಿಕುಟ್ಟೀರ ಸುಬ್ರಮಣಿ ಮಾದಯ್ಯ ಸ್ವಾಗತಿಸಿ ಕಾರ್ಯದರ್ಶಿ ಅಮ್ಮುಣಿಚಂಡ ರಾಜ ವಂದಿಸಿದರು.