ಮಡಿಕೇರಿ, ಡಿ. ೩೦: ಅಮ್ಮತ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೪೦ನೇ ವಾರ್ಷಿಕ ಮಹಾಸಭೆ ಇತ್ತೀಚೆಗೆ ಅಮ್ಮತ್ತಿ ಕೊಡವ ಸಮಾಜದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಕುಟ್ಟಂಡ ವಿನು ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದಲ್ಲಿ ರೂ. ೧.೨೧ ಕೋಟಿ ಪಾಲು ಬಂಡವಾಳವಿದ್ದು, ಠೇವಣಿಗಳು ರೂ. ೨೨.೧೮ ಕೋಟಿ ಇರುತ್ತದೆ. ೨೦೨೦-೨೧ನೇ ಸಾಲಿನಲ್ಲಿ ಸಂಘವು ರೂ. ೪೨.೯೩ ಲಕ್ಷ ಲಾಭಗಳಿಸಿದ್ದು, ಶೇ. ೨೧ ಡಿವಿಡೆಂಡ್ ಘೋಷಿಸಲಾಗಿದೆ ಎಂದು ಪೂವಯ್ಯ ಮಾಹಿತಿ ನೀಡಿದರು.
ಸಭೆಯಲ್ಲಿ ಉಪಾಧ್ಯಕ್ಷ ಐನಂಡ ಕೆ. ಅಯ್ಯಣ್ಣ, ನಿರ್ದೇಶಕರಾದ ಮೂಕೋಂಡ ಸಿ. ಅಯ್ಯಪ್ಪ, ಮಾಚಿಮಂಡ ಎಂ. ಉತ್ತಪ್ಪ, ಮುಕ್ಕಾಟಿರ ಎ. ಸಂತೋಷ್, ಕುಟ್ಟಂಡ ಎಂ. ತಿಮ್ಮಯ್ಯ, ಚೋವಂಡ ಎಂ. ನಾಚಪ್ಪ, ಎನ್.ಎಸ್. ಪ್ರಜೀತ್, ಬಿ.ಬಿ. ಸಂಜೀವÀ, ಕುಟ್ಟಂಡ ಟಿ. ಕಾವೇರಮ್ಮ, ಕುಟ್ಟಂಡ ರೀಟಾ ಚಿಣ್ಣಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಕೆ. ರಜನಿ, ಲೆಕ್ಕಿಗರಾದ ಕೆ.ಇ. ಸದಾಶಿವ ಹಾಗೂ ಕೆಡಿಸಿಸಿ ಬ್ಯಾಂಕಿನ ಮೇಲ್ವಿಚಾರಕ ವಿ.ಸಿ. ಅಜಿತ್ ಉಪಸ್ಥಿತರಿದ್ದರು.