ಸೋಮವಾರಪೇಟೆ, ಡಿ. ೩೦: ಹೊಸ ವರ್ಷಾಚರಣೆಯ ವೇಳೆ ಸಂಭವಿಸಬಹುದಾದ ಯಾವುದೇ ರಸ್ತೆ ಅಪಘಾತಗಳಿಂದ ಉಂಟಾಗುವ ಜೀವ ಹಾನಿಯನ್ನು ತಡೆಯುವ ದೃಷ್ಟಿಯಿಂದ ೧೦೮ ಆರೋಗ್ಯ ಕವಚ ಆ್ಯಂಬ್ಯುಲೆನ್ಸ್ ವಾಹನಗಳು ೨೪/೭ ಸೇವೆಗೆ ಸಿದ್ಧಗೊಂಡಿವೆ.

ಹೆಚ್ಚಿನ ತುರ್ತು ಪರಿಸ್ಥಿತಿಯನ್ನು ನಿರೀಕ್ಷಿಸುವ ಪ್ರದೇಶಗಳಲ್ಲಿ ಹೆಚ್ಚುವರಿ ಆ್ಯಂಬ್ಯುಲೆನ್ಸ್ಗಳನ್ನು ನಿಯೋಜಿಸಲಾಗುವುದು. ತುರ್ತು ಸೇವೆಗಾಗಿ ಆ್ಯಂಬ್ಯುಲೆನ್ಸ್ ಸಿಬ್ಬಂದಿಗಳ ರಜೆಯನ್ನು ರದ್ದುಗೊಳಿಸಲಾಗಿದೆ. ಮುಂಜಾಗ್ರತೆಯಾಗಿ ಇಂಧನ, ಆಮ್ಲಜನಕ, ವೈದ್ಯಕೀಯ ಉಪಕರಣಗಳ ದಾಸ್ತಾನಿನೊಂದಿಗೆ ಎಲ್ಲಾ ಆ್ಯಂಬ್ಯುಲೆನ್ಸ್ಗಳು ಸಿದ್ಧಗೊಂಡಿವೆ ಎಂದು ಜಿಲ್ಲಾ ಜಿವಿಕೆ ಇಎಂಆರ್ ೧೦೮ ವ್ಯವಸ್ಥಾಪಕ ಎಸ್. ಸೋಮಶೇಖರ್ ತಿಳಿಸಿದ್ದಾರೆ.

ಹೊಸ ವರ್ಷದ ಆಚರಣೆಗಳಲ್ಲಿ ಸರಾಸರಿ ಶೇ. ೩೦ರಿಂದ ೩೫ ರಷ್ಟು ಅಪಘಾತ ಪ್ರಕರಣಗಳು ಹೆಚ್ಚಾಗಿರುತ್ತವೆ. ೧೦೮ ಆ್ಯಂಬ್ಯುಲೆನ್ಸ್ ಸೇವೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಜೀವನ್ಮರಣದ ಗಾಯಗಳಿಂದ ನರಳುವ ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲು ಇವುಗಳು ಸಹಕಾರಿಯಾಗಲಿವೆ. ಹೆಚ್ಚಿನ ಸಂಖ್ಯೆಯ ಸಾವು-ನೋವುಗಳು, ಅನಾಹುತಗಳು ಎದುರಾದಲ್ಲಿ ಪೊಲೀಸ್, ಅಗ್ನಿಶಾಮಕ ಸೇವೆ ಮತ್ತು ಆರೋಗ್ಯ ಇಲಾಖೆಗಳಿಗೆ ಮಾಹಿತಿ ನೀಡಬಹುದಾಗಿದೆ.

ತುರ್ತು ಆ್ಯಂಬ್ಯುಲೆನ್ಸ್ ಸೇವೆ ೧೦೮ಕ್ಕೆ ಕರೆ ದೊರೆಯದಿದ್ದಲ್ಲಿ ನೇರವಾಗಿ ಚಾಲಕರಿಗೆ ಅಥವಾ ಕೊಡಗು ಜಿಲ್ಲಾ ವ್ಯವಸ್ಥಾಪಕರಿಗೆ ಕರೆ ಮಾಡಬಹುದಾಗಿದೆ. ಮಡಿಕೇರಿ ಭಾಗಕ್ಕೆ ೯೪೮೦೮೧೧೯೦೮, ನಾಪೋಕ್ಲು- ೯೪೪೯೮೬೨೭೬೯, ಕೊಡ್ಲಿಪೇಟೆ-೯೪೪೯೮೬೨೩೭೦, ಕುಶಾಲನಗರ-೯೧೫೪೨೫೦೧೬೦, ಸೋಮವಾರಪೇಟೆ -೯೧೫೪೨೫೦೧೬೪, ಸುಂಟಿಕೊಪ್ಪ- ೯೪೪೯೮೮೬೨೩೭೧, ಗೋಣಿಕೊಪ್ಪ- ೯೪೮೦೮೧೧೯೦೭, ವೀರಾಜಪೇಟೆ- ೯೧೧೩೮೨೯೬೩೬ ಸಂಪರ್ಕಿಸಬಹುದಾಗಿದೆ. ಜಿಲ್ಲೆಯ ಯಾವುದೇ ಭಾಗದಿಂದ ಜಿಲ್ಲಾ ಜಿವಿಕೆ ಇಎಂಆರ್ ೧೦೮ ವ್ಯವಸ್ಥಾಪಕ ಸೋಮಶೇಖರ್ (ಮೊ:೯೫೧೩೬೪೦೦೦೭) ಅವರಿಗೆ ವಾಟ್ಸ್ಅಪ್ ಅಥವಾ ಕರೆ ಮಾಡಿದರೂ ತಕ್ಷಣ ಸ್ಪಂದಿಸುವುದಾಗಿ ಮಾಹಿತಿ ನೀಡಿದ್ದಾರೆ.