ವೀರಾಜಪೇಟೆ, ಡಿ. ೩೦: ಕಾವಾಡಿ, ಅಮ್ಮತ್ತಿ ಕಾರ್ಮಾಡು, ಮಾಲ್ದಾರೆ, ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿಗಳ ನಾಲ್ಕು ಕೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಮೂರು ಕೇತ್ರಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹಾಗೂ ಒಂದು ಕೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜಯಗಳಿಸಿದ್ದಾರೆ. ತಾಲೂಕು ಕಚೇರಿಯಲ್ಲಿ ಮತ ಎಣಿಕಾ ಕಾರ್ಯ ನಡೆಯಿತು. ತಹಶೀಲ್ದಾರ್ ಯೋಗಾನಂದ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಮಾಲ್ದಾರೆಯಲ್ಲಿ ಬಿಜೆಪಿ ಬೆಂಲಿತ ಅಭ್ಯರ್ಥಿ ಮುತ್ತಪ್ಪ ೨೨೭ ಮತ ಪಡೆದು ವಿಜಯ ಸಾಧಿಸಿದರು ಎದುರಾಳಿ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ತಿಮ್ಮಯ್ಯ ೬೫, ಸ್ವತಂತ್ರö್ಯ ಅಭ್ಯರ್ಥಿ ಆರ್.ಕೆ.ರಮೇಶ್ ೨೧ ಮತಗಳನ್ನು ಪಡೆದುಕೊಂಡರು. ಒಟ್ಟು ೪೫೧ ಮತದಾರರ ಪೈಕಿ ೩೧೭ ಮತಗಳು ಚಲಾವಣೆಗೊಂಡಿತ್ತು.

ಕಾರ್ಮಾಡು ಗ್ರಾ.ಪಂ. ವ್ಯಾಪ್ತಿಯ ಕಾರ್ಮಾಡು ೧ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತೆ ದಿವ್ಯ ರಮೇಶ್ ೩೩೮ ಮತಗಳನ್ನು ಪಡೆದು ವಿಜಯ ಸಾಧಿಸಿದರು. ಕಾಂಗ್ರೆಸ್ ಬೆಂಬಲಿತೆ ರೇವತಿ ೨೦೦ ಮತಗಳನ್ನು ಪಡೆದರು. ಒಟ್ಟು ೭೮೦ ಮತಗಳ ಪೈಕಿ ೪೪೯ ಮತದಾನವಾಗಿತ್ತು. ಕಾವಡಿ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಕಾವಡಿಚಂಡ ನಾಚಪ್ಪ ೩೩೮, ಕಾಂಗ್ರೆಸ್ ಬೆಂಬಲಿತೆ ಮಾಚಿಮಂಡ ಸರೋಜಿನಿ ೩೩೮ ಮತಪಡೆದರು. ಇಲ್ಲಿ ನಾಚಪ್ಪ ಜಯಶಾಲಿಯಾದರು. ೮೬೫ ಮತಗಳ ಪೈಕಿ ೫೦೫ ಮತಗಳು ಚಲಾವಣೆಗೊಂಡಿದ್ದವು.

ಚೆನ್ನಯ್ಯನಕೋಟೆ-೨ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತೆ ಸಾವಿತ್ರಿ ವಿರುದ್ಧ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರತ್ನ ೧೨ ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದ್ದಾರೆ. ಸಾವಿತ್ರಿ ೧೫೭, ರತ್ನ ೧೬೯ ಮತಗಳನ್ನು ಪಡೆದುಕೊಂಡಿದ್ದು, ೬೫೦ ಮತಗಳ ಪೈಕಿ ೩೨೭ ಮತಗಳು ಚಲಾವಣೆಗೊಂಡಿದ್ದವು. ಮತ ಎಣಿಕಾ ಸಂದÀರ್ಭ ಬಿಜೆಪಿ ತಾಲೂಕು ಅಧ್ಯಕ್ಷ ನೆಲ್ಲಿರ ಚಲನ್, ಪ್ರಧಾನ ಕಾರ್ಯದರ್ಶಿ ವಾಟೇರಿರ ಬೋಪಣ್ಣ, ಬಿಜೆಪಿ ಜಿಲ್ಲಾ ಖಜಾಂಚಿ ಚೆಪ್ಪುಡಿರ ಮಾಚಯ್ಯ, ಮುಖಂಡರಾದ ಮಾಚಿಮಂಡ ಸುವಿನ್ ಗಣಪತಿ, ಮಾಚಿಮಂಡ ವಸಂತ್ ಮತ್ತಿತರರು ಉಪಸ್ಥಿತರಿದ್ದರು.

ಸೋಮವಾರಪೇಟೆ: ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿಯ ಕೂತಿ ವಾರ್ಡ್ನ ೨ ಸ್ಥಾನ ಗಳಿಗೆ ಸಂಬAಧಿಸಿದAತೆ ನಡೆದ ಉಪ ಚುನಾವಣೆಯ ಮತ ಎಣಿಕೆ ಇಂದು ನಡೆದಿದ್ದು, ಬಿಜೆಪಿ ಪಕ್ಷ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.

ಹಿಂದುಳಿದ ವರ್ಗ ಎ. ಮೀಸಲು ಕ್ಷೇತ್ರದಿಂದ ಭಾರತೀಯ ಜನತಾ ಪಾರ್ಟಿ ಬೆಂಬಲಿತರಾಗಿ ಕಣದಲ್ಲಿದ್ದ ಟಿ.ಕೆ. ಚಂದ್ರಶೇಖರ್ (ಪ್ರವೀಣ್) ಹಾಗೂ ಸಾಮಾನ್ಯ ಮಹಿಳೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೆ.ಎಂ. ದಿವ್ಯ ಮಧು ಅವರುಗಳು ಅತ್ಯಧಿಕ ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದಾರೆ.

ತಾ. ೨೭ ರಂದು ನಡೆದ ಮತದಾನದಲ್ಲಿ ೭೦೨ ಮತದಾರರ ಪೈಕಿ ೫೫೪ ಮಂದಿ ಮತ ಚಲಾಯಿಸುವ ಮೂಲಕ ಶೇ. ೭೮.೯೧ ರಷ್ಟು ಮತದಾನವಾಗಿತ್ತು. ಇಂದು ಇಲ್ಲಿನ ತಾಲೂಕು ಕಚೇರಿಯಲ್ಲಿರುವ ಚುನಾವಣಾ ಶಾಖೆಯಲ್ಲಿ ಮತಗಳ ಎಣಿಕೆ ನಡೆಯಿತು.

ಚಂದ್ರಶೇಖರ್ ಅವರು ೨೬೧, ದಿವ್ಯ ಕೆ.ಎಂ. ೨೯೪ ಮತಗಳನ್ನು ಪಡೆದರೆ, ಜೆಡಿಎಸ್ ಬೆಂಬಲಿತರಾಗಿದ್ದ ಮಂಜುಳಾ ಅವರು ೨೫೨, ವಿ. ಹರೀಶ್ ೧೯೪ ಮತಗಳನ್ನು ಪಡೆದರು. ಇವರೊಂದಿಗೆ ಕಣದಲ್ಲಿದ್ದ ಸುಕನ್ಯ ಅವರಿಗೆ ೬೬ ಮತಗಳು ಲಭಿಸಿದವು. ೧೦ ಮತಗಳು ತಿರಸ್ಕೃತಗೊಂಡವು.

ತಾಲೂಕು ತಹಶೀಲ್ದಾರ್ ಆರ್. ಗೋವಿಂದರಾಜು ಹಾಗೂ ಚುನಾವಣಾ ಶಾಖೆಯ ಅಧಿಕಾರಿ ಲೋಹಿತ್ ಅವರುಗಳ ಉಪಸ್ಥಿತಿಯಲ್ಲಿ ಮತ ಎಣಿಕೆ ನಡೆಯಿತು. ಮತ ಎಣಿಕೆ ಅಧಿಕಾರಿಗಳಾಗಿ ಚುನಾವಣಾಧಿಕಾರಿಗಳಾಗಿದ್ದ ಹೇಮಂತ್‌ಕುಮಾರ್ ಹಾಗೂ ಹೆಚ್.ಟಿ. ರಾಜೇಶ್ ಅವರುಗಳು ಕಾರ್ಯ ನಿರ್ವಹಿಸಿದರು.

ಕಾರ್ಯಕರ್ತರ ಸಂಭ್ರಮ: ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಸಾಧಿಸಿದ ಹಿನ್ನೆಲೆ ಪಟ್ಟಣದಲ್ಲಿ ಕಾರ್ಯಕರ್ತರು ಸಂಭ್ರಮಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ಮನುಕುಮಾರ್ ರೈ, ಜಿ.ಪಂ. ಮಾಜೀ ಸದಸ್ಯ ಬಿ.ಜೆ. ದೀಪಕ್, ಗ್ರಾ.ಪಂ. ಅಧ್ಯಕ್ಷ ರುದ್ರಪ್ಪ, ಪ್ರಮುಖರಾದ ದಿವಾಕರ್, ಡಿ.ಎ. ಪರಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.