ಮಡಿಕೇರಿ, ಡಿ. ೩೦: ನಗರದ ಗಣಪತಿ ಬೀದಿಯಲ್ಲಿ ನಡೆಯುತ್ತಿರುವ ರಸ್ತೆ ಅಗಲೀಕರಣ ಕಾಮಗಾರಿಯನ್ನು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ವೀಕ್ಷಣೆ ಮಾಡಿದರು.

ನಗರೋತ್ಥಾನದಡಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಎರಡು-ಮೂರು ಮನೆಯವರು ರಸ್ತೆ ಅಗಲೀಕರಣಕ್ಕೆ ಅಸಹಕಾರ ತೋರಿದ್ದರು. ಈ ಸಂಬAಧ ತಾಂತ್ರಿಕ ಎಂಜಿನಿಯರ್ ಅವರಿಂದ ಮಾಹಿತಿ ಪಡೆದು ಕಾಮಗಾರಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಸಲಹೆ ಮಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ನಗರಸಭಾ ಸದಸ್ಯರಾದ ಅಮೀನ್ ಮೊಹಿಸಿನ್, ಮನ್ಸೂರ್ ಖಾನ್, ನೀಮ ಹರ್ಷದ್, ಪೌರಾಯುಕ್ತ ರಾಮದಾಸ್, ಡಿಯುಡಿಸಿ ಇಇ ಶಿವಾನಂದ, ನಗರಸಭೆಯ ಎಇಇ ರಾಜೇಂದ್ರ ಕುಮಾರ್, ಜೆಇ ಜಿ.ಎಚ್.ನಾಗರಾಜು, ಶಮಂತ್ ಕುಮಾರ್ ಇತರರು ಇದ್ದರು.

ಪೌರಾಡಳಿತ ನಿರ್ದೇಶನಾಲ ಯದ ಮುಖ್ಯ ಎಂಜಿನಿಯರ್ ಸತ್ಯನಾರಾಯಣ ಅವರು ನಗರದ ಗಣಪತಿ ಬೀದಿಯಲ್ಲಿ ನಡೆಯುತ್ತಿರುವ ರಸ್ತೆ ಅಗಲೀಕರಣ ಕಾಮಗಾರಿಯನ್ನು ವೀಕ್ಷಣೆ ಮಾಡಿದರು. ಬಳಿಕ ಮಾತನಾಡಿದ ಅವರು ಕಟ್ಟಡದ ತಾಂತ್ರಿಕ ಎಂಜಿನಿಯರ್ ಕರೆಸಿ, ಅಗತ್ಯ ತುರ್ತು ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.