ಮಡಿಕೇರಿ: ಚೆಂಬು ಗ್ರಾಮ ಪಂಚಾಯ್ತಿಯ ಚೆಂಬು (೩) ಕ್ಷೇತ್ರದ ಗ್ರಾ.ಪಂ. ಸದಸ್ಯ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ರಾಧ ಚಂದಪ್ಪ ಗೆಲುವು ದಾಖಲಿಸಿದ್ದಾರೆ.
ಮಹಾಲಕ್ಷಿö್ಮ ವಿರುದ್ಧ ೧೭೭ ಮತಗಳ ಅಂತರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ರಾಧ ಜಯ ಸಾಧಿಸಿದ್ದು, ಚುನಾವಣೆಯಲ್ಲಿ ಮಹಾಲಕ್ಷಿö್ಮ ೨೭೮, ರಾಧ ೪೫೫ ಮತ ಗಳಿಸಿದ್ದಾರೆ. ಒಟ್ಟು ೯೯೦ ಮತಗಳ ಪೈಕಿ ೭೪೫ ಮತಗಳು ಚುನಾವಣೆಯಲ್ಲಿ ಚಲಾವಣೆಗೊಂಡಿತ್ತು. ಇದರಲ್ಲಿ ೧೨ ಮತಗಳು ತಿರಸ್ಕೃತಗೊಂಡವು.
ಮಡಿಕೇರಿಯ ತಾಲೂಕು ಕಚೇರಿಯಲ್ಲಿ ಮತ ಎಣಿಕೆ ನಡೆಯಿತು. ಫಲಿತಾಂಶ ಪ್ರಕಟಗೊಂಡ ಬಳಿಕ ಬಿಜೆಪಿಯ ಮುಖಂಡ ಹಾಗೂ ಕರ್ನಾಟಕ ರಾಜ್ಯ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ಸೇರಿದಂತೆ ಪಕ್ಷದ ಮುಖಂಡರು ನೂತನ ಸದಸ್ಯೆಗೆ ಹಾರ ಹಾಕಿ, ಪುಷ್ಪಗುಚ್ಚ ನೀಡಿ ಅಭಿನಂದಿಸಿದರು.