ಕರಿಕೆ, ಡಿ: ೩೦. ಮಹಾಮಾರಿ ಕೊರೊನಾದಿಂದ ಮೃತಪಟ್ಟ ಕುಟುಂಬದ ವಾರಸುದಾರರಿಗೆ ಶಾಸಕ ಕೆ.ಜಿ. ಬೋಪಯ್ಯ ಮೊದಲ ಹಂತದ ಪರಿಹಾರ ವಿತರಿಸಿದರು. ಮಡಿಕೇರಿ ತಾಲೂಕಿನ ಸಂಪಾಜೆ, ಭಾಗಮಂಡಲ, ನಾಪೋಕ್ಲು ಹೋಬಳಿಯ ಹನ್ನೊಂದು ಬಿಪಿಎಲ್ ಪಡಿತದಾರ ಕೋವಿಡ್ ಮೃತರ ವಾರಸುದಾರರಿಗೆ ಸರಕಾರದ ವತಿಯಿಂದ ತಲಾ ಒಂದು ಲಕ್ಷ ಪರಿಹಾರದ ಚೆಕ್ ವಿತರಿಸಿದರು.

ನಂತರ ಮಾತನಾಡಿದ ಶಾಸಕರು; ಮಡಿಕೇರಿ ತಾಲೂಕಿನಲ್ಲಿ ನೂರ ಹದಿನಾರು ಮಂದಿಗೆ ಪರಿಹಾರ ಮಂಜೂರಾಗಿದ್ದು, ಇದರಲ್ಲಿ ಎಪಿಎಲ್ ಎಪ್ಪತ್ತೆರಡು, ಬಿಪಿಎಲ್ ನಲವತ್ತನಾಲ್ಕು ಜನರಿದ್ದು ಮುಂದೆ ಹಂತ ಹಂತವಾಗಿ ಪರಿಹಾರ ವಿತರಿಸಲಾಗುವುದು ಎಂದರು. ಮತ್ತೆ ಕೋವಿಡ್ ಹೆಚ್ಚಳವಾಗುತ್ತಿದ್ದು, ಜನತೆ ಮುಂಜಾಗೃತೆ ವಹಿಸುವುದಲ್ಲದೇ ಸರಕಾರದ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿ ಕೋವಿಡ್ ನಿಯಂತ್ರಣಕ್ಕೆ ಸರಕಾರದೊಂದಿಗೆ ಕೈಜೋಡಿಸುವಂತೆ ಈ ಸಂದರ್ಭದಲ್ಲಿ ಮನವಿ ಮಾಡಿದರು. ಕಾರ್ಯ ಕ್ರಮದಲ್ಲಿ ತಹಶೀಲ್ದಾರ್ ಮಹೇಶ್, ಶಿರಾಸ್ತೇದಾರ ದೇವರಾಜ್, ಸಿಬ್ಬಂದಿಗಳಾದ ಸೌಮ್ಯ, ಜಯಲಕ್ಷಿö್ಮÃ ಹಾಜರಿದ್ದರು.