ಕೂಡಿಗೆ, ಡಿ. ೨೮: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಗೆ ಅಕಾಲಿಕ ಮಳೆಯಿಂದಾಗಿ ಹೆಚ್ಚು ನೀರು ಹರಿದು ಬಂದಿರುವು ದರಿಂದ ಅಣೆಕಟ್ಟೆ ಭರ್ತಿಯಾಗಿದೆ.

ಕಳೆದ ಆರು ತಿಂಗಳುಗಳಿAದ ಜಿಲ್ಲೆ ಸೇರಿದಂತೆ ಮೈಸೂರು ಭಾಗ ಎರಡೂ ತಾಲೂಕು ಮತ್ತು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಹಾರಂಗಿ ಅಚ್ಚುಕಟ್ಟು ಪ್ರದೇಶಕ್ಕೆ ಭತ್ತ ಬೇಸಾಯಕ್ಕೆ ನೀರನ್ನು ಒದಗಿಸಲಾಗಿ, ಈಗಾಗಲೇ ಭತ್ಯ ಬೆಳೆಯು ಕಟಾವಿಗ್ಕೆ ಬಂದ ಹಿನ್ನೆಲೆಯಲ್ಲಿ ಆಯಾ ಪ್ರದೇಶದ ರೈತರು ಕಟಾವು ಅರಂಭಿಸಿದ್ದಾರೆ. ಈ ಸಾಲಿನಲ್ಲಿ ಹೈಬ್ರೀಡ್ ತಳಿಯ ಬೆಳೆಗಳಾಗಿರುವುದರಿಂದಾಗಿ ಎಲ್ಲಾ ತಳಿಯ ಭತ್ತ ಬೆಳೆಯು ಕಟಾವುಗೆ ಬಂದಿರುವುದರಿAದ ಹಾರಂಗಿ ಅಣೆಕಟ್ಟೆಯಿಂದ ನಾಲೆಯ ಮೂಲಕ ಹರಿಸುವ ನೀರನ್ನು ಸ್ಥಗಿತಗೊಳಿಸಲಾಗಿದೆ.

ಅದರಂತೆ ಈ ಸಾಲಿನಲ್ಲಿ ಅಣೆಕಟ್ಟೆಯು ಜೂನ್ -ಜುಲೈ ಮಾದರಿಯಲ್ಲಿ ಭರ್ತಿಯಾಗಿ ರುವುರಿಂದ ನೀರಿನ ಸಂಗ್ರಹವು ಹೆಚ್ಚಿರುವುದರಿಂದ ಕೊಡಗಿನ ಗಡಿ ಭಾಗವಾದ ಶಿರಂಗಾಲದವರೆಗೆ ಬೇಸಿಗೆ ಬೆಳೆಗೆ ೧೫ ದಿನಗಳಿಗೊಮ್ಮೆ ನಾಲೆಯ ಮೂಲಕ ನೀರು ಹರಿಸಲು ಈ ವ್ಯಾಪ್ತಿಯ ನೂರಾರು ರೈತರು ಒತ್ತಾಯಿಸಿದ್ದಾರೆ.

ಕೊಡಗಿನ ಗಡಿ ಭಾಗದವರೆಗೆ ಹಾರಂಗಿ ನಾಲೆ ಮೂಲಕ ನೀರು ಹರಿಸಲು ಅಣೆಕಟ್ಟೆ ನಿರ್ಮಾಣದ ಸಂದರ್ಭದಲ್ಲಿಯೇ ಗೇಟ್ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ರೈತರು ಹಂಗಾಮಿ ಬೆಳೆಗಳಾದ ಕಾಳು ಬೆಳೆಗಳು ದ್ವಿದಳ ಧಾನ್ಯಗಳನ್ನು ಬೆಳೆಯಲು ಅನುಕೂಲವಾಗುವುದು ಈಗಾಗಲೇ ಅಕಾಲಿಕ ಮಳೆಯಿಂದಾಗಿ ಭತ್ತ ಬೆಳೆ ಮತ್ತು ಶುಂಠಿ, ಸಿಹಿ ಗೆಣಸು, ಕೆÀಸ, ಕನೆ, ಎಲ್ಲಾ ಬೆಳೆಗಳು ಹಾಳಾಗಿ ಈ ಭಾಗದ ರೈತರು ಬಹಳ ಸಂಕಷ್ಟದಲ್ಲಿದ್ದಾರೆ.

ಬೇಸಿಗೆ ಕಾಲದಲ್ಲಿ ಭೂಮಿಯನ್ನು ಪಾಳುಬಿಡುವುದರ ಬದಲು ಹಂಗಾಮಿ ಬೆಳೆಗಳನ್ನು ಬೆಳೆದುಕೊಳ್ಳಲು ನೀರಾವರಿ ಇಲಾಖೆಯವರು ಎರಡು ವಾರಕ್ಕೊಮ್ಮೆ ನಾಲೆಯ ಮೂಲಕ ನೀರು ಹರಿಸಿದರೆ ಬೇಸಾಯ ಮಾಡಲು ಅನುಕೂಲವಾಗುವುದು ಎಂದು ಶಿರಂಗಾಲ, ತೊರೆನೂರು, ಹೆಬ್ಬಾಲೆ, ಭುವನಗಿರಿ ಹುದುಗೂರು ಮದಲಾಪುರ, ಕಾಳಿದೇವನ ಹೊಸೂರು ಗ್ರಾಮದ ರೈತರ ಒತ್ತಾಯವಾಗಿದೆ.

- ಕೆ.ಕೆ. ನಾಗರಾಜಶೆಟ್ಟಿ.