ಮಡಿಕೇರಿ, ಡಿ. ೨೯ : ಕರ್ನಾಟಕ ರಾಜ್ಯ ಅಥ್ಲೆಟಿಕ್ ಸಂಸ್ಥೆ ಬೆಂಗಳೂರು, ಉತ್ತರ ಕನ್ನಡ ಜಿಲ್ಲಾ ಅಥ್ಲೆಟಿಕ್ ಸಂಸ್ಥೆ ಕಾರವಾರ ಹಾಗೂ ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ಇವರ ಸಹಯೋಗದಲ್ಲಿ ಯಲ್ಲಾಪುರದಲ್ಲಿ ನಡೆದ ೫೬ನೇ ರಾಜ್ಯಮಟ್ಟದ ಕ್ರಾಸ್ ಕಂಟ್ರಿ ಚಾಂಪಿಯನ್ ಷಿಪ್ ನ ಪುರುಷರ ೧೦ ಕಿ. ಮೀ ಸ್ಪರ್ಧೆಯಲ್ಲಿ ಕೊಡಗು ಜಿಲ್ಲೆಯಿಂದ ಸ್ಪರ್ಧಿಸಿದ ನಿತಿನ್ ಕುಮಾರ್.ಎಂ ಕಂಚಿನ ಪದಕ ಪಡೆದಿದ್ದು, ಜನವರಿ ೧೫ರಂದು ಕೊಹಿಮಾ ನಾಗಾಲ್ಯಾಂಡ್ ನಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಕ್ರಾಸ್ ಕಂಟ್ರಿ ಚಾಂಪಿಯನ್ ಷಿಪ್ ಗೆ ಆಯ್ಕೆಯಾಗಿದ್ದಾರೆ.

ಕುಶಾಲನಗರ ಕರಿಯಪ್ಪ ಬಡಾವಣೆ ನಿವಾಸಿಗಳಾದ ಮುರುಗ ಮತ್ತು ಮಂಜುಳಾ ದಂಪತಿಗಳ ಪುತ್ರರಾದ ನಿತಿನ್ ಕುಮಾರ್ ಗೆ ಕೂಡಿಗೆ ಕ್ರೀಡಾ ಶಾಲೆಯ ತರಬೇತುದಾರ ಅಂತೋನಿ ಡಿಸೋಜಾ ಮಾರ್ಗದರ್ಶಕರಾಗಿದ್ದಾರೆ.