ಸುಂಟಿಕೊಪ್ಪ, ಡಿ. ೨೮: ಮಾದಾಪುರ ಹೋಬಳಿಯಲ್ಲಿ ಕಂದಾಯ ಕಚೇರಿಯನ್ನು ಸ್ಥಾಪಿಸಬೇಕೆಂದು ಕಳೆದ ಬಾರಿ ನಡೆದ ಮಾದಾಪುರ ಗ್ರಾಮ ಪಂಚಾಯಿತಿ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿ ನಿರ್ಣಯ ಮಂಡಿಸಿದರೂ ಅನುಷ್ಠಾನಗೊಂಡಿಲ್ಲ. ೧ ತಿಂಗಳ ಒಳಗೆ ಸೋಮವಾರಪೇಟೆ ತಾಲೂಕು ಕಚೇರಿಯಿಂದ ಮಾದಾಪುರ ಕಂದಾಯ ಕಚೇರಿ ಸ್ಥಾಪನೆ ಯಾಗದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದೆಂದು ಗ್ರಾಮಸ್ಥರು ಎಚ್ಚರಿಸಿದರು.
ಮಾದಾಪುರ ಗ್ರಾಮ ಪಂಚಾಯಿತಿಯ ಗ್ರಾಮಸಭೆ ಮಾದಾಪುರ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಗ್ರಾ.ಪಂ. ಅಧ್ಯಕ್ಷೆ ಕೆ.ಸಿ. ಶೀಲಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಗ್ರಾಮ ಸಭೆಗೆ ಕಂದಾಯ ನಿರೀಕ್ಷಕರು ಬರಬೇಕಾಗಿತ್ತು. ಸಮಾಜ ಕಲ್ಯಾಣ ಇಲಾಖೆಯಿಂದ ಸಿಬ್ಬಂದಿ ಬಂದಿದ್ದಾರೆ. ಮಾದಾಪುರ ತೋಟಗಾರಿಕಾ ಇಲಾಖೆ ಪ್ರಮುಖ ಅಧಿಕಾರಿ ಬರಲಿಲ್ಲ ಅಧಿಕಾರಿಗಳು ಬಾರದ ಇಂತಹ ಸಭೆ ನಡೆಸಿ ಏನು ಪ್ರಯೋಜನ ೨೦೧೯ರಲ್ಲೇ ಮಾದಾಪುರ ಹೋಬಳಿ ಕಂದಾಯ ಕಚೇರಿ ಆರಂಭಿಸಲು ಒತ್ತಾಯಿಸುತ್ತಲೇ ಬರುತ್ತಿ ದ್ದೇವೆ. ಮಾದಾಪುರ ಹೋಬಳಿಯ ಹಾಲೇರಿ, ಕಾಂಡನಕೊಲ್ಲಿ, ಹಟ್ಟಿಹೊಳೆ, ಮೂವತೋಕ್ಲು, ಶಿರಂಗಳ್ಳಿ, ಗರ್ವಾಲೆ, ಸೂರ್ಲಬ್ಬಿ, ಹರದೂರು, ಗರ ಗಂದೂರು, ಮಾದಾಪುರ ಕುಂಬೂರು ಮೊದಲಾದ ಗ್ರಾಮಸ್ಥರು ದೂರದ ಸೋಮವಾರಪೇಟೆ ತೆರಳಿ ಕಂದಾಯ ಇಲಾಖೆಯ ಕೆಲಸ ಮಾಡುವುದು ತ್ರಾಸದಾಯಕವಾಗಿದೆ ಎಂದು ಮಂದೆಯAಡ ಗಣೇಶ, ಕೊಪತಂಡ ಗಣೇಶ, ಪಿ.ಎಸ್. ರತೀಶ, ಮೋಹನ ಕುಮಾರ್, ದೇವಯ್ಯ, ಜಂಬೂರು ಹರೀಶ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸದಸ್ಯ ಕೆ.ಎ. ಲತೀಫ್ ಮಾದಾಪುರ ಹಿತದೃಷ್ಟಿಯಿಂದ ಮಾದಾಪುರ ಹೋಬಳಿ ಕಂದಾಯ ಕಚೇರಿ ಆಗÀಬೇಕಾಗಿದೆ. ಇದಕ್ಕೆ ನಮ್ಮೆಲ್ಲರ ಸಹಮತವಿದೆ ಎಂದಾಗ ಅಧ್ಯಕ್ಷರು ಸೇರಿ ಎಲ್ಲಾ ಸದಸ್ಯರು ಬೆಂಬಲ ಸೂಚಿಸಿದರು. ನಂತರ ನಿರ್ಣಯ ಕೈಗೊಳ್ಳಲಾಯಿತು.
ಮಾದಾಪುರದಲ್ಲಿ ವೈದ್ಯರಿಲ್ಲ: ಮಾದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ ಜನರಿಗೆ ತೊಂದರೆಯಾಗಿದೆ. ರಾತ್ರಿ ಪಾಳೆಯದ ವೈದ್ಯರ ನೇಮಕ ಮಾಡಬೇಕು ಆಸ್ಪತ್ರೆಯನ್ನು ಮೇಲ್ಧರ್ಜೆಗೆ ಏರಿಸಬೇಕು ಎಂದು ಪೊಡನೋಳಂಡ ಮೋಹನ್‌ಕುಮಾರ್ ನಾಸೀರ್, ಉಬೈದುಲ್ಲಾ ನಿವೃತ್ತ ಸೈನಿಕ ನಂದ ಆಗ್ರಹಿಸಿದರು.
ಗ್ರಾಮ ಪಂಚಾಯಿತಿ ಯಿಂದ ಈ ಬಗ್ಗೆ ನಿರ್ಣಯ ಕೈಗೊಂಡು ಮೇಲಧಿಕಾರಿಗಳಿಗೆ ಕಳುಹಿಸಲಾಗುವುದೆಂದು ಪಿಡಿಓ ಪೂರ್ಣಕುಮಾರ್ ಉತ್ತರಿಸಿದರು.
ಜಂಬೂರು ಗ್ರಾಮಕ್ಕಾಗಿ ಈಗ ಎಲ್ಲಾ ಖಾಸಗಿ ಬಸ್‌ಗಳು ಇಕ್ಕಟಾದ ರಸ್ತೆಯಲ್ಲಿ ಸಂಚರಿಸುತ್ತಿದ್ದು ,ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ಬಸ್ ಬರುವಾಗ ದ್ವಿಚಕ್ರ ವಾಹನ ಸಂಚರಿಸಲು ಸಾಧ್ಯವಾಗುತ್ತಿಲ್ಲ. ರಸ್ತೆ ಸರಿಪಡಿಸಿ ಎಂದು ಬಿ.ಎಸ್. ಕಾವೇರಪ್ಪ, ಪಿ.ಎಸ್. ರತೀಶ್, ದೇವಯ್ಯ ಹಾಗೂ ಗಣೇಶ ಆಗ್ರಹಿಸಿದರು.
ಮಾದಾಪುರ ಗ್ರಾ.ಪಂ. ಉಪಾಧ್ಯಕ್ಷ ಗೋಪಿ, ಸದಸ್ಯರುಗಳಾದ ಕೆ.ಎ. ಲತೀಫ್, ಪಿ.ಡಿ. ಅಂತೋಣಿ, ಮನು ಬಿದ್ದಪ್ಪ, ಸುರೇಶಭಾವೆ, ನಿರೂಪ, ಗಿರೀಶ ಸೋಮಣ್ಣ, ಮಾನಸ, ಭಾಗೀರಥಿ, ಜರ್ಮಿ, ದಮಯಂತಿ, ಪಿಡಿಓ ಟಿ.ಸಿ. ಪೂರ್ಣಕುಮಾರ್, ಕೃಷಿ ಅಧಿಕಾರಿ ಮನಸ್ವಿ, ಕಂದಾಯ ಗ್ರಾಮಲೆಕ್ಕಾಧಿಕಾರಿ ಚಂದನ, ಆಹಾರ ಇಲಾಖೆ ಯಶಸ್ವಿನಿ, ಆರೋಗ್ಯ ಇಲಾಖೆ ನಿರೀಕ್ಷಕ ಶಿವಪ್ಪ, ಸಮಾಜ ಕಲ್ಯಾಣ ಇಲಾಖೆಯ ರಜನಿಕಾಂತ್, ಜಲಜೀವನ್ ಮಿಷನ್ ಜಿ.ಪಂ. ಗ್ರಾಮೀಣ ಕುಡಿಯುವ ನೀರು ಇಲಾಖೆ ಅಭಿಯಂತರ ವಿರೇಂದ್ರ ಇಲಾಖೆಯ ಮಾಹಿತಿ ನೀಡಿದರು.