ಕೂಡಿಗೆ, ಡಿ. ೨೮: ಕಳೆದ ೨೨ ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಊರಿಗೆ ಮರಳಿದ ಯೋಧನಿಗೆ ಗ್ರಾಮಸ್ಥರು ಮತ್ತು ಸ್ನೇಹ ಬಳಗದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ತೊರೆನೂರು ಗ್ರಾಮದ ಟಿ.ವಿ. ರವಿ ಸೇನೆಯಿಂದ ನಿವೃತ್ತಿಯಾದ ಹಿನ್ನೆಲೆ ತೊರೆನೂರು ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭ ತೊರೆನೂರು ಗ್ರಾಮ ಪಂಚಾಯಿತಿ ಸದಸ್ಯ, ಸಹಕಾರ ಸಂಘದ ನಿರ್ದೇಶಕ ಶಿವಕುಮಾರ್, ಸಹಕಾರ ಸಂಘದ ಮಾಜಿ ಅಧ್ಯಕ್ಷ ಟಿ.ಎಸ್. ಕೃಷ್ಣೇಗೌಡ, ನಿರ್ದೇಶಕರಾದ ಟಿ.ಕೆ. ಪಾಂಡುರAಗ, ಚಂದ್ರಪ್ಪ, ಚಂದ್ರಶೇಖರ, ಪ್ರಕಾಶ್ ಶಿವಪ್ಪ ಸೇರಿದಂತೆ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.