ಮಡಿಕೇರಿ, ಡಿ. ೨೮: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ವತಿಯಿಂದ ಮಡಿಕೇರಿ ನಗರದಲ್ಲಿ ಅಂಗಡಿ ಮುಂಗಟ್ಟುಗಳ ಮೇಲೆ ಕೋಟ್ಪಾ ೨೦೦೩ ತನಿಖಾ ದಾಳಿ ನಡೆಯಿತು.

ಕೋಟ್ಪಾ ಕಾಯ್ದೆಯನ್ನು ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸುವುದು, ಸಾರ್ವಜನಿಕರಿಗೆ ತಂಬಾಕು ಉತ್ಪನ್ನಗಳ ದುಷ್ಪರಿಣಾಮಗಳು ಹಾಗೂ ಕಾಯ್ದೆಯ ಕುರಿತು ಅರಿವು ಮೂಡಿಸಲಾಯಿತು. ದಾಳಿಯಲ್ಲಿ ಒಟ್ಟು ರೂ. ೨೪೦೦ ದಂಡ ಸಂಗ್ರಹಣೆ ಮಾಡಲಾಯಿತು, ಸೆಕ್ಷನ್ ೪ ರಡಿಯಲ್ಲಿ ರೂ. ೨೦೦೦ ಹಾಗೂ ೧೦ ಪ್ರಕರಣಗಳು ಮತ್ತು ಸೆಕ್ಷನ್ ೬ಂ ರಡಿಯಲ್ಲಿ ರೂ. ೪೦೦ ಹಾಗೂ ೨ ಪ್ರಕರಣಗಳನ್ನು ದಾಖಲು ಮಾಡಲಾಯಿತು. ಈ ದಾಳಿಯಲ್ಲಿ ಕೋಟ್ಪಾ ತನಿಖಾ ತಂಡದ ಸದಸ್ಯರಾದ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪಾಲಾಕ್ಷ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜೇಂದ್ರ, ಲೋಕೇಶ್, ಶ್ರೀನಾಥ್ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣದ ಜಿಲ್ಲಾ ಸಮಾಜ ಕಾರ್ಯಕರ್ತ ಆರ್. ಮಂಜುನಾಥ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.