ಮಡಿಕೇರಿ, ಡಿ. ೨೯: ಧಾರ್ಮಿಕ, ಆಡಳಿತ, ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳಿಗಾಗಿ ಕರ್ನಾಟಕ ಸಾಂಸ್ಕೃತಿಕ ಪರಿಷತ್ತು ಸೃಷ್ಟಿ ಶಕ್ತಿ ಸಂಸ್ಥೆ ಕೊಡಮಾಡುವ ವಿಶ್ವಜ್ಯೋತಿ ಬಸವಣ್ಣ ಪ್ರಶಸ್ತಿ ಶಿರಂಗಾಲ ಗ್ರಾ.ಪಂ. ಮಾಜಿ ಅಧ್ಯಕ್ಷ, ಸಮಾಜ ಸೇವಕ ಎಸ್.ವಿ. ನಂಜುAಡಪ್ಪ ಅವರಿಗೆ ಲಭಿಸಿದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕಾರ ಮಾಡಿದರು.