ಕಡAಗ, ಡಿ. ೨೭: ಐಪಿಎಲ್ ಮಾದರಿಯ ಗೋಣಿಕೊಪ್ಪ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಜನವರಿ ೧೪, ೧೫ ಮತ್ತು ೧೬ ರಂದು ಗೋಣಿಕೊಪ್ಪ ಸರ್ಕಾರಿ ಶಾಲೆ ಮೈದಾನದಲ್ಲಿ ನಡೆಸುವುದಾಗಿ ಜಿಪಿಎಲ್ ಆಯೋಜಕರುಗಳು ತಿಳಿಸಿ ದ್ದಾರೆ. ಜಿಪಿಎಲ್ ಕ್ರಿಕೆಟ್ ಪಂದ್ಯಾವಳಿ ಯಲ್ಲಿ ಐಪಿಎಲ್ ಮಾದರಿ ೮ ತಂಡಗಳು ಭಾಗವಹಿಸಲಿದ್ದು, ಸಮವಸ್ತç ಹಾಗೂ ನಿಯಮಗಳು ಮತ್ತು ತಂಡಗಳ ಹೆಸರು ಎಲ್ಲವೂ ಐಪಿಎಲ್‌ಗೆ ಹೋಲಿಕೆಯಾಗು ವುದು ವಿಶೇಷವಾಗಿದೆ. ೮ ತಂಡಗಳಿಗೆ ೧೨೦ ಆಟಗಾರರನ್ನು ಐಪಿಎಲ್ ಮಾದರಿಯಲ್ಲಿ ಬಿಡ್ಡಿಂಗ್ ಮುಖಾಂತರ ತಂಡದ ಮಾಲೀಕರುಗಳು ಆಟಗಾರರನ್ನು ಖರೀದಿ ಮಾಡಿದ್ದಾರೆ.

ತಂಡಗಳ ವಿವರ: ಎ.ಒನ್.ಶರತ್ ಅವರ ಮಾಲೀಕತ್ವದ ಮುಂಬೈ ಇಂಡಿಯನ್ಸ್, ವೇಣು ಮಾಲೀಕತ್ವದ ಚೆನ್ನೆöÊ ಸೂಪರ್ ಕಿಂಗ್ಸ್, ಮುಕ್ತಾರ್ ಮಾಲೀಕತ್ವದ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು, ಎವೈಸಿ ಮಾಲೀಕತ್ವದ ರಾಜಸ್ತಾನ್ ರಾಯಲ್ಸ್, ಅಲ್ ಸ್ಟಾರ್ ಮಾಲಿಕ್ವತದ ಕೊಲ್ಕತ್ತಾ ನೈಟ್ ರೈಡರ್ಸ್, ಕವಿ ಸುಬ್ಬಯ್ಯ ಮಾಲೀಕತ್ವದ ಡೆಲ್ಲಿ ಡೇರ್ ಡೆವಿಲ್ಸ್, ನೌಫಾಲ್ ಆಫ್ರಿ ಮಾಲೀಕತ್ವದ ಪಂಜಾಬ್ ಕಿಂಗ್ಸ್ ಇಲೆವೆನ್, ಗಗನ್ ಮುಕ್ಕಾಟಿ ಮಾಲೀಕತ್ವÀದ ಸನ್‌ರೈರ‍್ಸ್ ಹೈದ್ರಾಬಾದ್ ಈ ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಿವೆ. ಸ್ಥಳೀಯ ಯುವಕರುಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಗೋಣಿಕೊಪ್ಪಲು ವಿನ ಕ್ರೀಡಾಪಟುಗಳಿಗೆ ಮಾತ್ರ ಜಿಪಿಎಲ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸ ಲಾಗಿದೆ ಎಂದು ಜಿಪಿಎಲ್ ಸಮಿತಿಯ ಅಧ್ಯಕ್ಷ ಸಿಂಗಿ ಸತೀಶ್ ಅವರು ತಿಳಿಸಿ ದ್ದಾರೆ. ಜಿಪಿಎಲ್ ಕ್ರೀಡಾಕೂಟಕ್ಕೆ ಮುಖ್ಯ ಪ್ರಾಯೋಜಕರಾಗಿ ಬೆಂಗಳೂರಿನ ಪ್ರೊಟೆಕ್ ಪ್ರೆöÊವೇಟ್ ಲಿಮಿಟೆಡ್ ಗ್ರೂಪ್ ಕೈಜೋಡಿಸಿದ್ದಾರೆ.

-ನೌಫಲ್