ಮಡಿಕೇರಿ, ಡಿ. ೨೭: ಭಾರತರತ್ನ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಜಯಂತಿಯನ್ನು ಮಡಿಕೇರಿ ನಗರ ಬಿಜೆಪಿ ವತಿಯಿಂದ ಜಿಲ್ಲಾ ಕಚೇರಿಯಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ನಗರ ಬಿಜೆಪಿ ಅಧ್ಯಕ್ಷ ಮನು ಮಂಜುನಾಥ್, ಪ್ರಧಾನ ಕಾರ್ಯದರ್ಶಿಗಳಾದ ಉಮೇಶ್ ಸುಬ್ರಮಣಿ ಮತ್ತು ಅಪ್ಪಣ್ಣ, ಉಪಾಧ್ಯಕ್ಷರಾದ ಜಗದೀಶ್, ನಗರಸಭಾ ಸದಸ್ಯರಾದ ಕೆ ಎಸ್ ರಮೇಶ್, ಚಂದ್ರಶೇಖರ್, ಶ್ವೇತಾ, ಖಜಾಂಚಿ ಮುರುಗನ್, ಮೋಹನ್ ಹಾಗೂ ಕಾರ್ಯಕರ್ತರುಗಳು ಹಾಜರಿದ್ದರು.ಪೆರಾಜೆ: ಬಿ.ಜೆ.ಪಿ ಶಕ್ತಿ ಕೇಂದ್ರ ಪೆರಾಜೆ ವತಿಯಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನವನ್ನು ಅವರ ಬಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಆಚರಿಸಲಾಯಿತು. ಈ ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದ ಕೊಡಗು ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಮಾತನಾಡಿ, ಬಹುದೂರದರ್ಶಿತ್ವ ಹೊಂದಿದ ವಾಜಪೇಯಿ ಯವರು ತಮ್ಮ ಆಡಳಿತದ ಅವಧಿಯಲ್ಲಿ ಹಾಕಿಕೊಂಡ ಬೃಹತ್ ಯೋಜನೆಗಳು ಅನುಷ್ಠಾನಗೊಂಡು ದೇಶಕ್ಕೆ ಉತ್ತಮ ಹೆಸರು ಬಂದಿದೆ.ಅದೇ ಕಾರಣದಿಂದ ಇಂದು ಹಳ್ಳಿಯಿಂದ ಡೆಲ್ಲಿಯತನಕ ಬಿಜೆಪಿ ಆಡಳಿತದಲ್ಲಿದೆ ಎಂದರು.

ಭಾರತೀಯರಲ್ಲಿ ಸೇನೆಯ ಬಗ್ಗೆ ಅಭಿಮಾನ, ಗೌರವ ಹಿಮ್ಮಡಿಯಾಗಿ ಮೂಡಿಸಿ, ದೇಶ ಭಕ್ತಿ ಜಾಗೃತಿ ಗೊಳಿಸಿದ್ದ ವಾಜಪೇಯಿಯವರ ಸಾಧನೆಯನ್ನು ಭಾರತೀಯರು ಎಂದೆAದಿಗೂ ಮರೆಯಲಾರರು. ಇಂದಿಗೂ ಕೂಡ ಅಟಲ್ ಜೀಯವರು ಹಾಕಿಕೊಟ್ಟ ಮಾರ್ಗದಲ್ಲಿ ನಮ್ಮ ಸರಕಾರದ ಕೆಲಸಕಾರ್ಯಗಳು ನಡೆಯುತ್ತಿವೆ. ಹಾಗಾಗಿ ಭಾರತೀಯ ಜನತಾ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನು ವಾಜಪೇಯಿ ಅವರ ಮಾರ್ಗದರ್ಶನವನ್ನು ತಮ್ಮ ಕೆಲಸ ಕಾರ್ಯಗಳಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. ಶಕ್ತಿ ಕೇಂದ್ರದ ಅಧ್ಯಕ್ಷ ನಂಜಪ್ಪ ನಿಡ್ಯಮಲೆ, ಮಡಿಕೇರಿ ತಾ. ಬಿಜೆಪಿ ಕಾರ್ಯದರ್ಶಿ ಪ್ರಸನ್ನ ನೆಕ್ಕಿಲ, ಉಪೇಂದ್ರ ಕುಂದಲ್ಪಾಡಿ, ಗ್ರಾ.ಪಂ. ಉಪಾಧ್ಯಕ್ಷೆ ಜಯಲಕ್ಷಿö್ಮ ಧರಣೀಧರ, ಸದಸ್ಯ ಉದಯಚಂದ್ರ ಕುಂಬಳಚೇರಿ, ತಾ. ಓಬಿಸಿ ಮೋರ್ಚಾದ ಪದಾಧಿಕಾರಿ ಪ್ರದೀಪ ಪೆರಾಜೆ, ತಾ. ಭಾಜಪ ಪದಾಧಿಕಾರಿ ಪ್ರವೀಣ ಮಜಿಕೋಡಿ, ಸೀತಾರಾಮ ಕದಿಕಡ್ಕ ಸೇರಿದಂತೆ ಕಾರ್ಯಕರ್ತರು, ಗ್ರಾಮಸ್ಥರು ಇದ್ದರು.