ಮಡಿಕೇರಿ, ಡಿ. ೨೭: ಕೊಡಗು ವೆಲ್ಫೇರ್ ಫೌಂಡೇಶನ್ ವತಿಯಿಂದ ಫೆಬ್ರವರಿ ೨೬ ರಿಂದ ವೀರಾಜಪೇಟೆಯಲ್ಲಿ ಕೊಡಗು ಕ್ರೀಡಾ ಉತ್ಸವ ಆಯೋಜಿಸಲಾಗಿದೆ ಎಂದು ಫೌಂಡೇಶನ್ನ ಚೇರ್ಮೆನ್ ಮಾದಂಡ ತಿಮ್ಮಯ್ಯ ತಿಳಿಸಿದರು.
(ಮೊದಲ ಪುಟದಿಂದ)
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನ ಕ್ರೀಡಾಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಹಾಗೂ ಒಲಂಪಿಕ್ಸ್ಗೆ ಕೊಡಗಿನ ಪ್ರತಿಭೆಗಳು ಭಾಗವಹಿಸುವಂತೆ ಆಗಬೇಕೆಂಬ ದೂರದೃಷ್ಟಿಯಲ್ಲಿ ಕ್ರೀಡಾ ಉತ್ಸವ ಹಮ್ಮಿಕೊಳ್ಳಲಾಗಿದೆ.
೧೪ ಹಾಗೂ ೧೮ ವಯೋಮಿತಿಯೊಳಗಿನ ಹಾಗೂ ಮುಕ್ತ ವಿಭಾಗದಲ್ಲಿ ರಿಂಕ್ ಹಾಕಿ, ಸೂಪರ್ ೫ ಫುಟ್ಬಾಲ್, ಥ್ರೋಬಾಲ್, ಕಬ್ಬಡಿ, ಬ್ಯಾಡ್ಮಿಂಟನ್, ಹಗ್ಗಜಗ್ಗಾಟ, ವಿವಿಧ ವಿಭಾಗದಲ್ಲಿ ಅಥ್ಲೆಟಿಕ್ಸ್, ಲಾಂಗ್ ಜಂಪ್, ಜಾವೆಲಿನ್ ಥ್ರೋ, ಶಾಟ್ಪೂಟ್, ಚೆಸ್, ಟೇಬಲ್ ಟೆನ್ನಿಸ್, ಬಾಸ್ಕೆಟ್ಬಾಲ್, ವಾಲಿಬಾಲ್ ಹಾಗೂ ಕರಾಟೆ ಪಂದ್ಯಾಟಗಳು ನಡೆಸಲಾಗುತ್ತದೆ. ಪಂದ್ಯಾವಳಿಗಳಿಗೆ ಅಂತರರಾಷ್ಟಿçÃಯ ತೀರ್ಪುಗಾರರು ಹಾಗೂ ಆಟಗಾರರು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಇದೇ ಮೊದಲ ಬಾರಿಗೆ ಕ್ರೀಡಾ ಉತ್ಸವ ಆಯೋಜನೆ ಮಾಡುತ್ತಿದ್ದು, ಆಸಕ್ತರು ಜ. ೩೦ರೊಳಗೆ ಪಂದ್ಯಾವಳಿಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಕ್ರೀಡಾಕೂಟಕ್ಕೆ ಕೇವಲ ಕೊಡಗಿನ ನಿವಾಸಿಗಳು ಮಾತ್ರ ಭಾಗವಹಿಸಲು ಅವಕಾಶವಿದೆ.
ಹೆಚ್ಚಿನ ಮಾಹಿತಿಗೆ ೮೨೯೬೨೯೧೮೮೯, ೮೩೧೭೪೯೧೪೦೮, ೯೬೮೬೪೧೦೬೬೨ ಸಂಖ್ಯೆಯನ್ನು ಸಂಪರ್ಕಿಸುವAತೆ ಮನವಿ ಮಾಡಿದ ಅವರು, ಕೊಡಗಿನ ಕ್ರೀಡಾ ಸಾಧಕರನ್ನು ಗುರುತಿಸಿ ಕ್ರೀಡಾಶ್ರೀ ಬಿರುದು ನೀಡಿ ಸನ್ಮಾನಿಸಲಾಗುವುದು ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಫೌಂಡೇಶನ್ ನಿರ್ದೇಶಕ ಹೆಚ್.ಪಿ. ಸುಭಾಷ್ ಇದ್ದರು.