ಪೊನ್ನಂಪೇಟೆ, ಡಿ.೨೭: ಪೊನ್ನಂಪೇಟೆ ತಾಲೂಕಿನ ನೂತನ ತಹಶೀಲ್ದಾರ್ ಆಗಿ ಎನ್.ಎಸ್ ಪ್ರಶಾಂತ್ ಅವರು ಇಂದು ಅಧಿಕಾರ ಸ್ವೀಕರಿಸಿದರು. ಪೊನ್ನಂಪೇಟೆ ನೂತನ ತಾಲೂಕಿನ ಹೆಚ್ಚುವರಿ
(ಮೊದಲ ಪುಟದಿಂದ) ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವೀರಾಜಪೇಟೆ ತಾಲೂಕಿನ ತಹಶೀಲ್ದಾರ್ ಯೋಗಾನಂದ್ ಅವರು ನೂತನ ತಹಶೀಲ್ದಾರ್ ಪ್ರಶಾಂತ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ನೂತನ ತಾಲೂಕು ರಚನೆ ಆಗಿ ಹತ್ತು ತಿಂಗಳ ನಂತರ ಪೊನ್ನಂಪೇಟೆ ತಾಲೂಕಿಗೆ ಖಾಯಂ ತಹಶೀಲ್ದಾರ್ ನೇಮಕ ಆಗಿದೆ. ಈ ಸಂದರ್ಭ ಪೊನ್ನಂಪೇಟೆ ನಾಗರಿಕ ವೇದಿಕೆ ಅಧ್ಯಕ್ಷ ಪಿ.ಬಿ. ಪೂಣಚ್ಚ, ಸದಸ್ಯರಾದ ಎ.ಎ. ಎರ್ಮು ಹಾಜಿ, ಎಂ.ಎನ್. ಕುಶಾಲಪ್ಪ, ಎಂ.ಪಿ. ಅಪ್ಪಚ್ಚು ಹಾಜರಿದ್ದರು.