ಹೆಬ್ಬಾಲೆ, ಡಿ. ೨೮: ಸೋಮವಾರಪೇಟೆ ತಾಲೂಕಿನ ಕಾವೇರಿ ಮೀನುಗಾರರ ಸಹಕಾರ ಸಂಘ ಹಾರಂಗಿ ಆಡಳಿತ ಮಂಡಳಿಗೆ ಮುಂದಿನ ಐದು ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ೧೩ ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ನಾಕೂರು ಸಾಮಾನ್ಯ ಕ್ಷೇತ್ರದಿಂದ ಕೆ.ಎಸ್. ಮಹಮ್ಮದ್, ಜನಾರ್ಧನ ಹಳ್ಳಿಯಿಂದ ಧರ್ಮ, ದೊರೇಶ್, ಮುಳ್ಳೂರಿನಿಂದ ಮಂಜು, ಗರಗಂದೂರಿನಿAದ ರಸಾಕ್, ನಾಕೂರಿನಿಂದ ಜಯರಾಮ್, ಶಿರಂಗಾಲ ಗ್ರಾಮದಿಂದ ಕೃಷ್ಣ, ಯಡವಾರೆ ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಮನೋಹರ್, ನಾಕೂರು ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಅಬ್ಬಾಸ್, ಗುಮ್ಮನಕೊಲ್ಲಿ ಮಹಿಳಾ ವರ್ಗದಿಂದ ಧನಮ್ಮ, ಶಿರಂಗಾಲದಿAದ ಸೌಮ್ಯಾ, ಜನಾರ್ಧನಹಳ್ಳಿ ಪರಿಶಿಷ್ಟ ಜಾತಿ ಕ್ಷೇತ್ರದಿಂದ ತನು ಹಾಗೂ ತೊರೆನೂರಿನಿಂದ ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಅಧಿಕಾರಿ ಬಿ.ಜಿ. ಸಂದೀಪ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.