*ಗೋಣಿಕೊಪ್ಪ, ಡಿ. ೨೮: ಸೇವನೆಗೆ ಯೋಗ್ಯವಲ್ಲದ ಸುಮಾರು ೬ ಲಕ್ಷ ಮೌಲ್ಯದ ೨೭೬ ಲೀಟರ್ ಮದ್ಯಗಳನ್ನು ಅಬಕಾರಿ ಅಧಿಕಾರಿಗಳು ನಾಶಪಡಿಸಿದರು.

ಕರ್ನಾಟಕ ರಾಜ್ಯ ಪಾನೀಯ ನಿಗಮದ ವೀರಾಜಪೇಟೆ ಕಚೇರಿಯಲ್ಲಿ ಮಾರಾಟವಾಗದೆ ಉಳಿದ ಅನುಪಯುಕ್ತ ಮದ್ಯಗಳನ್ನು ಪರಿಸರಕ್ಕೆ ಹಾನಿಯಾಗದಂತೆ ನಾಶಪಡಿಸಿದರು.

೨೭ ಕೇಸ್‌ನಲ್ಲಿದ್ದ ೩ ಸಾವಿರಕ್ಕೂ ಹೆಚ್ಚು ಬೆಲೆಬಾಳುವ ವಿದೇಶಿ ಮದ್ಯದ ಬಾಟಲಿಗಳು ಸೇರಿದಂತೆ ವಿವಿಧ ಬಗೆಯ ಅನುಪಯುಕ್ತ ಮದ್ಯಗಳನ್ನು ಜಿಲ್ಲಾ ಅಬಕಾರಿ ಉಪ ಆಯುಕ್ತ ಜಗದೀಶ್ ನಾಯಕ್ ಆದೇಶನ್ವಯ ವೀರಾಜಪೇಟೆ ತಾಲೂಕು ಅಬಕಾರಿ ಉಪ ಅಧೀಕ್ಷಕ ಎಂ. ಮಹಾದೇವ್ ನೇತೃತ್ವದಲ್ಲಿ ವೀರಾಜಪೇಟೆ ಕಚೇರಿಯ ನಿರೀಕ್ಷಕಿ ಭಾಗ್ಯ, ಉಪನಿರೀಕ್ಷಕ ಸೋಮಣ್ಣ, ವೀರಾಜಪೇಟೆ ಉಪವಿಭಾಗ ಇನ್ಸ್ಪೆಕ್ಟರ್ ಸತ್ಯಪ್ರಕಾಶ್, ಉಪ ತಹಶೀಲ್ದಾರ್ ಅನುನಾಯಕ್, ವೀರಾಜಪೇಟೆ ಠಾಣಾಧಿಕಾರಿ ಜಗದೀಶ್ ದೂಳ್‌ಶೆಟ್ಟಿ, ಪಾನೀಯ ನಿಗಮದ ವೀರಾಜಪೇಟೆ ಕಚೇರಿಯ ವ್ಯವಸ್ಥಾಪಕ ವೆಂಕಟೇಶ್, ಮೇಲ್ವಿಚಾರಕ ಉತ್ತಪ್ಪ ಸೇರಿದಂತೆ ಸಿಬ್ಬಂದಿಗಳು ಮದ್ಯಗಳನ್ನು ಪರಿಸರಕ್ಕೆ ಹಾನಿಯಾಗದಂತೆ ನಾಶಪಡಿಸಿದರು.

- ಎನ್.ಎನ್. ದಿನೇಶ್