ಮಡಿಕೇರಿ, ಡಿ.೨೭: ಮರಂದೋಡ ದವಸ ಭಂಡಾರ ಕಟ್ಟಡದಲ್ಲಿ ಕೊಡವ ಸಂಘದ ೧೦ನೇ ವರ್ಷದ ಮಹಾಸಭೆ ನಡೆಯಿತು. ಸಂಘದ ಅಧ್ಯಕ್ಷ ಅನ್ನಡಿಯಂಡ ದಿಲೀಪ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಳೆದ ಮಹಾಸಭೆಯ ವರದಿಯನ್ನು ಮಾರ್ಚಂಡ ಗಣೇಶ್ ಪೊನ್ನಪ್ಪ, ಲೆಕ್ಕ ಪರಿಶೋಧನೆಯನ್ನು ನೀಡುಮಂಡ ಹರೀಶ್ ಪೂವಯ್ಯ ಮಂಡಿಸಿದರು. ಮದುವೆಯಾದ ಹೊಸ ದಂಪತಿಗಳಿಗೆ ಹಾಗೂ ಮದುವೆ ಆಗಿ ೫೦ ವರ್ಷ ಪೂರೈಸಿದ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಹೊಸ ಆಡಳಿತ ಮಂಡಳಿಗೆ ಸದಸ್ಯರನ್ನು ನೇಮಿಸಲಾಯಿತು.
ಸಭೆಯಲ್ಲಿ ಗ್ರಾ.ಪಂ. ಸದಸ್ಯ ಚೋಯಮಾಡಂಡ ಹರೀಶ್ ಮೊಣ್ಣಪ್ಪ, ಸೇನಾ ತರಬೇತುದಾರ ಮಾರ್ಚಂಡ ಗಣೇಶ್ ಪೊನ್ನಪ್ಪ, ಹಾಕಿ ತೀರ್ಪುಗಾರ ಚೋಯಮಾಡಂಡ ಯು.ಚಂಗಪ್ಪ, ನಟ ಅನ್ನಡಿಯಂಡ ವಿಕಾಸ್ ಉತ್ತಯ್ಯ, ನೃತ್ಯಪಟು ಮಾರ್ಚಂಡ ಮಿಥುನ್ ಮುದ್ದಯ್ಯ, ಅಂರ್ರಾಷ್ಟೀಯ ಹಾಕಿ ಆಟಗಾರ ಮಾರ್ಚಂಡ ಸಚಿನ್ ಸೋಮಣ್ಣ, ಅನ್ನಡಿಯಂಡ ಎಂ. ನಿಖಿಲ್ ಪೊನ್ನಣ್ಣ ಅವರುಗಳನ್ನು ಸನ್ಮಾನಿಸಲಾಯಿತು. ಚೋಯಮಾಡಂಡ ಶಶಿಕಲಾ ಪ್ರಾರ್ಥಿಸಿ, ದಿಲೀಪ್ ಕುಮಾರ ಸ್ವಾಗತಿಸಿ, ಮಾರ್ಚಂಡ ಬಾಬಿ ತಿಮ್ಮಯ್ಯ ವಂದಿಸಿದರು.