ಸೋಮವಾರಪೇಟೆ, ಡಿ. ೨೬: ತಾಲೂಕಿನ ಸುಂಟಿಕೊಪ್ಪ ಸಮೀಪದ ಗುಂಟಿಗುಟ್ಟಿ ಸರ್ಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಡಿ.ಕೆ. ಸೋಮಶೇಖರ್ ಅವರು ಉಚಿತವಾಗಿ ಸ್ವೆಟ್ಟರ್‌ಗಳನ್ನು ವಿತರಿಸಿದರು.

ಶಾಲೆಯಲ್ಲಿ ಆಯೋಜಿಸಿದ್ದ ಶಾಲಾಭಿವೃದ್ಧಿ ಸಮಿತಿ ಸಭೆಯಲ್ಲಿ ಮಕ್ಕಳಿಗೆ ಸ್ವೆಟ್ಟರ್ ವಿತರಿಸಲಾಯಿತು. ಈ ಸಂದರ್ಭ ಸಮಿತಿ ಅಧ್ಯಕ್ಷ ಚಂದ್ರು, ಪ್ರಭಾರಿ ಮುಖ್ಯಶಿಕ್ಷಕಿ ಗೌರಮಣಿ, ಪಂಚಾಯಿತಿ ಅಧ್ಯಕ್ಷ ಪದ್ಮನಾಭ, ಸದಸ್ಯ ಸುಬ್ಬಯ್ಯ, ಪಿಡಿಓ ಲೋಕೇಶ್, ಶಿಕ್ಷಕಿ ಚಂದ್ರಮತಿ ಸೋಮಶೇಖರ್ ಅವರುಗಳು ಉಪಸ್ಥಿತರಿದ್ದರು.