*ಗೋಣಿಕೊಪ್ಪ, ಡಿ. ೨೭: ಒಂಬತ್ತು ಮೀಟರ್ ಅಗಲ ೧೩೦೦ ಮೀ ಉದ್ದದ ರಸ್ತೆ ಡಾಂಬರೀಕರಣಕ್ಕೆ ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿದರು. ಕೈಕೇರಿ ಭಗವತಿ ದೇವಸ್ಥಾನದ ಎದುರು ೨ ಕೋಟಿ ವೆಚ್ಚದಲ್ಲಿ ೨ ಕಿ.ಮೀ ವ್ಯಾಪ್ತಿಯಲ್ಲಿ ಡಾಂಬರೀಕರಣ ನಡೆಯಲಿದ್ದು, ಒಂದು ಮೋರಿ, ಕಾಂಕ್ರೀಟ್ ತಡೆಗೋಡೆ ನಿರ್ಮಾಣವು ಈ ಅನುದಾನದಲ್ಲಿ ನಡೆಯಲಿದೆ ಎಂದು ಶಾಸಕರು ತಿಳಿಸಿದರು.

ಸರ್ಕಾರ ಅಪಘಾತ ನಡೆಯುವ ವಲಯದಲ್ಲಿ ರಸ್ತೆ ಅಗಲೀಕರಣ ಮತ್ತು ಮೋರಿ, ತಡೆಗೋಡೆ ನಿರ್ಮಾಣಕ್ಕೆ ವಿಶೇಷ ಅನುದಾನವನ್ನು ನೀಡುತ್ತಿದೆ ಎಂದು ಮಾಹಿತಿ ನೀಡಿದರು. ಕಾಮಗಾರಿ ಶೀಘ್ರಗತಿಯಲ್ಲಿ ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ ಶಾಸಕರು ಚೆಸ್ಕಾಂ ಇಂಜಿನಿಯರ್‌ಗೆ ರಸ್ತೆ ಬದಿಯಲ್ಲಿರುವ ಕರೆಂಟ್ ಕಂಬಗಳನ್ನು ತೆರವುಗೊಳಿಸಿ ಬದಲಿ ವಿದ್ಯುತ್ ಸಂಚಾರಕ್ಕೆ ಅವಕಾಶ ಕಲ್ಪಿಸಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಈ ಸಂದರ್ಭ ತಿಳಿಸಿದರು.

ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ಹಾತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಪ್ಪಂಡ ಗಿರಿ ಪೂವಣ್ಣ, ಉಪಾಧ್ಯಕ್ಷೆ ಸುಮಾ, ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ನೆಲ್ಲಿರ ಚಲನ್‌ಕುಮಾರ್, ಗ್ರಾ.ಪಂ ಸದಸ್ಯ ಜಮ್ಮಡ ಲವಬೀಮಯ್ಯ, ಕುಲ್ಲಚಂಡ ಚಿಣ್ಣಪ್ಪ, ಮುರುವಂಡ ಕುಟ್ಟಪ್ಪ, ಮುತ್ತುರಾಜ್, ಕೊಕ್ಕಂಡ ನಮಿತಾ, ವಿಷ್ಮ, ರೇಖಾ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಸಿದ್ದೆಗೌಡ, ಸಹಾಯಕ ಇಂಜಿನಿಯರ್ ಸಣ್ಣುವಂಡ ನವೀನ್, ಗುತ್ತಿಗೆದಾರ ಕೆ.ಯು. ತಿಮ್ಮಯ್ಯ, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧುದೇವಯ್ಯ ಪಾಲ್ಗೊಂಡಿದ್ದರು.