ಮಡಿಕೇರಿ, ಡಿ. ೨೬: ಕಾರ್ಪೊರೇಟ್ ಸಂಸ್ಥೆಗಳು, ಉದ್ಯಮಗಳು ಮತ್ತು ವ್ಯಕ್ತಿಗಳು, ಕಂಪೆನಿ ಕಾಯ್ದೆ-೨೦೧೩ ಷೆಡ್ಯೂಲ್ ೬ ಮತ್ತು ೭ ರಲ್ಲಿನ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಅಡಿಯಲ್ಲಿ ಪಾಲನೆ ಮತ್ತು ರಕ್ಷಣೆ ಅವಶ್ಯವಿರುವ ಮಕ್ಕಳ ಬಗ್ಗೆ ಕಾಳಜಿ ಇರುವ ವ್ಯಕ್ತಿಗಳು ಹಾಗೂ ಉದ್ಯಮಗಳು ಮತ್ತು ಇನ್ನಿತರ ವಲಯಗಳು ಮಕ್ಕಳ ಪಾಲನಾ ಸಂಸ್ಥೆಗಳನ್ನು ದತ್ತು ಪಡೆಯಲು ಯೋಜನೆಗೆ ಸಂಬAಧಪಟ್ಟAತೆ ಆಸಕ್ತ ರಿಂದ ಬೆಂಬಲ ಆಹ್ವಾನಿಸಲಾಗಿದೆ.
ಆಸಕ್ತರು ಕೈಗೆತ್ತಿಕೊಳ್ಳುವ ನಿರ್ದಿಷ್ಟ ಚಟುವಟಿಕೆಗಳು, ಕಾಲಮಿತಿ, ಎರಡು ಕಡೆಯಿಂದ ಕಾರ್ಯನಿರ್ವಹಿಸುವ ತಂಡ ವಿವರಗಳನ್ನು ಒಳಗೊಂಡAತೆ ಸರ್ಕಾರದ ಅನುಮೋದನೆಯೊಡನೆ ಒಂದು ತಿಳುವಳಿಕೆಯ ಸ್ಮರಣಿಕೆಗೆ ಸಹಿ ಮಾಡಬೇಕಿದೆ. ಈ ಸರ್ಕಾರಿ ಬಾಲಕರ ಹಾಗೂ ಬಾಲಕಿಯರ ಬಾಲ ಮಂದಿರದ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯ ಸೌಕರ್ಯಗಳು ಅವಶ್ಯಕತೆ ಇದೆ.
ಎರಡು ಸರ್ಕಾರಿ ಬಾಲ ಮಂದಿರಗಳ ಆವರಣದಲ್ಲಿ ಹೈ ಮಾಸ್ಟ್ ಲೈಟ್, ಸರ್ಕಾರಿ ಬಾಲಕಿಯರ ಬಾಲಮಂದಿರದಲ್ಲಿ ಪೋಷಣೆ ಪಡೆದು ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಇಂಗ್ಲೀಷ್, ಗಣಿತ, ಭೌತಶಾಸ್ತç, ರಸಾಯನಶಾಸ್ತç, ಬೋಧನೆ ಮಾಡಲು ಸಂಸ್ಥೆಗೆ ತರಬೇತಿ ಶಿಕ್ಷಕರು ಅಗತ್ಯ ಇದೆ. ಎರಡು ಸರ್ಕಾರಿ ಬಾಲಮಂದಿರದ ಮಕ್ಕಳ ಉಪಯೋಗಕ್ಕಾಗಿ ೩೦ ಗಣಕಯಂತ್ರ (ಕಂಪ್ಯೂಟರ್) ಅಗತ್ಯ ಇರುತ್ತದೆ. ಹಾಗೂ ಕಂಪ್ಯೂಟರ್ ಶಿಕ್ಷಣ ತರಬೇತಿ ನೀಡಲು ಶಿಕ್ಷಕರ ಅಗತ್ಯ ಇರುತ್ತದೆ. ಎರಡು ಬಾಲಮಂದಿರಗಳಿಗೆ ಪೋಲ್ಡೇಬಲ್ ಬೇಕಿದೆ.
ಬಾಲಮಂದಿರದ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲು ಸುಸಜ್ಜಿತವಾದ ಸಭಾಂಗಣ ಅವಶ್ಯಕತೆ ಇರುತ್ತದೆ. ಸಂಸ್ಥೆಯ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಸಿಎಸ್ಆರ್ ಪ್ರಾಯೋಜಿತ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆ ಆಯೋಜಿಸುವುದು.
ಹಬ್ಬಗಳ ದಿನದಂದು ಸಂಸ್ಥೆಯಲ್ಲಿರುವ ಮಕ್ಕಳಿಗೆ ಹೊಸ ಬಟ್ಟೆ ಹಾಗೂ ಉಡುಗೊರೆಗಳನ್ನು ನೀಡುವುದರ ಮುಖಾಂತರ ಸಿಎಸ್ಆರ್ ಪ್ರಾಯೋಜಕತ್ವದಲ್ಲಿ ಹಬ್ಬಗಳ ಆಚರಣೆ, ಎರಡು ಬಾಲಮಂದಿರದ ಆವರಣದಲ್ಲಿ ಮಕ್ಕಳಿಗಾಗಿ ಉಯ್ಯಾಲೆ, ಜಾರುಬಂಡಿ ಹಾಗೂ ಇತರೆ ಹೊರಾಂಗಣ ಆಟಿಕೆ ಸಾಮಗ್ರಿಗಳ ಅಳವಡಿಕೆ/ ನಿರ್ಮಾಣ ಮಾಡುವುದು. ಬಾಲಮಂದಿರದ ಆವರಣದಲ್ಲಿ ವಾಲಿಬಾಲ್, ಬಾಸ್ಕೆಟ್ಬಾಲ್, ಥ್ರೋಬಾಲ್ ಹೊರಾಂಗಣ ಕ್ರೀಡಾಂಗಣ ನಿರ್ಮಾಣ ಮಾಡುವುದು ಹಾಗೂ ಇದಕ್ಕೆ ಬೇಕಾಗಿರುವ ಕ್ರೀಡಾ ಪರಿಕರಗಳು ಮತ್ತು ಟೇಬಲ್ ಟೆನ್ನಿಸ್ ಪರಿಕರಗಳನ್ನು ಒದಗಿಸುವುದು.
ಈ ಬಾಲಮಂದಿರಗಳಿಗೆ ಅಗತ್ಯ ಸೌಕರ್ಯಗಳಿಗಾಗಿ ಅಡಾಪ್ಟ್ ಹೋಮ್ ಯೋಜನೆಯಡಿ ಆಸಕ್ತರಿಂದ ಬೆಂಬಲ ಆಹ್ವಾನಿಸಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯವರ ಕಾರ್ಯಾಲಯ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕಲ್ಯಾಣ ಮಂಟಪದ ಮುಂಭಾಗ, ಓಂಕಾರೇಶ್ವರ ದೇವಸ್ಥಾನ ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ-೫೭೧೨೦೧ ದೂ.ಸಂ.೦೮೨೭೨ ೨೨೮೮೦೦ ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ತಿಳಿಸಿದ್ದಾರೆ.