ನಾಪೋಕ್ಲು, ಡಿ. ೨೬: ಮಡಿಕೇರಿ ತಾಲೂಕಿನ ೧೪ ಗ್ರಮ ಪಂಚಾಯಿತಿಯಲ್ಲಿ ಸಂಚಾರಿಸುವ ಯೋಧ ನಮನಂ ಶೃದ್ಧಾಂಜಲಿ ರಥಯಾತ್ರೆಗೆ ನಾಪೋಕ್ಲುವಿನಲ್ಲಿ ಭವ್ಯ ಸ್ವಾಗತವನ್ನು ನೀಡಲಾಯಿತು. ಈ ಸಂದರ್ಭ ಮಾಜಿ ಸೇನಾಧಿಕಾರಿ ಕೊಂಡಿರ ನಾಣಯ್ಯ, ಬಿ.ಜೆ.ಪಿ. ಶಕ್ತಿ ಕೇಂದ್ರದ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಗ್ರಾ.ಪಂ. ಸದಸ್ಯ ಶಿವಚಾಳಿಯಂಡ ಜಗದೀಶ್, ಕಿಶೋರ್ ಬೋಪಣ್ಣ, ಚಿಯಕಪೂವಂಡ ಸುರಿ, ಚೋಕಿರ ಸಜೀತ್, ಬಿದ್ದಾಟಂಡ ವಿವೇಕ್, ಡಿಕ್ಕಾ ಮುತ್ತಣ್ಣ, ಪುಟ್ಟಣ್ಣ ಮತ್ತಿತರರು ಇದ್ದರು.