ಮಡಿಕೇರಿ, ಡಿ. ೨೬: ರಾಜ್ಯ ಸರಕಾರವು ಇದೀಗ ಹೊಸದಾಗಿ ಅಭಿವೃದ್ಧಿ ಪಡಿಸಿರುವ ಫಾರ್ಮರ್ಸ್ ರಿಜಿಸ್ಟೆçÃಷನ್ ಅಂಡ್ ಯುನಿಫೈಡ್ ಬೆನಿಫಿಷಿಯರಿ ಇನ್‌ಫಾರ್ಮೇಷನ್ ಸಿಸ್ಟಮ್ (ಈಖUIಖಿS) ತಂತ್ರಾAಶ ವನ್ನು ಬಳಸಿ ರೈತರಿಗೆ ಕೃಷಿ ಸಂಬAಧಿತವಾದ ಸಾಲ ವಿತರಿಸಲು ತೊಂದರೆಯನ್ನು ಎದುರಿಸುವಂತಾ ಗಿದೆ. ಈ ಸಮಸ್ಯೆಯ ಕಾರಣದಿಂದಾಗಿ ಡಿಸಿಸಿ ಬ್ಯಾಂಕ್ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಸಮರ್ಪಕವಾಗಿ ರೈತರಿಗೆ ಕೃಷಿ ಸಂಬAಧಿತ ಸಾಲ ವಿತರಿಸಲು ಅಡ್ಡಿಯಾಗುತ್ತಿದೆ. ಈ ಬಗ್ಗೆ ಗಮನ ಹರಿಸಿ ಇದನ್ನು ಸರಿಪಡಿಸಲು ಕ್ರಮಕೈಗೊಳ್ಳಬೇಕೆಂದು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮನವಿ ಮಾಡಿದೆ. ಈ ಬಗ್ಗೆ ಬ್ಯಾಂಕ್‌ನ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಅವರು ರಾಜ್ಯದ ಸಹಕಾರ ಸಚಿವರು ಸಹಕಾರ ಸಂಘಗಳ ನಿಬಂಧಕರು ಹಾಗೂ ಶಾಸಕರಲ್ಲಿ ಮನವಿ ಸಲ್ಲಿಸಿದ್ದಾರೆ.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು, ಡಿಸಿಸಿ ಬ್ಯಾಂಕ್‌ಗಳು ಸೇರಿದಂತೆ ಎಲ್ಲಾ ಹಣಕಾಸು ಸಂಸ್ಥೆಗಳು ಈಖUIಖಿS ತಂತ್ರಾAಶದಲ್ಲಿ ರೈತರ ವಿಶಿಷ್ಟ ಗುರುತಿನ ಸಂಖ್ಯೆಯೊAದಿಗೆ ದಾಖಲಿಸಿರುವ ರೈತರ ವೈಯಕ್ತಿಕ ವಿವರಗಳ ಜತೆಗೆ ಭೂ ವಿವರಗಳನ್ನೊಳಗೊಂಡ ರೈತರ ದತ್ತಾಂಶವನ್ನು ಬಳಸಿ ಎಲ್ಲಾ ರೀತಿಯ ಕೃಷಿ ಸಾಲಗಳನ್ನು ವಿತರಿಸುವಂತೆ ಸರಕಾರವು ಆದೇಶಿಸಿದೆ. ದಿನಾಂಕ: ೧.೧೧.೨೦೨೧ ರಿಂದ ಅನ್ವಯವಾಗುವಂತೆ ಕಡ್ಡಾಯವಾಗಿ ಸದರಿ ಸಂಯೋಜನೆಗೊಳಿಸಲಾದ ತಂತ್ರಾAಶದಿAದ ದಸ್ತಾವೇಜನ್ನು ಫೈಲಿಂಗ್ ಮಾಡಲು ಸೂಚಿಸಲಾಗಿದೆ. ಈ ಹಂತದಲ್ಲಿ ಈಖUIಖಿS ತಂತ್ರಾAಶದಲ್ಲಿನ ತಾಂತ್ರಿಕ ದೋಷದಿಂದಾಗಿ ಡಿಸಿಸಿ ಬ್ಯಾಂಕ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ರೈತರು ಸಾಕಷ್ಟ ತೊಂದರೆಗಳನ್ನು ಅನುಭವಿಸುವಂತಾ ಗಿದೆ. ಕಳೆದ ಎರಡು ತಿಂಗಳಿನಿAದ ಸಕಾಲದಲ್ಲಿ ರೈತರಿಗೆ ಸಾಲ ವಿತರಣೆ ಮಾಡಲು ಸಾಧ್ಯವಾಗಿರುವುದಿಲ್ಲ ಎಂದು ಬಾಂಡ್ ಗಣಪತಿ ಅವರು ಸಮಸ್ಯೆಗಳ ಕುರಿತಾಗಿ ಗಮನ ಸೆಳೆದಿದ್ದಾರೆ.

ಈಖUIಖಿS ತಂತ್ರಾAಶದಲ್ಲಿ ಎದುರಾಗುತ್ತಿರುವ ತಾಂತ್ರಿಕ ದೋಷಗಳು

ರೈತರ ಆಧಾರ್ ಸಂಖ್ಯೆಯ ಆಧಾರದಲ್ಲಿ ರೈತರ ವಿಶಿಷ್ಟ ಗುರುತಿನ ಸಂಖ್ಯೆ (ಈIಆ) ಯನ್ನು ಪಡೆದು - ಪಡೆಯಲಿರುವ ಸಾಲಕ್ಕೆ ಪಹಣಿಯಲ್ಲಿ ಋಣವನ್ನು ದಾಖಲಿಸಲು ಸಾಲದ ಮಾಹಿತಿ ಅಪ್‌ಲೋಡ್ ಮಾಡಲಾದ ಸಂದರ್ಭದಲ್ಲಿ ‘‘Sಖಔ ಟಿoಣ mಚಿಠಿಠಿeಜ’’ ಎಂಬುದಾಗಿ ತಂತ್ರಾAಶದಲ್ಲಿ ತೋರುತ್ತಿರುವುದರಿಂದ ಸಾಲ ವಿತರಣೆ ಸಂಬAಧ ಮುಂದಿನ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ.

ಈಖUIಖಿS ತಂತ್ರಾAಶದಲ್ಲಿ ಸಂಬAಧಿಸಿದ ರೈತರ ವಿಶಿಷ್ಟ ಗುರುತಿನ ಸಂಖ್ಯೆಯಡಿ ದಾಖಲಾಗುತ್ತಿರುವ ರೈತರ ಎಲ್ಲಾ ಪಹಣಿಯ ಸರ್ವೆ ನಂಬರ್‌ಗಳಿಗೆ ಎದುರಾಗಿ ಎಕ್ರೆ ಮತ್ತು ಸೆಂಟ್ಸ್ಗಳನ್ನು ನಿಗದಿತ ಬಾಕ್ಸ್ಗಳಲ್ಲಿ ಬ್ಯಾಂಕ್ ಮತ್ತು ಸಹಕಾರ ಸಂಘಗಳ ಹಂತದಲ್ಲಿ ನಿರ್ದಿಷ್ಟವಾಗಿ ಪೂರ್ಣ ಪ್ರಮಾಣದಲ್ಲಿ ದಾಖಲೆ ಮಾಡಿದ್ದರೂ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಪೂರ್ಣ ಮಾಹಿತಿ ದಾಖಲಾಗಿರುವುದಿಲ್ಲವೆಂದು ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ರೈತರ ಸಾಲದ ಋಣವನ್ನು ಪಹಣಿಯಲ್ಲಿ ನಮೂನೆ -೩ / ಅಡಮಾನವನ್ನು ಸೃಜಿಸಲು ಸಾಧ್ಯವಾಗುತ್ತಿಲ್ಲವೆಂದು ತಿಳಿಸುತ್ತಿದ್ದು, ಇದರಿಂದಾಗಿ ಸಾಲ ವಿತರಣೆಯ ಮುಂದಿನ ಹಂತಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ.

ಈಖUIಖಿS ತಂತ್ರಾAಶದಲ್ಲಿ ಅಪ್‌ಲೋಡ್ ಮಾಡಲಾದ ರೈತರ ಸಾಲದ ಮಾಹಿತಿಯನ್ನಾಧರಿಸಿ ಉಪನೋಂದಣಾಧಿಕಾರಿಯವರ ಕಚೇರಿಯಲ್ಲಿ ಪಹಣಿಯಲ್ಲಿನ ಋಣವು ದಾಖಲಾಗಿರುವ ಬಗ್ಗೆ ಸಾಲ ಬಿಡುಗಡೆ ಪೂರ್ವದಲ್ಲಿ ಬ್ಯಾಂಕಿನ ಮತ್ತು ಸಹಕಾರ ಸಂಘಗಳ ಹಂತದಲ್ಲಿ ಋಣ ದಾಖಲಾಗಿರುವ ಅರ್ಜಿದಾರರ ಸ್ಥಿತಿಯನ್ನು (ಂಠಿಠಿಟiಛಿಚಿಣioಟಿ Sಣಚಿಣus) ಅರಿಯಲು ಸಾಧ್ಯವಾಗದೇ ಸಾಲ ವಿತರಣೆ ಕಷ್ಟ ಸಾಧ್ಯವಾಗುತ್ತಿದೆ.

ಜಿಲ್ಲೆಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಪೊನ್ನಂಪೇಟೆ ಮತ್ತು ಕುಶಾಲನಗರ

(ಮೊದಲ ಪುಟದಿಂದ) ತಾಲೂಕುಗಳಿಗೆ ಸಂಬAಧಿಸಿದ ರೈತರ ಭೂದಾಖಲೆಗಳು ಸಂಬAಧಿಸಿದ ತಾಲೂಕು ನೋಂದಣಾಧಿಕಾರಿಗಳ ಕಚೇರಿಯ ದಾಖಲಾತಿಗಳಲ್ಲಿ ಒಳಪಡದೇ ಇರುವುದರಿಂದ ಸದರಿ ರೈತರ ಮಾಹಿತಿಯನ್ನು ಈಖUIಖಿS ತಂತ್ರಾAಶದಲ್ಲಿ ಅಪ್‌ಲೋಡ್ ಮಾಡಲಾದ ಸಂದರ್ಭದಲ್ಲಿ ‘‘Sಖಔ ಟಿoಣ mಚಿಠಿಠಿeಜ’’ ಎಂಬುದಾಗಿ ತಂತ್ರಾAಶದಲ್ಲಿ ತೋರುತ್ತಿರುವುದರಿಂದ ಈ ವ್ಯಾಪ್ತಿಯ ರೈತರಿಗೆ ಸಾಲ ವಿತರಣೆ ಮಾಡಲು ಸಾಧ್ಯವಾಗದೇ ಬವಣೆ ಪಡುವಂತಾಗಿರುತ್ತದೆ. ಈ ಹಿನ್ನೆಲೆಯಲ್ಲಿ ನೂತನ ತಾಲೂಕುಗಳಿಗೆ ಸಂಬAಧಿಸಿದ ವ್ಯಾಪ್ತಿಯ ಗ್ರಾಮಗಳ ರೈತರ ಭೂದಾಖಲೆಗಳನ್ನು ಕೂಡಲೇ ಸಂಬAಧಿಸಿದ ನೋಂದಣಾಧಿಕಾರಿಗಳ ದಾಖಲೆಗಳಲ್ಲಿ ಒಳಪಡಿಸಲು ಕ್ರಮವಹಿಸಬೇಕಾಗಿರುತ್ತದೆ.

ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿಯವರು ನೋಂದಣಿ ಮಹಾ ಪರಿವೀಕ್ಷಕರು ಹಾಗೂ ಮುದ್ರಾಂಕ ಆಯುಕ್ತರಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಡಿಸಿಸಿ ಬ್ಯಾಂಕಿನ ಶಾಖೆಗಳಿಂದ ಫಾರಂ-೩ ಮತ್ತು ಡಿಕ್ಲರೇಷನನ್ನು ಭೌತಿಕವಾಗಿ ಸಲ್ಲಿಸಲು ದಿನಾಂಕ ೩೧.೧೨.೨೦೨೧ರವರೆಗೆ ಕಾಲಮಿತಿಯನ್ನು ವಿಸ್ತರಿಸಿದ್ದರೂ ಕೂಡ ಉಪನೋಂದಣಾಧಿಕಾರಿಯವರ ಕಚೇರಿಯಲ್ಲಿ ಭೌತಿಕ ಅರ್ಜಿಗಳನ್ನು ಸ್ವೀಕರಿಸಲು ಒಪ್ಪುತ್ತಿಲ್ಲ.

ಮೇಲ್ಕಂಡ ವಸ್ತುಸ್ಥಿತಿಯ ಹಿನ್ನೆಲೆಯಲ್ಲಿ ರೈತರಿಗೆ ನಿಗದಿತ ಕಾಲಮಿತಿಯೊಳಗೆ ಸಾಲ ವಿತರಣೆ ಮಾಡಲು ಅನುಕೂಲವಾಗುವಂತೆ ಅಡಮಾನ ಮತ್ತು ಫಾರಂ-೩ ಋಣವನ್ನು ಸೃಜಿಸಲು ಉಪನೋಂದಣಾಧಿಕಾರಿಗಳ ಕಚೇರಿಗಳಿಗೆ ಭೌತಿಕವಾಗಿ ಅರ್ಜಿ ಸ್ವೀಕರಿಸಿ ಋಣವನ್ನು ದಾಖಲಿಸುವ ಕಾಲಾವಕಾಶವನ್ನು ಮಾರ್ಚ್ ೨೦೨೨ರವರೆಗೆ ವಿಸ್ತರಿಸುವಂತೆ ಹಾಗೂ ಸಮಸ್ಯೆ ಸರಿಪಡಿಸುವಂತೆ ಡಿಸಿಸಿ ಬ್ಯಾಂಕ್ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಸಕಾಲದಲ್ಲಿ ಜಿಲ್ಲೆಯ ರೈತರಿಗೆ ಸಾಲ ವಿತರಣೆಯನ್ನು ಸುಗಮವಾಗಿ ಕೈಗೊಳ್ಳಲು ಅವಕಾಶವನ್ನು ಕಲ್ಪಿಸಿಕೊಡುವಂತೆ ಬಾಂಡ್ ಗಣಪತಿ ಅವರು ಮನವಿಯಲ್ಲಿ ವಿವರಿಸಿದ್ದಾರೆ.