ವೀರಾಜಪೇಟೆ, ಡಿ. ೨೬: ಕೇರಳದ ಬೈತೂರು ದೇವರ ವಾರ್ಷಿ ಕೋತ್ಸವಕ್ಕೆ ಕೊಡಗಿನ ಭಕ್ತರನ್ನು ಆಹ್ವಾನಿಸಲು ಬೈತೂರು ದೇವಾಲಯ ದಿಂದ ಕೋಮರತಚ್ಚನ್ ತಾ. ೩೦ ರಿಂದ ಜನವರಿ ೯ ರವರಗೆ ಕೊಡಗಿನ ವಿವಿಧ ಕಡೆಗೆ ಭೇಟಿ ನೀಡಲಿದ್ದಾರೆ ಎಂದು ತಕ್ಕರಾದ ಪುಗೇರ ಪೊನ್ನಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕೋಮರತಚ್ಚನ್ ಡಿ. ೩೦ ರಂದು ಬೈತೂರಿನಿಂದ ಹೆಗ್ಗಳ ಭಗವತಿ ಅಯ್ಯಪ್ಪ ದೇವಾಲಯಕ್ಕೆ ಆಗಮಿಸಿ ಅಂದು ಅಲ್ಲಿ ವಾಸ್ತವ್ಯ. ೩೧ ರಂದು ಭಕ್ತರಿಗೆ ಆಶೀರ್ವಾದ ನೀಡಿ , ಬಳಿಕ ಪುಗ್ಗೇರ ನಂದಾ ಗಣಪತಿ ಮನೆಗೆ ತೆರಳಲಿದೆ. ಸಂಜೆ ಕೊಳವಂಡ ಐನ್ ಮನೆಗೆ ತೆರಲಿ, ಅಂದು ರಾತ್ರಿ ಸ್ಥಳಿಯ ಈಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಕೋಮರತಚ್ಚನ್ ಅಲ್ಲಿ ತಂಗಲಿದ್ದಾರೆ.
ಜ ೧ ರಂದು ಪೂರ್ವಾಹ್ನ ದೇವಣಗೇರಿ ಮುಕ್ಕಾಟಿರ ಐನ್‌ಮನೆಗೆ ಭೇಟಿ ನೀಡಿ ಈಶ್ವರ ದೇವಾಲಯದಲ್ಲಿ ಪೂಜೆಯ ಬಳಿಕ ವೀರಾಜಪೇಟೆ, ಡಿ. ೨೬: ಕೇರಳದ ಬೈತೂರು ದೇವರ ವಾರ್ಷಿ ಕೋತ್ಸವಕ್ಕೆ ಕೊಡಗಿನ ಭಕ್ತರನ್ನು ಆಹ್ವಾನಿಸಲು ಬೈತೂರು ದೇವಾಲಯ ದಿಂದ ಕೋಮರತಚ್ಚನ್ ತಾ. ೩೦ ರಿಂದ ಜನವರಿ ೯ ರವರಗೆ ಕೊಡಗಿನ ವಿವಿಧ ಕಡೆಗೆ ಭೇಟಿ ನೀಡಲಿದ್ದಾರೆ ಎಂದು ತಕ್ಕರಾದ ಪುಗೇರ ಪೊನ್ನಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕೋಮರತಚ್ಚನ್ ಡಿ. ೩೦ ರಂದು ಬೈತೂರಿನಿಂದ ಹೆಗ್ಗಳ ಭಗವತಿ ಅಯ್ಯಪ್ಪ ದೇವಾಲಯಕ್ಕೆ ಆಗಮಿಸಿ ಅಂದು ಅಲ್ಲಿ ವಾಸ್ತವ್ಯ. ೩೧ ರಂದು ಭಕ್ತರಿಗೆ ಆಶೀರ್ವಾದ ನೀಡಿ , ಬಳಿಕ ಪುಗ್ಗೇರ ನಂದಾ ಗಣಪತಿ ಮನೆಗೆ ತೆರಳಲಿದೆ. ಸಂಜೆ ಕೊಳವಂಡ ಐನ್ ಮನೆಗೆ ತೆರಲಿ, ಅಂದು ರಾತ್ರಿ ಸ್ಥಳಿಯ ಈಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಕೋಮರತಚ್ಚನ್ ಅಲ್ಲಿ ತಂಗಲಿದ್ದಾರೆ.
ಜ ೧ ರಂದು ಪೂರ್ವಾಹ್ನ ದೇವಣಗೇರಿ ಮುಕ್ಕಾಟಿರ ಐನ್‌ಮನೆಗೆ ಭೇಟಿ ನೀಡಿ ಈಶ್ವರ ದೇವಾಲಯದಲ್ಲಿ ಪೂಜೆಯ ಬಳಿಕ ಜ ೪ ರಂದು ಮಾತಂಡ ಐನ್ ಮನೆಗೆ ಭೇಟಿ ನೀಡಿ ನಂತರ ಬಲ್ಲಚಂಡ ಐನ್ ಮನೆಗೆ ಭೇಟಿ ನೀಡಲಿದ್ದು ಬಳಿಕ ಅರಮೇರಿ ಗ್ರಾಮಕ್ಕೆ ತೆರಳಿ ಭಗವತಿ ದೇವಾಲಯದಲ್ಲಿ ಪೂಜೆ ನಡೆಸಿ ಅಲ್ಲಿಯೇ ವಾಸ್ತವ್ಯ. ಜ ೫ ರಂದು ಬೆಳಿಗ್ಗೆ ಪಾಲೇಕಂಡ ಐನ್ ಮನೆಗೆ ಭೇಟಿ ನೀಡಿ ನಂತರ ರಾತ್ರಿ ಕೆದಮುಳ್ಳೂರು ಈಶ್ವರ ದೇವಾಲಯದಲ್ಲಿ ವಾಸ್ತವ್ಯ. ಜ ೬ ರಂದು ಕೆದಮುಳ್ಳೂರು ಈಶ್ವರ ದೇವಾಲಯದಲ್ಲಿ ಬೆಳಿಗ್ಗೆ ಪೂಜೆ ಸಲ್ಲಿಸಿ ನಂತರ ಕದನೂರು ಗ್ರಾಮದ ಭಗವತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಬಳಿಕ ಮಗ್ಗುಲದ ಚೋಕಂಡ ಐನ್‌ಮನೆಗೆ ಭೇಟಿ ನೀಡಿ ಅಯ್ಯಪ್ಪ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪುಲಿಯಂಡ ಐನ್ ಮನೆಯಲ್ಲಿ ವಾಸ್ತವ್ಯ.
ಜ. ೭ ರಂದು ಕೊಡಂದೇರ ಐನ್ ಮನೆಗೆ ಭೇಟಿ ಅಲ್ಲಿ ವಾಸ್ತವ್ಯ ಜ ೮ ರಂದು ಬಿಟ್ಟಂಗಾಲ ಗ್ರಾಮದ ಕಾಮೇಯಂಡ ಐನ್ ಮನೆಗೆ ಭೇಟಿ ನೀಡಿದ ಬಳಿಕ ಮಾಚೇಟಿರ ಐನ್ ಮನೆಗೆ ತೆರಳಿ ಅಲ್ಲಿ ವಾಸ್ತವ್ಯ. ಜ ೯ ರಂದು ಬಾಳುಗೋಡಿನ ಭದ್ರಕಾಳಿ ದೇವಾಲಯದಲ್ಲಿ ಪೂಜೆ ಬಳಿಕ ಮೂರೀರ ಐನ್ ಮನೆಗೆ ಭೇಟಿ ನೀಡಿ ಕೊನೆಯದಾಗಿ ಅಮ್ಮಣಕುಟ್ಟಂಡ ಐನ್ ಮನೆಗೆ ಭೇಟಿ ನೀಡಿ ಬೈತೂರು ದೇವಾಲಯಕ್ಕೆ ತೆರಳಿದ್ದಾರೆ. ಹೆಚ್ಚಿನ ಮಾಹಿತಿಗೆ ೯೬೬೩೯೭೭೩೦೪ ನ್ನು ಸಂರ್ಪಕಿಸುವAತೆ ಅವರು ಹೇಳಿದರು. ಗೋಷ್ಠಿಯಲ್ಲಿ ಟ್ರಸ್ಟಿ ಮಾಳೇಟಿರ ರತ್ನಸುಬ್ಬಯ್ಯ ,ಪುಗ್ಗೇರ ನಂದ ಸುಬ್ಬಯ್ಯ, ಪುಗ್ಗೇರ ರಂಜಿ ದೇವಯ್ಯ, ಚೇದಂಡ ಶಿವಕುಮಾರ್ ಉಪಸ್ಥಿತರಿದ್ದರು.